Monday, October 30, 2023

ನ.1.ರಿಂದ ಡಿ.31 ರ ವರೆಗೆ “ನಮ್ಮ ಜಮಾಅತಿನ ನಡೆ, ಮಾದಕ ಮುಕ್ತ ತುಂಬೆಯ ಕಡೆ” ಮಾದಕ ವ್ಯಸನದ ವಿರುದ್ಧ ಜನಜಾಗೃತಿ ಅಭಿಯಾನ

Must read

ಬಂಟ್ವಾಳ: ಮಹಮ್ಮದ್ ಜುಮಾ ಮಸೀದಿ ತುಂಬೆ ಇದರ ನೇತ್ರತ್ವದಲ್ಲಿ MJM ತುಂಬೆ ಮಾದಕ ಮುಕ್ತ ಅಭಿಯಾನ ಸಮಿತಿ ಇದರ ವತಿಯಿಂದ ಮಾಸಕ ವ್ಯಸನ ನಿಲ್ಲಿಸೋಣ ಗೌರವ ಜೀವನಸಾಗಿಸೋಣ ಎಂಬ ಧ್ಯೇಯ ವಾಕ್ಯದಡಿ ” ನಮ್ಮ ಜಮಾಅತಿನ ನಡೆ, ಮಾದಕ ಮುಕ್ತ ತುಂಬೆಯ ಕಡೆ” ಮಾದಕ ವ್ಯಸನದ ವಿರುದ್ಧ ನ.1.ರಿಂದ ಡಿ.31 ರ ವರೆಗೆ ಜನಜಾಗೃತಿ ಅಭಿಯಾನ ನಡೆಯಲಿದೆ ಎಂದು ಮಾದಕ ಮುಕ್ತ ಅಭಿಯಾನ ಸಮಿತಿ ಸಂಚಾಲಕ ಅಬ್ದುಲ್ ಕಬೀರ್ ತಿಳಿಸಿದರು.

ಅವರು ಬಿಸಿರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ವಿಚಾರವನ್ನು ತಿಳಿಸಿದರು.
ನ.3 ರಂದು ತುಂಬೆ ಕುನಿಲ್ ವಿದ್ಯಾಸಂಸ್ಥೆಯಿಂದ ತುಂಬೆ ಜಂಕ್ಷನ್ ವರೆಗೆ ಕಾಲ್ನಡಿಗೆ ಜಾಥ ನಡೆಯಲಿದೆ.
ಅಭಿಯಾನದಲ್ಲಿ ತುಂಬೆ ಗ್ರಾಮದ ಶಿಕ್ಷಣ ಸಂಸ್ಥೆಗಳು, ಸಾಮಾಜಿಕ ಧಾರ್ಮಿಕ ಸಂಘ ಸಂಸ್ಥೆಗಳು ಜಾಥದಲ್ಲಿ ಸೇರಿಕೊಳ್ಳಲಿದ್ದಾರೆ.

ಈಗಾಗಲೇ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಮಾದಕ ಮುಕ್ತ ಅಭಿಯಾನದ ಭಾಗವಾಗಿ ಮಾಹಿತಿ ಶಿಬಿರ, ಕಾರ್ನರ್ ಮೀಟಿಂಗ್ ,ಕೌನ್ಸಿಲಿಂಗ್ ಜನಜಾಗೃತಿ ಕಾರ್ಯಕ್ರಮಗಳ ಮೂಲಕ ಹಾಗೂ ಸಾರ್ವಜನಿಕ ಸಮಾವೇಶವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

ತುಂಬೆ ಗ್ರಾಮ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಜನಸಂಖ್ಯೆ ಹೆಚ್ಚಳವಾಗಿದೆ. ಹಾಗಾಗಿ ಹೊರಜಿಲ್ಲೆಯಿಂದ ಕೂಡ ಇಲ್ಲಿ ವಾಸವಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಾದಕವಸ್ತುಗಳ ಸೇವನೆಯಿಂದ ಸಾರ್ವಜನಿಕವಾಗಿ ಸಮಸ್ಯೆಗಳು ನಡೆದಿದೆ. ಹಾಗಾಗಿ ಮಾದಕ ವ್ಯಸನ ಮುಕ್ತ ಗ್ರಾಮವನ್ನಾಗಿ ಮಾಡುವ ಉದ್ದೇಶದಿಂದ ಈ ಯೋಚನೆ ಮಾಡಿದ್ದೇವೆ ಎಂದು ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ತುಂಬೆ ಮುಹೀದ್ದೀನ್ ಜುಮಾ ಮಸೀದಿ ಅದ್ಯಕ್ಷ ಮಹಮ್ಮದ್ ಇಂಮ್ತಿಯಾಜ್,
ಮಾಧ್ಯಮ ಉಸ್ತುವಾರಿ ಇಲ್ಯಾಸ್ , ಸಾರ್ವಜನಿಕ ಸಂಪರ್ಕಾಧಿಕಾರಿ
ಮಹಮ್ಮದ್ ಇರ್ಪಾನ್ ತುಂಬೆ, ಗ್ರಾ.ಪಂ.ಸದಸ್ಯ ಝಹೂರ್ ಅಹಮದ್ ಉಪಸ್ಥಿತರಿದ್ದರು.

More articles

Latest article