Saturday, October 21, 2023

ಸೆ.15 ರಿಂದ ಇತಿಹಾಸ ಪ್ರಸಿದ್ದ ಸುಳ್ಳಮಲೆ ಗುಹಾ ತೀರ್ಥ ಸ್ನಾನ

Must read

ಮಾಣಿ ಗ್ರಾಮದ ಶ್ರೀ ಗುಡ್ಡಚಾಮುಂಡಿ ಪಂಜುರ್ಲಿ ಮಲೆಕೂರತಿ ದೈವಸ್ಥಾನ ಶಂಭುಗದಲ್ಲಿ ಇತಿಹಾಸ ಪ್ರಸಿದ್ದ ಸುಳ್ಳಮಲೆ ಗುಹಾ ತೀರ್ಥ ಸ್ನಾನ ಸೆ.15 ರಿಂದ ಸೆ.19 ರವರೆಗೆ ಬಾದ್ರಪದ ಶುಕ್ಲ ಚೌತಿವರೆಗೆ ನಡೆಯಲಿದೆ.

ಸೋಣ ಅಮವಾಸ್ಯೆಯೆಂದು ತೀರ್ಥ ಸ್ನಾನಕ್ಕೆ ಬಿದಿರಿನ ಕೇರ್ಪು (ಏಣಿ) ಇಡುವ ಸಂಪ್ರದಾಯದ ಬಳಕ ಅರಸು ಶ್ರೀ ಗುಡ್ಡಚಾಮುಂಡಿ ಮತ್ತು ಪ್ರಧಾನಿ ಶ್ರೀ ಪಂಜುರ್ಲಿ ದೈವಗಳಗೆ ತಂಬಿಲ ಸೇವೆ ಮೊದಲಾದ ಧಾರ್ಮಿಕ ವಿಧಿ ವಿಧಾನ ನಡೆಯಲಿದೆ.

ಇನ್ನು ಭಕ್ತಾಭಿಮಾನಿಗಳಿಗೆ ಶುಕ್ಲ ಪಕ್ಷದ ಚೌತಿಯವರೆಗೆ ತೀರ್ಥ ಸ್ನಾನಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.

ಈ ಬಗ್ಗೆ ಶ್ರೀ ಗುಡ್ಡಚಾಮುಂಡಿ ಸೇವಾ ಸಮಿತಿ, ಶಂಭುಗದ ಅಧ್ಯಕ್ಷರು ಹಾಗೂ ಸರ್ವಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

More articles

Latest article