ಸುಬ್ರಹ್ಮಣ್ಯ: ಮಧ್ಯಾಹ್ನ ದ ಹೊತ್ತಿಗೆ ಸುಬ್ರಹ್ಮಣ್ಯದಿಂದ ಧರ್ಮಸ್ಥಳಕ್ಕೆ ಟೂರಿಸ್ಟ್ ಬಾಡಿಗೆ ಹೋಗುವ ಮಹೇಂದ್ರ ಬೊಲೆರೋ ವಾಹನ ತೀರ ಅಜಾಗರುಕತೆಯಿಂದ ಚಲಿಸಿಕೊಂಡು ಭಾರತ್ ಪೆಟ್ರೋಲ್ ಪಂಪ್ ಬಳಿ ಬರುತ್ತಾ ಇರುವಾಗ ಹೋರಿಗೆ ಗುದ್ದಿ ಅಪಘಾತಕ್ಕೀಡಾಗಿದೆ.
ಅಪಘಾತದ ರಭಸಕ್ಕೆ ಹೋರಿ ರಸ್ತೆಗೆ ಎಸೆಯಲ್ಪಟ್ಟು ಕಾಲಿನ ಮೂಳೆಮುರಿತ ಗೊಳಗಾಗಿದೆ, ಅದರ ಒಂದು ಕೊಂಬು ಮುರಿದಿದ್ದು, ಮೈ ಮೇಲೆ ತರುಚುಗಾಯಗಳಾಗಿದ್ದು ರಸ್ತೆಯಲ್ಲಿ ಬಿದ್ದಿರುವ ಹೋರಿಯನ್ನ ಕಂಡ ಸಾರ್ವಜನಿಕರು ರಸ್ತೆ ಪಕ್ಕದಲ್ಲಿ ಮಲಗಿಸಿ ನೀರು ಹಾಕಿ ಆರೈಕೆಮಾಡಿರುತ್ತಾರೆ ಹಾಗೂ ತಕ್ಷಣ ಸುಬ್ರಹ್ಮಣ್ಯದ ಪ್ರಭರಾ ಮುಖ್ಯ ಪಶುವೈದ್ಯಾಧಿಕಾರಿಗಳು ಡಾ. ಮಲ್ಲಿಕಾ ಅವರಿಗೆ ಫೋನ್ ಮಾಡಿ ಬರಲು ಹೇಳಿ ತಕ್ಷಣ ಅವರು ಸ್ಥಳಕ್ಕೆ ಆಗಮಿಸಿದ್ದಾರೆ ಈ ಸಂದರ್ಭದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಯಾತ್ರೆಗೆಂದು ಕುಟುಂಬ ಸಮೇತರಾಗಿ ಬಂದಿರುವ
ಹಾವೇರಿಯಾ ಹಿರಿಯ ಪಶುವೈದ್ಯಾಧಿಕಾರಿಗಳು ಡಾ.ಯುವರಾಜ್ ಚವ್ಹಾಣ ಇಬ್ಬರು ಜೊತೆಗೂಡಿ ಹೋರಿಗೆ ಚಿಕಿತ್ಸೆ ನೀಡಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಯಾತ್ರೆಗೆ ಬಂದಿರುವ ಓರ್ವ ಪಶು ವೈದ್ಯ ಹಿರಿಯಾ ಅಧಿಕಾರಿ ತನ್ನ ಕರ್ತವ್ಯ ಮೆರೆದಿರುವುದು ಎಲ್ಲರ ಪ್ರಶಂಸೆಗೆ ಕಾರಣವಾಗಿದೆ.
ವೈದ್ಯರು ಪರೀಕ್ಷಿಸಿ ನೋಡುವಾಗ ಹೋರಿಯಾ ಕಾಲು ಮೂಳೆಮುರಿತ ಕೊಳಗಾಗಿರೋದು ಕಂಡು ಬಂದಿದೆ.
ಹೆಚ್ಚಿನ ಚಿಕಿತ್ಸೆಗಾಗಿ ಹೋರಿಯನ್ನು ಕೊಯಿಲ ಪಶು ವೈದ್ಯಕೀಯ ಕೇಂದ್ರಕ್ಕೆ ಕಳಿಸಿಕೊಡಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.
ಈ ಸಂದರ್ಭದಲ್ಲಿ ತಕ್ಷಣ ಸ್ಥಳಕ್ಕೆ ಆಗಮಿಸಿ ಹೈವೇ ಪೆಟ್ರೋಲ್, ಪೊಲೀಸ್ ಎ. ಎಸ್. ಐ.ತೋಮಸ್ ಹಾಗೂ ಸಿಬ್ಬಂದಿಗಳು,ಸಮಾಜಸೇವಕ ಡಾ. ರವಿಕಕ್ಕೆ ಪದವು,
ನವೀನ್ ಶೆಟ್ಟಿ ಸುಬ್ರಹ್ಮಣ್ಯ ನಿವಾಸಿ, ಸುಬ್ರಮಣ್ಯ ರಿಕ್ಷಾ ಚಾಲಕರು, ಸ್ಥಳೀಯರು ಹೋರಿಯ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು.