Wednesday, April 17, 2024

ಅ.08 ರಂದು ಕರ್ನಾಟಕ ರಾಜ್ಯ ಕುಲಾಲ-ಕುಂಬಾರರ ಯುವವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ (ರಿ.) ಇದರ ಪದ-ಪ್ರಧಾನ ಸಮಾರಂಭ ಮತ್ತು ಜಿಲ್ಲಾ ಮಟ್ಟದ ಕೆಸರುಗದ್ದೆ ಪಂದ್ಯಾಟ ಹಾಗೂ ನೂತನ ಕಛೇರಿ ಉದ್ಘಾಟನೆ ಕಾರ್ಯಕ್ರಮ

ಕರ್ನಾಟಕ ರಾಜ್ಯ ಕುಲಾಲ-ಕುಂಬಾರರ ಯುವವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ (ರಿ.) ಬಂಟ್ವಾಳ ವಿಧಾನಸಭಾ ಕ್ಷೇತ್ರ ಇದರ 2023-25 ನೇ ಪದ-ಪ್ರಧಾನ ಸಮಾರಂಭ ಮತ್ತು ಜಿಲ್ಲಾ ಮಟ್ಟದ ಕೆಸರುಗದ್ದೆ ಪಂದ್ಯಾಟ ಹಾಗೂ ನೂತನ ಕಛೇಲಿ ಉದ್ಘಾಟನೆ ಕಾರ್ಯಕ್ರಮ ಅ.08 ರಂದು ಸ್ಪರ್ಶಾ ಕಲಾ ಮಂದಿರ, ಬಿ.ಸಿ.ರೋಡ್ ನಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಗೌರವ ಸಲಹೆಗಾರರು ಹಾಗೂ ಸರ್ವ ಸದಸ್ಯರು ಭಾಗಿಯಾಗಲಿದ್ದಾರೆ.

ಬೆಳಗ್ಗೆ ಗಂಟೆ 8.30ಕ್ಕೆ ಆಶೀರ್ವಚನ ಮತ್ತು ದಿವ್ಯ ಉಪಸ್ಥಿತಿ :

ಪರಮಪೂಜ್ಯ ಶ್ರೀ ಶ್ರೀ ಶ್ರೀ ಸತ್ಕರ್ಮ ತಪಸ್ವಿ ಮೋಹನದಾಸ ಪರಮಹಂಸ ಸ್ವಾಮೀಜಿ ಶ್ರೀ ಧಾಮ ಮಾಣಿಲ

ಶ್ರೀ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿ ಶ್ರೀ ವೈಷ್ಣವಿ ಆದಿಶಕ್ತಿ ಕ್ಷೇತ್ರ, ಮುಳಿಯ

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ (ರಿ.) ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷರಾದ ನಿತೀಶ್‌ ಕುಲಾಲ್ ಪಲ್ಲಿಕಂಡ ಅವರು ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ದಕ್ಷಿಣ ಭಾರತ ಕುಂಬಾರರ ಫೆಡರೇಶನ್ ಅಧ್ಯಕ್ಷರಾದ ಡಾ. ಶಿವಕುಮಾರ್‌ ಚೌಡಶೆಟ್ಟಿ, ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆಯ ಸ್ಥಾಪಕ ಅಧ್ಯಕ್ಷರಾದ ಡಾ. ಅಣ್ಣಯ್ಯ ಕುಲಾಲ್‌ ಉಲ್ತೂರು, ನೇಪಾಳದ ಉಪರಾಷ್ಟ್ರಪತಿಗಳ ವಿಶೇಷ ಸಾಂಸ್ಕೃತಿಕ ಸಲಹೆಗಾರರು ಡಾ.ಎಂ.ಪಿ. ವರ್ಷ, ಬೆಂಗಳೂರು ಶ್ರೀ ಧಾಮ ಪಾಲಿಮರ್ಸ್ ಮಾಲಕರು ಕೇಶವ ಬಾಳೆಹಿತ್ಲು, ಬೆಂಗಳೂರು ಶಿಲ್ಪಾ ಪ್ರೊಡಕ್ಟ್ಸ್ ಮಾಲಕರು ರಮೇಶ್ ಬಾಳೆಹಿತ್ಲು, ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ (ರಿ.) ರಾಜ್ಯಧ್ಯಕ್ಷರು ಗಂಗಾಧರ್ ಬಂಜನ್‌, ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ (ರಿ.) ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ವಿಭಾಗೀಯ ಕಾರ್ಯದರ್ಶಿ ಲ|ಅನಿಲ್ ದಾಸ್, ಕೋಲಾರ ಕುಲಾಲ ಕುಂಬಾರರ ಯುವ ವೇದಿಕೆ ರಾಜ್ಯ ಯುವ ಮುಖಂಡರಾದ ಡಾ. ನಾಗರಾಜ್ ಮಾಲೂರು, ಯುವ ವೇದಿಕೆ ಬೆಂಗಳೂರು ವಲಯ ಅಧ್ಯಕ್ಷರು ಉದ್ಯಮಿ  ಭರತ್‌ ಸೌಂದರ್ಯ, ಯುವ ವೇದಿಕೆ ಬೆಂಗಳೂರು ವಲಯ ಸಂಚಾಲಕರು ರವಿ ಕುಲಾಲ್, ಶಿವಮೊಗ್ಗ ಕುಂಬಾರರ ಸಂಘದ ಜಿಲ್ಲಾಧ್ಯಕ್ಷರು ಪದ್ಮನಾಭ, ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ (ರಿ.) ದ.ಕ ಜಿಲ್ಲಾಧ್ಯಕ್ಷರು ಸುಕುಮಾರ್ ಬಂಟ್ವಾಳ, ವೇಣೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾಗೇಶ್‌ ಮರ್ತಾಜೆ, ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ  ಸಂಘ (ನಿ.) ಪೆರ್ಡೂರು, ಉಡುಪಿ ಜಿಲ್ಲೆಯ ಅಧ್ಯಕ್ಷರು  ಸಂತೋಷ್ ಕುಲಾಲ್‌ ಪಕ್ಕಾಲು, ಕೊಡಗು ಜಿಲ್ಲಾ ಕುಲಾಲ-ಕುಂಬಾರ ಮಡಿಕೆ ತಯಾರಿಕಾ ಸಂಘದ ಅಧ್ಯಕ್ಷರು ಎಂ.ಡಿ.ನೋಣಯ್ಯ, ಕುಂಬಾರರ ಯುವ ನಾಯಕರು, ಹಾಸನ ತಿಮ್ಮಪ್ಪ ಶೆಟ್ಟಿ, ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ (ರಿ.) ದ.ಕ ಜಿಲ್ಲಾ ಕಾರ್ಯದರ್ಶಿ ಲೊಕೇಶ್ ಗುರುವಾಯನಕೆರೆ ಭಾಗವಹಿಸಲಿದ್ದಾರೆ.

ಸರ್ವಜ್ಞ ಪ್ರಶಸ್ತಿ ಪುರಸ್ಕೃತರು :

ಸಾಮಾಜಿಕ ಕ್ಷೇತ್ರ : ಸದಾಶಿವ ಬಂಗೇರ ವಗ್ಗ

ಕುಂಬಾರಿಕೆ ಕ್ಷೇತ್ರ : ಮುತ್ತಪ್ಪ ಮೂಲ್ಯ ನೆಲ್ಲಿ

ಧಾರ್ಮಿಕ ಕ್ಷೇತ್ರ : ನಾಗೇಶ್ ಕುಲಾಲ್ ಸೌತಡ್ಕ ಫರ್ನಿಚರ್, ಬಂಟ್ವಾಳ

ಉದ್ಯಮ ರಂಗ : ತೇಜಸ್ವಿರಾಜ್

ಸಂಘಟನೆ : ಟಿ. ಶೇಷಪ್ಪ ಮೂಲ್ಯ

ಪ್ರೈಜ್ ಕತ್ತರಿಸುವುದು : 5 ವರ್ಷದ ಒಳಗಿನ ಮಕ್ಕಳಿಗೆ

1 ರಿಂದ 4ನೇ ತರಗತಿಯ ಹುಡುಗಿಯರಿಗೆ ಓಟ 50 ಮೀ., ಮುಟ್ಟಂದಿ ಮುಟ್ಟಾಳೆ, ಕ್ಯಾಚಿಂಗ್‌ ದ ಐಟಂ ಹಾಗೂ ಹುಡುಗರಿಗೆ ಓಟ 50 ಮೀ., ಮುಟ್ಟಂದಿ ಮುಟ್ಟಾಳೆ, ಕ್ಯಾಚಿಂಗ್‌ ದ ಐಟಂ

5 ರಿಂದ 8ನೇ ತರಗತಿಯ ಹುಡುಗಿಯರಿಗೆ ಪಾಲೆ ಬಂಡಿ, 100ಮೀ. ಓಟ, ಗೂಟ ಓಟ ಹಾಗೂ ಹುಡುಗರಿಗೆ ಉಪ್ಪು ಮುಡಿ, ಪಾಲೆ ಬಂಡಿ, 100ಮೀ. ಓಟ,

9ರಿಂದ 12ನೇ ತರಗತಿಯ ಹುಡುಗಿಯರಿಗೆ 100 ಮೀ. ಓಟ, ಗೂಟ ಓಟ, ಕಾಲು ಕಂಬಳ ಹಾಗೂ ಹುಡುಗರಿಗೆ 100 ಮೀ. ಓಟ, ಗೂಟ ಓಟ, ಉಪ್ಪು ಮುಡಿ

ಮುಕ್ತ ವಿಭಾಗ ಗ್ರೂಫ್ ಮಹಿಳೆಯರಿಗೆ ಹಿಮ್ಮುಖ ಓಟ, ಗೂಟ ಸುತ್ತುವುದು, ಕಾಲು ಕಂಬಳ, ಪುರುಷರಿಗೆ 100 ಮೀ.ಹಿಮ್ಮುಖ ಓಟ, ಪಾಲೆ ಬಂಡಿ, ಕಾಲು ಕಂಬಳ

ಮುಕ್ತ ವಿಭಾಗ ಗ್ರೂಫ್ ಮಹಿಳೆಯರಿಗೆ 400 ಮೀ. ರಿಲೇ, ತ್ರೋಬಾಲ್, ಹಗ್ಗಜಗ್ಗಾಟ ಹಾಗೂ ಪುರುಷರಿಗೆ 400 ಮೀ. ರಿಲೇ, ವಾಲಿಬಾಲ್, ಹಗ್ಗಜಗ್ಗಾಟ

ವಿಶೇಷ ಆಕರ್ಷಣೆ : ತೆಂಗಿನಕಾಯಿ ಸ್ಪರ್ಧೆ ನಡೆಯಲಿದೆ

More from the blog

ಏ.21 ರಂದು ಆದಿದ್ರಾವಿಡ ಸಮಾಜ ಬಾಂಧವರ ಕ್ರೀಡಾಕೂಟ ಹಾಗೂ ಸಾಧಕರಿಗೆ ಸನ್ಮಾನ

ಬಂಟ್ವಾಳ ತಾಲೂಕು ಆದಿದ್ರಾವಿಡ ಸಮಾಜ ಸೇವಾ ಸಂಘ(ರಿ.)S74 ಇದರ ವತಿಯಿಂದ ವಿಶ್ವಜ್ಞಾನಿ ಡಾ| ಬಿ. ಆರ್ ಅಂಬೇಡ್ಕರ್ ರವರ 133ನೇ ಜನ್ಮ ದಿನಾಚರಣೆಯ ಅಂಗವಾಗಿ ಸಂಘದ ದಶಮಾನೋತ್ಸವ ಕಾರ್ಯಕ್ರಮದ ಪ್ರಯುಕ್ತ ಆದಿದ್ರಾವಿಡ ಸಮಾಜ...

ಎಸ್.ಎಸ್.ಎಲ್.ಸಿ ಮೌಲ್ಯಮಾಪನ : ನಿಷೇಧಾಜ್ಞೆ ಜಾರಿ

ಮಂಗಳೂರು: ಮಂಗಳೂರಿನ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಏಪ್ರಿಲ್ 15ರಿಂದ ಎಸ್.ಎಸ್.ಎಲ್.ಸಿ ಮುಖ್ಯ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವು ನಡೆಯಲಿದ್ದು, ಮೌಲ್ಯಮಾಪನ ಕಾರ್ಯವನ್ನು ಸುಸೂತ್ರವಾಗಿ ಹಾಗೂ ಪಾರದರ್ಶಕವಾಗಿ ನಡೆಸಲು ಮತ್ತು ಕಾನೂನುಬಾಹಿರ...

ಲೋಕಸಭಾ ಚುನಾವಣೆ : ಬಂಟ್ವಾಳದ ಕಳ್ಳಿಗೆ ಗ್ರಾಮದಲ್ಲಿ ಮತಯಾಚನೆ ನಡೆಸಿದ ಶಾಸಕ ರಾಜೇಶ್ ನಾಯ್ಕ್

2024 ರ ಎ. 26 ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಕ್ಯಾ.ಬ್ರಿಜೇಶ್ ಚೌಟ ಅವರನ್ನು ಬಹುಮತದಿಂದ ಗೆಲ್ಲಿಸಿಕೊಡುವ ನಿಟ್ಟಿನಲ್ಲಿ "ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಗ್ರಾಮ,ಮನೆ,ಮನ ಸಂಪರ್ಕ ಅಭಿಯಾನ" ಎಂಬ...

ಬಂಟ್ವಾಳದ ನರಿಕೊಂಬು ಗ್ರಾಮದಲ್ಲಿ ಮತಯಾಚನೆ ನಡೆಸಿದ ಶಾಸಕ ರಾಜೇಶ್ ನಾಯ್ಕ್

2024 ರ ಎ. 26 ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಕ್ಯಾ.ಬ್ರಿಜೇಶ್ ಚೌಟ ಅವರನ್ನು ಬಹುಮತದಿಂದ ಗೆಲ್ಲಿಸಿಕೊಡುವ ನಿಟ್ಟಿನಲ್ಲಿ "ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಗ್ರಾಮ,ಮನೆ,ಮನ ಸಂಪರ್ಕ ಅಭಿಯಾನ" ಎಂಬ...