Friday, April 12, 2024

ಜಾತಿ ನಿಂದನೆ, ಜೀವ ಬೆದರಿಕೆ ಆರೋಪ : ದೂರು ದಾಖಲು

ವಿಟ್ಲ ಪೊಲೀಸ್ ಠಾಣೆಯಲ್ಲಿ ಜಯಪ್ರಕಾಶ್ ನಾಯಕ್ ಮತ್ತು ಭೋಜ ಎಂಬವರ ವಿರುದ್ಧ ಜಾತಿ ನಿಂದನೆ, ಹಲ್ಲೆ ಮತ್ತು ಜೀವ ಬೆದರಿಕೆ ಹಾಕಿರುವ ಬಗ್ಗೆ ಕೇಸು ದಾಖಲಾಗಿದೆ.

ಸೆ.13ರಂದು ವಿಟ್ಲಮುಡ್ನೂರು ಗ್ರಾಮದ ನಿವಾಸಿ ಎನ್ ಗೋವಿಂದ ನಾಯ್ಕ(60.ವ) ಎಂಬವರು ಕೇಪು ಗ್ರಾಮದ ದೇವುಮೂಲೆ ಎಂಬಲ್ಲಿರುವ ತನ್ನ ತೋಟಕ್ಕೆ ದ್ವಿಚಕ್ರ ವಾಹನದಲ್ಲಿ ಹೋಗುವ ವೇಳೆ ವಿಟ್ಲಮುಳ್ಳೂರಿನ ನಾಟೆಕಲ್ಲು ಎಂಬಲ್ಲಿ ಜಯಪ್ರಕಾಶ್ ನಾಯಕ್ ಮತ್ತು ಭೋಜ ಹಾಲು ಉತ್ಪಾದಕರ ಸಂಘದ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತಕರಾರು ತೆಗೆದು ಜಾತಿ ನಿಂದನೆ ಮಾಡಿ ಅವಾಚ್ಯವಾಗಿ ಬೈದು ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿರುವುದಾಗಿ ಗೋವಿಂದ ನಾಯ್ಕ ವಿಟ್ಲ ಠಾಣೆಗೆ ದೂರು ಸಲ್ಲಿಸಿದ್ದರು. ದೂರಿನ ಹಿನ್ನೆಲೆಯಲ್ಲಿ ಅ.ಕ್ರ: 160/2023 do: 3(1)(r),3(1)(s) The SC/ST PA Act-2015 ಹಾಗೂ 323,504,506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

More from the blog

ಗುಡ್ಡೆ ಅಂಗಡಿ ನೂರೂದ್ದೀನ್ ಮಸೀದಿಯಲ್ಲಿ ಈದ್ ಮುಬಾರಕ್ ಆಚರಣೆ

ಗುಡ್ಡೆ ಅಂಗಡಿ ನೂರೂದ್ದೀನ್ ಮಸೀದಿಯಲ್ಲಿ ಈದ್ ಮುಬಾರಕ್ ಆಚರಣೆ ನಡೆಯಿತು. ಖತೀಬರಾದ ಅಸ್ವೀಫ್ ಧಾರಿಮಿ ಅವರು ನೇತೃತ್ವ ವಹಿಸಿ ಈದ್ ಸಂದೇಶವನ್ನು ಸಾರಿದರು.. ಪುರಸಭಾ ಸದಸ್ಯ ಅಬುಬಕ್ಕರ್ ಸಿದ್ದೀಕ್, ಎನ್‌.ಜೆ.ಎಮ್ ಮಸೀದಿ  ಇದರ ಅಧ್ಯಕ್ಷ...

ದ್ವಿತೀಯ ಪಿಯು ಫಲಿತಾಂಶ ಪ್ರಕಟ : ದಕ್ಷಿಣ ಕನ್ನಡ ಜಿಲ್ಲೆಗೆ ಮೊದಲ ಸ್ಥಾನ

ಬೆಂಗಳೂರು: ಮಾರ್ಚ್ 1ರಿಂದ ಮಾರ್ಚ್ 22ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಬುಧವಾರ ಪ್ರಕಟಗೊಂಡಿದೆ. ಬೆಂಗಳೂರಿನಲ್ಲಿ ಶಿಕ್ಷಣ ಇಲಾಖೆ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದೆ. ಈ ಬಾರಿ, ಶೇ 81.15 ಮಂದಿ ಉತ್ತೀರ್ಣರಾಗಿದ್ದಾರೆ....

ಏ.10ರಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ…. ರಿಸಲ್ಟ್​ ಚೆಕ್ ಮಾಡೋದು ಹೇಗೆ?

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ನಾಳೆ ಪ್ರಕಟಿಸಲಾಗುತ್ತಿದೆ. ಎಲ್ಲ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮುಕ್ತಾಯವಾದ ಹಿನ್ನಲೆ ನಾಳೆ ಫಲಿತಾಂಶ ಪ್ರಕಟಿಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮುಂದಾಗಿದೆ. ನಾಳೆ...

ಮತ್ತೆ ಏರಿಕೆ ಕಂಡ ಚಿನ್ನದ ಬೆಲೆ : ಇವತ್ತಿನ ‌ಬೆಲೆ ಎಷ್ಟು ಗೊತ್ತಾ…?

ಯುಗಾದಿ ಹಬ್ಬ. ಇದು ಸಂಬಂಧ ಬೆಸೆಯುವ ಹಬ್ಬ. ಅಂದಹಾಗೆಯೇ ದೇಶದಾದ್ಯಂತ ಜನರು ಇಂದು ಸಂಭ್ರಮದಲ್ಲಿದ್ದಾರೆ. ಆದರೆ ಇದರ ನಡುವೆ ಚಿನ್ನದ ಬೆಲೆ ಏರಿಕೆಯ ಬಿಸಿಯಿಂದ ಕೊಂಚ ಬೇಸರವು ಅವರಲ್ಲಿ ಆವರಿಸಿದೆ. ಕಳೆದ ಎರಡು ದಿನಗಳ...