Friday, October 27, 2023

ಬುರೂಜ್ ಫ್ರೌಡಶಾಲೆ ರಝಾನಗರ: ಶಿಕ್ಷಕ -ರಕ್ಷಕ ಸಭೆ

Must read

ಪುಂಜಾಲಕಟ್ಚೆ: ಬುರೂಜ್ ಆಂಗ್ಲ ಮಾಧ್ಯಮ ಫ್ರೌಡ ಶಾಲೆಯ 2023 -24 ನೇ ಸಾಲಿನ ಶಿಕ್ಷಕರ – ರಕ್ಷಕ ಸಭೆಯು ಶನಿವಾರ ನಡೆಯಿತು.

ಪ್ರಾರ್ಥನೆಯೊಂದಿಗೆ ಆರಂಭವಾದ ಈ ಕಾರ್ಯಕ್ರಮವನ್ನು ಮೀಫ್ ಸಂಸ್ಥೆಯ ಉಪಾಧ್ಯಕ್ಷರಾದ ಕೆ.ಎಂ.ಮುಸ್ತಫಾ ಸುಳ್ಯ ಉದ್ಘಾಟಿಸಿ ಶೈಕ್ಷಣಿಕ ಪ್ರಗತಿ ಶಿಕ್ಷಣ ಕ್ಷೇತ್ರದಲ್ಲಿ ಮಾತ್ರ ಸಾಧ್ಯ ಎಂದು ಸಂಸ್ಥೆಯ ಪ್ರಗತಿಯನ್ನು ಕೊಂಡಾಡಿದರು.

ಪ್ರಥಮ ದರ್ಜೆ ಕಾಲೇಜು ವಾಮದಪದವು ಇಲ್ಲಿಯ ಸಮಾಜ ಶಾಸ್ತ್ರದ H.O.D. ಆಗಿರುವ Dr ಮೇರಿ ಎಂ.ಜೆ ಪ್ರಾಸ್ತಾವಿಕ ಮಾತುಗಳನ್ನಾಡಿ ಶಿಕ್ಷಕರ ಜೊತೆ ರಕ್ಷಕರು ಕೈ ಜೋಡಿಸಿದರೆ ಮಾತ್ರ ತಮ್ಮ ಮಕ್ಕಳ ಪ್ರಗತಿ ಸಾಧ್ಯ ಎಂದು ಮನವರಿಕೆ ಮಾಡಿದರು.

IAS, IPS ತರಬೇತುದಾರರಾದ ನಝೀರ್ ಅಹ್ಮದ್ ರವರು ಮಾತನಾಡಿ ನಮ್ಮ ಮಕ್ಕಳು ಏನಾಗಬೇಕು ಎಂಬುದನ್ನು ನಾವು ಮೊದಲೇ ತಿಳಿದಿರಬೇಕು ಎಂದು ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾಹಿತಿ ನೀಡಿದರು.

2023 ನೇ ಸಾಲಿನಲ್ಲಿ ಅತ್ಯಧಿಕ ಅಂಕ ಪಡೆದ ಐದು ವಿದ್ಯಾರ್ಥಿಗಳನ್ನು ಈ ಸಂಧರ್ಭದಲ್ಲಿ ಸನ್ಮಾನಿಸಲಾಯಿತು. ಕರಾಟೆಯಲ್ಲಿ .ಗೀತಗಾಯನ ಸ್ಪರ್ಧೆಯಲ್ಲಿ,ಒಲಿಂಪೈಡ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸಿದ ವಿಧ್ಯಾರ್ಥಿಗಳನ್ನು ಗೌರವಿಸಲಾಯಿತು.

ಅಧ್ಯಕ್ಷತೆಯನ್ನು PTA ಅಧ್ಯಕ್ಷರಾದ ಅಬ್ದುಲ್ ಅಝೀಝ್ ವಹಿಸಿದ್ದರು .ಮುಖ್ಯ ಶಿಕ್ಷಕಿ ಜಯಶ್ರೀ ಬಿ .ಸಾಲ್ಯಾನ್ ,ವಿಮಲಾ ಉಪಸ್ಥಿತರಿದ್ದರು.ಶಾಲಾ ಸಂಚಾಲಕ ಶೇಕ್ ರಹಮತುಲ್ಲಾಹ್ ಸ್ವಾಗತಿಸಿ, ವನಿತಾಶೆಟ್ಟಿ ವಂದಿಸಿದರು ,ಎಲ್ಸಿ ಲಸ್ರಾದೋ ಕಾರ್ಯಕ್ರಮ ನಿರೂಪಿಸಿದರು.

More articles

Latest article