Monday, October 30, 2023

ಭ್ರಷ್ಟಾಚಾರ ನಿರ್ಮೂಲನೆಯ ಬಗ್ಗೆ ಕಾನೂನು ಅರಿವು ಕಾರ್ಯಕ್ರಮ

Must read

ಬಂಟ್ವಾಳ ನ್ಯಾಯಾಲಯದ ಆವರಣದಲ್ಲಿ ನಡೆದ ಭ್ರಷ್ಟಾಚಾರ ನಿರ್ಮೂಲನೆಯ ಬಗ್ಗೆ ಕಾನೂನು ಅರಿವು ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಧೀಶರಾದ ಶ್ರೀಮತಿ ಭಾಗ್ಯಮ್ಮ ಉದ್ಘಾಟಿಸಿ ಪ್ರಮಾಣವಚನವನ್ನು ಬೋದಿಸಿದರು.

ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ವಕೀಲರ ಸಂಘದ ಉಪಾಧ್ಯಕ್ಷರಾದ ರಾಜೇಶ್ ಬೊಳ್ಳುಕಲ್ಲು ವಹಿಸಿ ಮಾತನಾಡಿದರು , ಮುಖ್ಯ ಅತಿಥಿಯಾಗಿ ಜೆ ಯಂ ಯಫ್ ಸಿ ನ್ಯಾಯಧೀಶರಾದ ಕೃಷ್ಣ ಮೂರ್ತಿ ಹಾಗೂ ಲೋಕಾಯುಕ್ತ ಉಪ ನಿರೀಕ್ಷೆಕರಾದ ಶ್ರೀಮತಿ ಕಲಾವತಿ.ಕೆ ಯವರು ಉಪಸ್ಥಿತರಿದ್ದು ಭ್ರಷ್ಟಾಚಾರ ನಿರ್ಮೂಲನೆಯ ಬಗ್ಗೆ ಕಾನೂನು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ವಕೀಲರ ಸಂಘದ ಮಾಜಿ ಅಧ್ಯಕ್ಷರಾದ ಯಂ ಅಶ್ವಿನಿ ಕುಮಾರ್ ರೈ ಸುರೇಶ ಪೂಜಾರಿ,ಈಶ್ವರ್ ಉಪಾಧ್ಯಯರು, ಹಾಗೂ ಹಿರಿಯ ವಕೀಲರಾದ ರಮೇಶ್ ಉಪಾಧ್ಯಯರು, ವಿನೋದ್ ಕೆ, ಹೇಮಚಂದ್ರ, ವಕೀಲರ ಸಂಘದ ಖಜಾಂಜಿ ನಿರ್ಮಲ ಶೆಟ್ಟಿ, ಸರ್ಕಾರಿ ವಕೀಲರದ ಹರಿಣಿ ಕುಮಾರಿ ಹಾಗೂ ಸರಸ್ವತಿ, ಸತೀಶ್ ಕೆ, ಯಶೋದಾ,ಅಭಿನಯ, ಸಂತೋಷ್ ಲೋಬೊ, ಮೋಹನ್ ಕಡೆಶಿವಲಯ,, ಇತರ ಹಿರಿಯ ಕಿರಿಯ ವಕೀಲರು ನ್ಯಾಯಾಲಯದ ಸಿಬ್ಬಂದಿಗಳು ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು ಕಾರ್ಯಕ್ರಮದಲ್ಲಿ ಅಬ್ದುಲ್ ಜಲಿಲ್ ವಕೀಲರು ಸ್ವಾಗತಿಸಿ. ವಕೀಲರಾದ ನಿತಿನ್ ಕುಮಾರ್ ವಂದಿಸಿ ನಿರೂಪಿಸಿದರು.

More articles

Latest article