Saturday, April 6, 2024

ಪ್ರಾಚೀನ ವಿಚಾರಗಳ ಜ್ಞಾನ ಪುನರುತ್ಥಾನಕ್ಕೆ ಉತ್ಸವಗಳ ಪಾತ್ರ ಅನನ್ಯ- ಡಾ.ನಿಂಗಯ್ಯ

ಸುಬ್ರಹ್ಮಣ್ಯ: ಪ್ರಾಚೀನ ಆಚರಣೆಗಳಲ್ಲಿ ಸಹೋದರತೆ ಅಡಗಿದೆ.ಪ್ರತಿ ಆಚರಣೆಗಳನ್ನು ಸಾಮೂಹಿಕವಾಗಿ ಆಚರಿಸುವ ಮೂಲಕ ಸಂಬಂಧಗಳು ವೃದ್ಧಿಯಾಗುತ್ತದೆ. ಸಂಸ್ಕೃತಿಯ ಭವ್ಯ ವಿಚಾರಧಾರೆಗಳು ಯುವ ಜನಾಂಗದಲ್ಲಿ ಅಚ್ಚಳಿಯದೆ ಉಳಿಯಲು ಉತ್ಸವಗಳು ಅಡಿಪಾಯವಾಗಿದೆ. ಪ್ರಾಚೀನ ವಿಚಾರಗಳ ಜ್ಞಾನ ಪುನರುತ್ಥಾನಗೊಳ್ಳಲು ಉತ್ಸವಗಳ ಪಾತ್ರ ಅನನ್ಯ.ಮಕ್ಕಳಿಗೆ ಉತ್ಸವಗಳ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ಅದರ ಆಚರಣೆಗಳ ಅಗತ್ಯತೆಯ ಕುರಿತು ತಿಳಿಸುವ ವಿಚಾರಗಳು ಕೂಡಾ ನೆರವೇರಬೇಕು.ಇದರಿಂದ ಮಕ್ಕಳ ಮನಸಿನಲ್ಲಿ ಪ್ರಾಚೀನ ಆಚರಣೆಗಳು ಅಚ್ಚಳಿಯದೆ ನಿಲ್ಲಲು ಸಾಧ್ಯವಿದೆ ಎಂದು ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ ಹೇಳಿದರು.

ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಠಮಿ ಉತ್ಸವ ಸಮಿತಿ ಸುಬ್ರಹ್ಮಣ್ಯ ಇದರ ಆಶ್ರಯದಲ್ಲಿ ಕುಕ್ಕೆ ದೇವಳದ ಸವಾರಿ ಮಂಟಪದಲ್ಲಿ ಬುಧವಾರ ನಡೆದ ೧೯ನೇ ವರ್ಷದ ಮೊಸರು ಕುಡಿಕೆ ಸ್ಪರ್ಧೆ ಮತ್ತು ಪ್ರಥಮ ವರ್ಷದ ಅಟ್ಟಿ ಮಡಿಕೆ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ಧಾವಂತ ಬದುಕಿನಲ್ಲಿ ಈ ಬಗ್ಗೆ ನಿರೀಕ್ಷೆ ಮಾಡುವುದು ಕೂಡಾ ಕಷ್ಟವಾಗಿದೆ.ಅಂದಿನ ಬಾಲ್ಯಕ್ಕೂ ಇಂದಿನ ಬಾಲ್ಯಕ್ಕೂ ತೀರಾ ವ್ಯತ್ಯಾಸ ಇದೆ.ಆದರೆ ಈ ವ್ಯತ್ಯಾಸವನ್ನು ಕಡಿಮೆ ಮಾಡಲು ಇಂತಹ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಎಲ್ಲರೂ ಭಾಗವಹಿಸಬೇಕು ಎಂದರು.

ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಠಮಿ ಉತ್ಸವ ಸಮಿತಿ ಅಧ್ಯಕ್ಷ ಪ್ರಶಾಂತ್ ಆಚಾರ್ಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಉತ್ಸವ ಸಮಿತಿಯ ಸ್ಥಾಪಕಾಧ್ಯಕ್ಷ ಉಮೇಶ್ ಕೆ.ಎನ್, ಕಾರ್ಯದರ್ಶಿ ವಿನ್ಯಾಸ್ ಹೊಸೋಳಿಕೆ ವೇದಿಕೆಯಲ್ಲಿದ್ದರು. ದಶಮಾನೋತ್ಸವ ಸಮಿತಿ ಅಧ್ಯಕ್ಷ ರಾಜೇಶ್ ಎನ್.ಎಸ್, ಪೂರ್ವಾಧ್ಯಕ್ಷರಾದ ಲೋಕೇಶ್ ಬಿ.ಎನ್, ರವಿ ಕಕ್ಕೆಪದವು, ಶ್ರೀಕೃಷ್ಣ ಶರ್ಮ, ಡಾ.ಸಿದ್ದಲಿಂಗ ಎಸ್.ಎಸ್ ವೆಂಕಟೇಶ್ ಎಚ್.ಎಲ್, ಶಿವರಾಮ.ಕೆ, ನಿತಿನ್ ಭಟ್, ಆದರ್ಶ ಕೆ.ಆರ್, ವೇಣುಗೋಪಾಲ ಎನ್.ಎಸ್, ನಿಕಟಪೂರ್ವಾಧ್ಯಕ್ಷ ಪ್ರಕಾಶ್ ಸುಬ್ರಹ್ಮಣ್ಯ ಉಪಸ್ಥಿತರಿದ್ದರು.

ಕಾರ್ಯದರ್ಶಿ ವಿನ್ಯಾಸ್ ಹೊಸೋಳಿಕೆ ಸ್ವಾಗತಿಸಿದರು. ಪೂರ್ವಾಧ್ಯಕ್ಷ ದೀಪಕ್ ನಂಬಿಯಾರ್ ವಂದಿಸಿದರು. ಸಮಿತಿ ಸಂಚಾಲಕ ರತ್ನಾಕರ.ಎಸ್ ಕಾರ್ಯಕ್ರಮ ನಿರೂಪಿಸಿದರು.

More from the blog

ಆಭರಣ ಪ್ರಿಯರಿಗೆ ಗುಡ್‌ನ್ಯೂಸ್‌ : ವಾರಾಂತ್ಯದಲ್ಲಿ ಚಿನ್ನದ ದರ ತುಸು ಇಳಿಕೆ…

ಬೆಂಗಳೂರು: ಚಿನ್ನದ ದರದಲ್ಲಿ ಮತ್ತೆ ಹಾವು ಏಣಿಯಾಟ ಶುರುವಾಗಿದೆ. ಕಳೆದೆರಡು ದಿನಗಳಿಂದ ನಿರಂತರ ಏರಿಕೆ ಕಂಡಿದ್ದ ಬಂಗಾರದ ಬೆಲೆ ಇದೀಗ ಇಳಿಕೆಯಾಗಿದೆ. ನಿನ್ನೆಯ ದರಕ್ಕೆ ಹೋಲಿಸಿದರೆ 10ಗ್ರಾಂ ಚಿನ್ನದ ಮೇಲೆ 450 ರೂ...

ನೀತಿ ಸಂಹಿತೆ ಇರುವಾಗ ಆಶ್ಲೇಷ ಬಲಿ ಮಂಟಪ ಕಾಮಗಾರಿ ಆರಂಭ ಸಮರ್ಪಕವಲ್ಲ- ಹರೀಶ್ ಇಂಜಾಡಿ

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಈ ಹಿಂದಿನ ಆಡಳಿತ ಮಂಡಳಿಯ ಕೊನೇ ದಿನಗಳಲ್ಲಿ ದಾನಿಗಳು ಕ್ಷೇತ್ರದಲ್ಲಿ ಆಶ್ಲೇಷ ಬಲಿ ಮಂಟಪ ನಿರ್ಮಿಸಲು ಮುಂದೆ ಬಂದರು. ಇದು ಸ್ವಾಗತಾರ್ಹ ಬೆಳವಣಿಗೆ. ಆದರೆ...

ಪ್ರಧಾನಿ ಮೋದಿ ಕರೆ : ಪ್ರತಿಯೊಬ್ಬರ ಕೈ ಮೇಲೆ ಕಮಲದ ಹಚ್ಚೆ ಹಾಕಿ

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ  ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಪ್ರತಿಯೊಬ್ಬರ ಕೈ ಮೇಲೆ ಕಮಲದ ಹಚ್ಚೆ ಹಾಕಿ “ಮೆಹಂದಿ ಅಭಿಯಾನ" ನಡೆಸುವಂತೆ ಸೂಚನೆ ನೀಡಿದ್ದಾರೆ. ಜತೆಗೆ ಮೋದಿ...

ದಿನದಿಂದ ದಿನಕ್ಕೆ ಏರುತ್ತಿದೆ ತಾಪಮಾನ : ಕಡಬ, ಅಜೆಕಾರಿನಲ್ಲಿ ದಾಖಲೆಯ ಉಷ್ಣಾಂಶ

ಮಂಗಳೂರು: ಮುಂದಿನ ಎರಡು ದಿನಗಳ ಕಾಲ ಬಿಸಿಲಿನ ಶಾಕ ಮತ್ತಷ್ಟು ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ ಕರಾವಳಿ ಭಾಗದಲ್ಲಿ ತಾಪಮಾನ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದ್ದು, ಎ. 4ರಿಂದ 5ರ...