Thursday, October 26, 2023

ಸುಬ್ರಹ್ಮಣ್ಯದ ದೇವರಗದ್ದೆ ಬಳಿ ಬಾವಿಗೆ ಬಿದ್ದ ಎತ್ತು : ಮೇಲಕ್ಕೆತ್ತಿದ ಅಗ್ನಿಶಾಮಕ ದಳ

Must read

 

ಸುಬ್ರಮಣ್ಯದ ಗ್ರಾಮದ ದೇವರ ಗದ್ದೆ ಎಂಬಲ್ಲಿ ವಿಠಲ ಶೆಟ್ಟಿ ಎಂಬವರ ಬಾವಿಗೆ ಕಳೆದ ಮೂರು ದಿನಗಳ ಹಿಂದೆ ಎತ್ತು ಒಂದು ಬಿದ್ದಿದ್ದು ಸೆ.10 ರಂದು ಅಗ್ನಿಶಾಮಕ ದಳದವರ ಸಹಾಯದಿಂದ ಅದನ್ನು ಮೇಲಕೆತ್ತಲಾಯಿತು.

ಬಾವಿಯ ಸುಮಾರು 40 ಕ್ಕೂ ಅಧಿಕ ಆಳವಿದ್ದು, ಮೂರು ದಿನಗಳಿಂದ ಸ್ಥಳೀಯರು ಹಗ್ಗದ ಸಹಾಯದಿಂದ ಮೇಲಕೆತ್ತಲು ಪ್ರಯತ್ನಿಸಿದರೂ ಅದನ್ನು ಮೇಲಕೆತ್ತಲು ಸಾಧ್ಯವಾಗಿರಲಿಲ್ಲ. ರವಿ ಕಕ್ಕೆ ಪದವು ಅವರು ಸುಬ್ರಹ್ಮಣ್ಯ ಎಸ್ ಐ ಅವರಿಗೆ ಮಾಹಿತಿ ನೀಡಿದ್ದು ಅವರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ‌. ಸುಳ್ಯದ ಅಗ್ನಿ ಶಾಮಕದವರು ಆಗಮಿಸಿ ಎತ್ತನ್ನು ಬಾವಿಯಿಂದ ಮೇಲಕ್ಕೆತ್ತಿದರು. ಸ್ಥಳೀಯರಾದ ಹರೀಶ್ ಇಂಜಾಡಿ, ರವಿ ಕಕ್ಕೆಪದವು, ಕಾರ್ತಿಕ್, ಲತೀಶ್, ರಂಜನ್, ಅಶ್ವಥ್, ಜಯೇಶ್ ಮತ್ತಿತರರು ಸಹಕರಿಸಿದರು.

More articles

Latest article