Saturday, October 21, 2023

ಶ್ರೀರಾಮ ಪ್ರಥಮ ದರ್ಜೆ ಕಾಲೇಜಿನಲ್ಲಿ ರಕ್ತದಾನ ಶಿಬಿರ

Must read

ಶ್ರೀರಾಮ ಪದವಿ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಮತ್ತು ರೆಡ್ ಕ್ರಾಸ್ ಘಟಕ ಇದರ ಸಹಯೋಗದೊಂದಿಗೆ “ಬೃಹತ್ ರಕ್ತದಾನ ಶಿಬಿರವು” ಕಾಲೇಜಿನ ಸಾಧನಾ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಹಿರಿಯರಾದ ಡಾl ಪ್ರಭಾಕರ ಭಟ್ ಕಲ್ಲಡ್ಕ, ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಸರ್ವಶ್ರೇಷ್ಠ ಜನ್ಮ ಮಾನವ ಜನ್ಮ. ಎಲ್ಲರೂ ಪರರಿಗಾಗಿ ಬದುಕಬೇಕು- ಪರೋಪಕಾರಕ್ಕಾಗಿಯೇ ಈ ಶರೀರ ಎಂಬುದಾಗಿ ಹೇಳಿದರು.

ಕಾಲೇಜಿನಲ್ಲಿ ನಡೆದ 11ನೇ ರಕ್ತದಾನ ಶಿಬಿರವು ಇದಾಗಿದ್ದು,ಬೆಳಿಗ್ಗೆ 10 ಗಂಟೆಗೆ ಇದರ ಉದ್ಘಾಟನಾ ಸಮಾರಂಭ ನಡೆದಿದ್ದು ಕೆ ಎಂ ಸಿ ಹಾಸ್ಪಿಟಲ್ ಮಂಗಳೂರು ಇದರ ರಕ್ತ ನಿಧಿ ಅಧಿಕಾರಿ ಡಾl ದಿನೇಶ್, -ಪಾಂಚಜನ್ಯ ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯರು ತಿಲಕ್ ರಾಜ್ ವಿಟ್ಲ, ಓಂ ಶಕ್ತಿ ಫ್ರೆಂಡ್ಸ್ ನ ಅಧ್ಯಕ್ಷರಾದ ರವಿ ಭಂಡಾರಿ , ಮಣಿಕಂಠ ಭಜನಾ ಮಂದಿರ ಕುದ್ರೆ ಬೆಟ್ಟು ಅಧ್ಯಕ್ಷರಾದ ಲೋಕಾನಂದ್ ಏಳ್ತಿಮಾರ್ , ಆಟೋ ಚಾಲಕ ಸಂಘ ಕಲ್ಲಡ್ಕ ಇದರ ಸದಸ್ಯರಾದ ರವೀಂದ್ರ ಸುದೆಕ್ಕರ್, ಕಾಲೇಜು ಪ್ರಾಂಶುಪಾಲ ಕೃಷ್ಣ ಪ್ರಸಾದ್ ಕಾಯರಕಟ್ಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಂಗಳೂರು KMC ಆಸ್ಪತ್ರೆಯ ವೈದ್ಯಾಧಿಕಾರಿಯಾದ ಡಾ. ದಿನೇಶ್ ರಕ್ತದಾನದ ಮಹತ್ವವನ್ನು ತಿಳಿಸಿದರು. ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಯತಿರಾಜ್ ಪಿ. ,ಸಹ ಯೋಜನಾಧಿಕಾರಿ ದೀಕ್ಷಿತಾ ರೆಡ್ ಕ್ರಾಸ್ ಘಟಕ ದ ನಿರ್ದೇಶಕ ರಾದ ಶ್ರೀದೇವಿ, ಓಂ ಶಕ್ತಿ ಫ್ರೆಂಡ್ಸ್ ಕಲ್ಲಡ್ಕ ದ ಪ್ರಮುಖರಾದ ರತ್ನಾಕರ ಶೆಟ್ಟಿ ಕಲ್ಲಡ್ಕ, ಪಾಂಚಜನ್ಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ನರಿಂಗಾನ,ಕೋಶಾಧಿಕಾರಿ ಜಗದೀಶ್ ಮುಲಾರ್ ಉಪಸ್ಥಿತರಿದ್ದರು.

ಸ್ವಯಂ ಸೇವಕಿ ಶರಣ್ಯ ಪ್ರಾರ್ಥನಾ ಗೀತೆ ಹಾಡಿದರು.ರಾಷ್ಟ್ರೀಯ ಸೇವಾ ಯೋಜನೆ ಯ ನಾಯಕ ಪುನೀತ್ ಸ್ವಾಗತಿಸಿ, ಧನುಷಾ ವಂದಿಸಿ, ರಮ್ಯಾ ನಿರೂಪಿಸಿದರು.

More articles

Latest article