Wednesday, October 18, 2023

ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ತ್ರೋಬಾಲ್ ಪಂದ್ಯಾಟ : ವಿಠಲ್ ಜೇಸೀಸ್, ಕನ್ಯಾನ ಸರಸ್ವತಿ ವಿದ್ಯಾಲಯ ಚಾಂಪಿಯನ್ 

Must read

ವಿಟ್ಲ: ವಿಟ್ಲ ವಿಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 2023-24 ನೇ ಸಾಲಿನ ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ತ್ರೋಬಾಲ್ ಪಂದ್ಯಾಟವು ನಡೆಯಿತು.

ಈ ಪಂದ್ಯಾಟದ ಉದ್ಘಾಟನಾ ಕಾರ್ಯಕ್ರಮವನ್ನು ಶಾಲಾ ಆಡಳಿತ ಮಂಡಳಿಯ ಖಜಾಂಜಿಯಾದ ಪ್ರಭಾಕರ ಶೆಟ್ಟಿಯವರು ನೆರವೇರಿಸಿ ಸ್ಪರ್ಧಾಳುಗಳಿಗೆ ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಶ್ರೀಧರ್ ಶೆಟ್ಟಿ ರವರು ಸೋಲು ಗೆಲುವನ್ನು ಸ್ಪರ್ಧಾಳುಗಳು ಸಮಾನವಾಗಿ ಸ್ವೀಕರಿಸಬೇಕೆಂದು ತಿಳಿಸಿದರು. ವಿಟ್ಲದ ದೈಹಿಕ ಶಿಕ್ಷಣ ನೋಡೆಲ್ ಅಧಿಕಾರಿ ರಾಜೇಂದ್ರ ರೈ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ವೇದಿಕೆಯಲ್ಲಿ ಜಿಲ್ಲಾ ದೈಹಿಕ ಶಿಕ್ಷಣ ಸಂಘದ ಉಪಾಧ್ಯಕ್ಷರಾದ ಸುರೇಶ್ ಶೆಟ್ಟಿ, ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಉಮಾನಾಥ ರೈ, ವಿಟ್ಲ ಸಂಪನ್ಮೂಲ ಅಧಿಕಾರಿ ಬಿಂದು, ಪ್ರಾಂಶುಪಾಲರಾದ ಜಯರಾಮ ರೈ, ಉಪ ಪ್ರಾಂಶುಪಾಲೆ ಜ್ಯೋತಿ ಶೆಣೈ ಉಪಸ್ಥಿತರಿದ್ದರು.

ವಿಠಲ್ ಜೇಸೀಸ್, ಕನ್ಯಾನ ಸರಸ್ವತಿ ವಿದ್ಯಾಲಯಕ್ಕೆ ಪ್ರಶಸ್ತಿ: 

ಬಾಲಕರ ವಿಭಾಗದಲ್ಲಿ ವಿಠ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ತಂಡ ವಿಜಯಡ್ಕ ಸಂತ ಲಾರೆನ್ಸ್ ಪ್ರೌಢಶಾಲೆ ತಂಡವನ್ನು ಮಣಿಸಿ ಚಾಂಪಿಯನ್ ಆಗಿ ಮೂಡಿ ಬಂದಿತು.

ಬಾಲಕಿಯರ ವಿಭಾಗದಲ್ಲಿ ಕನ್ಯಾನ ಶ್ರೀ ಸರಸ್ವತಿ ವಿದ್ಯಾಲಯ ಪ್ರಥಮ ಸ್ಥಾನ ಪಡೆದರೆ, ಸರಕಾರಿ ಹಿರಿಯ ಪ್ರೌಢಶಾಲೆ ಸೂರ್ಯ, ರನ್ನರ್ ಆಫ್ ಪ್ರಶಸ್ತಿ ತನ್ನದಾಗಿಸಿತು.

ಸಹ ಶಿಕ್ಷಕರಾದ ಗೀತಾ ಸ್ವಾಗತಿಸಿದರು. ಸೌಮ್ಯ ಸಾವಿತ್ರಿ ವಂದಿಸಿದರು. ಕವಿತಾ ಎಸ್. ಗೌಡ ಕಾರ್ಯಕ್ರಮ ನಿರೂಪಿಸಿದರು. ಜೇಸಿ ಸಂಸ್ಥೆಯ ದೈಹಿಕ ಶಿಕ್ಷಕ ಭಾನುಪ್ರಕಾಶ್ ಹಾಗೂ ಶಶಿಕಲಾ ಸಹಕರಿಸಿದರು.

More articles

Latest article