Friday, October 20, 2023

ಇರ್ವತ್ತೂರು ಪದವು ಶ್ರೀ ಶಾರದೋತ್ಸವ ಸೇವಾ ಸಮಿತಿಯ 7ನೇ ವರ್ಷದ ಶ್ರೀ ಶಾರದೋತ್ಸವ

Must read

ಬಂಟ್ವಾಳ: ಬಂಟ್ವಾಳ ತಾ. ಇರ್ವತ್ತೂರುಪದವು ಶ್ರೀ ಶಾರದೋತ್ಸವ ಸೇವಾ ಸಮಿತಿ ವತಿಯಿಂದ 7ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವ ಅ. 20ರಂದು ಮೂಡುಪಡುಕೋಡಿ ಶಾಲಾ ವಠಾರದಲ್ಲಿ ನಡೆಯಿತು.

ಬೆಳಗ್ಗೆ ಪ್ರತಿಷ್ಠೆ , ಭಜನೆ, ಶಾಲಾ ಮಕ್ಕಳಿಂದ ನೃತ್ಯ, ಬಳಿಕ ಧಾರ್ಮಿಕ ಸಭೆ ನಡೆಯಿತು. ಶ್ರೀ ಕ್ಷೇತ್ರ ಕರಿಂಜೆಯ ಶ್ರೀ ಮುಕ್ತಾನಂದ ಸ್ವಾಮೀಜಿ ಅವರು ಆಶೀರ್ವಚನ ನೀಡಿ ಮಾತನಾಡಿ, ವಿದ್ಯಾ ದೇಗುಲದಲ್ಲಿ ಶಾರದಾ ಪೂಜೆ ಕೈಗೊಂಡರೆ ಶಾಲೆಯೊಂದಿಗೆ ಧಾರ್ಮಿಕ ಸಂಸ್ಕಾರಗಳು ಬೆಳಗುತ್ತದೆ. ವಿದ್ಯೆ ಕಲಿಸಿದ ಸಾಧಕ ಗುರುಗಳನ್ನು ಗುರುತಿಸಿ ಗೌರವಿಸುವುದು ಉತ್ತಮ ಕಾರ್ಯ. ಶಾರದೋತ್ಸವ ಮೂಲಕ ಆರೋಗ್ಯ ಸೇವೆಯನ್ನೂ ನೀಡುತ್ತಿರುವ ಸಮಿತಿಯ ಸಮಾಜ ಸೇವೆ ಸಾರ್ಥಕ ಸೇವೆಯಾಗಿದೆ ಎಂದು ಹೇಳಿದರು.

ಹೊಕ್ಕಾಡಿಗೋಳಿ ಕಂಬಳ ಸಮಿತಿ ಅಧ್ಯಕ್ಷ ಸಂಜೀವ ಶೆಟ್ಟಿ ಗುಂಡ್ಯಾರು ಅವರು ಸಭಾಧ್ಯಕ್ಷತೆ ವಹಿಸಿದ್ದರು. ತಂತ್ರಿಗಳಾದ ನಡ್ವಂತಾಡಿ ವೇದವ್ಯಾಸ ಪಾಮಗಣ್ಣಾಯ ಅವರು ಧಾರ್ಮಿಕ ಉಪನ್ಯಾಸ ನೀಡಿದರು. ಸಮಿತಿ ಅಧ್ಯಕ್ಷ ಡಾ.ರಾಮಕೃಷ್ಣ ಎಸ್. ಅವರು ಮಾತನಾಡಿ, ಈ ಪರಿಸರಕ್ಕೆ ಆಂಬ್ಯುಲೆನ್ಸ್‌ನ ಆವಶ್ಯಕತೆ ಇದ್ದು,ಈ ನಿಟ್ಟಿನಲ್ಲಿ ದಾನಿಗಳ ಸಹಕಾರದಿಂದ ಆಂಬ್ಯುಲೆನ್ಸ್ ಲೋಕಾರ್ಪಣೆಗೊಳಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ನಿವೃತ್ತ ಮುಖ್ಯ ಶಿಕ್ಷಕ, ರಾಜ್ಯ ಮಟ್ಟದ ತರಬೇತುದಾರ ಬಿ.ರಾಮಚಂದ್ರ ರಾವ್ ಅವರಿಗೆ ಶ್ರೀ ಶಾರದಾ ತಿಲಕ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಸಾಧಕರಾದ ಆಪ್ತಿ ಪೂಜಾರಿ,ಲೀಶಾ ಎನ್.ಶೆಟ್ಟಿ ಬೆದ್ರಮಾರ್,ನಿಶಾಂತ್ ಪೂಜಾರಿ ಕಲಾಬಾಗಿಲು, ಅನನ್ಯಾ ಶೆಟ್ಟಿ ಇರ್ವತ್ತೂರು ಅವರನ್ನು ಸಮ್ಮಾನಿಸಲಾಯಿತು. ಶಾರದಾ ಮಹೋತ್ಸವ ಪ್ರಯುಕ್ತ ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ರೋಟರಿ ಕ್ಲಬ್ ಲೊರೆಟ್ಟೊ ಹಿಲ್ಸ್ ಸೇನಾನಿ ರಾಘವೇಂದ್ರ ಭಟ್ ಹೊಕ್ಕಾಡಿಗೋಳಿ, ನ್ಯಾಯವಾದಿ ಪ್ರಸಾದ್ ರೈ ಬಿ.ಸಿರೋಡ್, ಶಾಲಾ ಮುಖ್ಯ ಶಿಕ್ಷಕಿ ಐರಿನ್ ಮಿರಾಂದ ಅವರು ಶುಭ ಹಾರೈಸಿದರು.ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸುರೇಶ್ ಕೈಯ್ಯಬೆ, ಸಮಿತಿಯ ಕಾರ್ಯಧ್ಯಕ್ಷ ಹರೀಂದ್ರ ಪೈ ನಯನಾಡು, ಪದಾಽಕಾರಿಗಳಾದ ಶೇಖರಪೂಜಾರಿ, ಶ್ರೀನಿವಾಸ ಪೂಜಾರಿ, ಸುಪ್ರಿತ್ ಜೈನ್ ಎಡ್ತೂರುಗುತ್ತು, ಹರೀಶ್ ಪೂಜಾರಿ ಎರ್ಮೆನಾಡು, ಪ್ರಶಾಂತ್ ದೇವಾಡಿಗ, ಮತ್ತಿತರರು ಉಪಸ್ಥಿತರಿದ್ದರು.

ಸಮಿತಿ ಗೌರವಾಧ್ಯಕ್ಷ ರಾಜೀವ ಶೆಟ್ಟಿ ಸ್ವಾಗತಿಸಿದರು, ಕಾರ್ಯದರ್ಶಿ ದಯಾನಂದ ಎಸ್.ಎರ್ಮೆನಾಡು ಪ್ರಸ್ತಾವಿಸಿದರು. ಗಣೇಶ್ ಶೆಟ್ಟಿ ಸೇವಾ ಪ್ರಶಸ್ತಿ ಪತ್ರ ವಾಚಿಸಿ, ವಂದಿಸಿದರು ರಂಗ ಕಲಾವಿದ ಎಚ್ಕೇ ನಯನಾಡು ಕಾರ್ಯಕ್ರಮ ನಿರೂಪಿಸಿದರು.

More articles

Latest article