Wednesday, October 18, 2023

ವಿದ್ಯಾರ್ಥಿಗಳ ಪ್ರಗತಿಯಲ್ಲಿ ಶಿಕ್ಷಕ ಮತ್ತು ಪೋಷಕರದ್ದೇ ಜೇಷ್ಠ ಸವಾಲುಗಳು – ಡಾ.ಟಿ.ಕೃಷ್ಣ ಮೂರ್ತಿ

Must read

ವಿಟ್ಲ: ವಿಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 2023-24ನೇ ಸಾಲಿನ ಶೈಕ್ಷಣಿಕ ವರ್ಷದ ಹತ್ತನೇ ತರಗತಿಯ ಪೋಷಕರ ಸಭೆಯು ಶಾಲಾ ಸಭಾಂಗಣ ‘ಜೇಸಿ ಪೆವಿಲಿಯನ್’ನಲ್ಲಿ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾoಶುಪಾಲ ಡಾ. ಟಿ. ಕೃಷ್ಣ ಮೂರ್ತಿಯವರು ಭಾಗವಹಿಸಿ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿಯನ್ನು ಸಾಧಿಸಲು ಶಿಕ್ಷಕರ ಜೊತೆ ಪೋಷಕರು ಕೈ ಜೋಡಿಸುವುದು ಅಗತ್ಯವಾಗಿದೆ. ವಿದ್ಯಾರ್ಥಿಯ ಸಮಯ ವಿನಿಯೋಗ ಮತ್ತು ಅಭ್ಯಾಸಕ್ಕಾಗಿ ಉತ್ತಮ ವಾತಾವರಣಕ್ಕೆ ಶಿಕ್ಷಕ ಮತ್ತು ಪೋಷಕ ವಿದ್ಯಾರ್ಥಿಯಷ್ಟೇ ಸವಾಲನ್ನು ಎದುರಿಸಬೇಕಾಗುತ್ತದೆ ಎಂದರು.

ಆಡಳಿತ ಮಂಡಳಿಯ ಅಧ್ಯಕ್ಷರಾದ ಎಲ್ ಎನ್ ಕೂಡೂರುರವರು ಹೆತ್ತವರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಸಂಸ್ಥೆಯು ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯ ರೂಡಿಸಿಕೊಂಡು,ಪ್ರತಿ ಮಗುವಿನ ಬಗ್ಗೆ ಕಾಳಜಿ ವಹಿಸುವುದಾಗಿ ಸಂತಸ ವ್ಯಕ್ತಪಡಿಸಿದರು.

ಜತೆ ಕಾರ್ಯದರ್ಶಿ ಶ್ರೀಪ್ರಕಾಶ್ ಕುಕ್ಕಿಲ SSLC ಬಳಿಕ ವಿವಿಧ ಕೋರ್ಸ್ ಗಳ ಬಗ್ಗೆ ತಿಳಿಸುತ್ತಾ, ದೇಶದ ಸೇನೆಗಳಲ್ಲಿ ಸೇರಿಕೊಳ್ಳುವ ವಿಪುಲ ಅವಕಾಶಗಳನ್ನು ವಿವರಿಸಿದರು.

ಉಪಾಧ್ಯಕ್ಷ ಶ್ರೀಧರ್ ಶೆಟ್ಟಿ, ಕಾರ್ಯದರ್ಶಿ ಪ್ರಭಾಕರ್ ಶೆಟ್ಟಿ, ನಿರ್ದೇಶಕರಾದ ಹಸನ್ ವಿಟ್ಲ ಮತ್ತು ವಿಜಯ ಪಾಯಿಸ್, ಆಡಳಿತಾಧಿಕಾರಿ ರಾಧಾಕೃಷ್ಣ ಎ. ಉಪಸ್ಥಿತರಿದ್ದರು.

ಪ್ರಾಂಶುಪಾಲ ಜಯರಾಮ್ ರೈ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. SSLC ತರಗತಿ ಅಧ್ಯಾಪಕ ಗುರುವಪ್ಪ ನಾಯ್ಕ ವಿದ್ಯಾರ್ಥಿ ಪೋಷಕರಿಗೆ ಸಲಹೆ ಸೂಚನೆಗಳನ್ನಿತ್ತರು. ವಿದ್ಯಾರ್ಥಿಗಳ ಹೆತ್ತವರು ತಮ್ಮ ಮಕ್ಕಳ ಕಾಳಜಿ ಮತ್ತು ಶಾಲಾ ಅಭಿವೃದ್ಧಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಸಹ ಶಿಕ್ಷಕಿ ತುಳಸಿ ಕಾರ್ಯಕ್ರಮ ನಿರೂಪಿಸಿದರು. SSLC ವಿಷಯವಾರು ಶಿಕ್ಷಕರು ಸಹಕರಿಸಿದರು.

More articles

Latest article