Thursday, October 19, 2023

ಸೆ.18 ರಿಂದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಪುಂಜಾಲಕಟ್ಟೆ ಇದರ ಪ್ರಥಮ ವರ್ಷದ ಶ್ರೀ ಗೌರಿ ಗಣಪತಿ ಉತ್ಸವ ಹಾಗೂ 108 ತೆಂಗಿನಕಾಯಿ ಗಣಯಾಗ

Must read

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಪುಂಜಾಲಕಟ್ಟೆ ಇದರ ಪ್ರಥಮ ವರ್ಷದ ಶ್ರೀ ಗೌರಿ ಗಣಪತಿ ಉತ್ಸವ ಹಾಗೂ ಶ್ರೀ ಕ್ಷೇತ್ರ ಕದ್ರಿಯ ಅರ್ಚಕರಾದ ಕೃಷ್ಣ ಅಡಿಗ ಇವರ ಪೌರೋಹಿತ್ಯದಲ್ಲಿ 108 ತೆಂಗಿನಕಾಯಿ ಗಣಯಾಗ 18-09-2023 ಸೋಮವಾರದಿಂದ 20-09-2023 ಬುಧವಾರದ ವರೆಗೆ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಜರುಗಲಿರುವುದು.

ಪ್ರಧಾನ ಅರ್ಚಕರು ಗೋವಿಂದ ಭಟ್‌, ಗೌರವಾಧ್ಯಕ್ಷರಾದ ಎಂ. ತುಂಗಪ್ಪ ಬಂಗೇರ ಮತ್ತು ಸರ್ವೋತ್ತಮ ಪ್ರಭು, ಅಧ್ಯಕ್ಷರು ಚಿದಾನಂದ ಮಾಣಿಂಜ, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಅನಿಲಡೆ, ಉಪಾಧ್ಯಕ್ಷರಾದ ಗಿರೀಶ್ ಅನಿಲಡೆ, ಸಂಜೀವ ಶೆಟ್ಟಿ ಪುಂಜಾಲಕಟ್ಟೆ, ರಮಾನಂದ ಎಮ್. ಮೂರ್ಜೆಗುತ್ತು, ಕೋಶಾಧಿಕಾರಿ ಕೌಶಿಕ್ ಶೆಟ್ಟಿ ಕಾಡಿಮ‌ರ್‌, ಜೊತೆ ಕೋಶಾಧಿಕಾರಿ ಸುರೇಶ್ ಶೆಟ್ಟಿ ಮಜಲೋಡಿ, ಜೊತೆ ಕಾರ್ಯದರ್ಶಿಗಳಾದ ಹರೀಶ್‌ ಪ್ರಭು ಹಾಗೂ ಹರಿಶ್ಚಂದ್ರ ಶೆಟ್ಟಿಗಾ‌ರ್‌, ಗೌರವ ಸಲಹೆಗಾರರಾದ ಪುನೀತ್ ಕುಮಾರ್ ಮಡಂತ್ಯಾರು,  ರಮೇಶ್ ಶೆಟ್ಟಿ ಮಜಲೋಡಿ, ತಾರಾನಾಥ ಕಜೆಕಾ‌ರ್‌, ಸ್ವಸ್ತಿಕ್ ಗೌಡ ಹಟತ್ತೋಡಿ, ಲೆಕ್ಕ ಪರಿಶೋಧಕರು ಉದಯ್ ಕುಮಾರ್ ಶೆಟ್ಟಿ ಮೇಲ್ಮನೆ, ಸಂಚಾಲಕರು, ಸಹಸಂಚಾಲಕರು ಶ್ರೀ ಗೌರಿ ಮಹಿಳಾ ಸೇವಾ ಸಮಿತಿ ಪುಂಜಾಲಕಟ್ಟೆ, ಕಾರ್ಯಕಾರಿ ಸಮಿತಿ ಹಾಗೂ ಸರ್ವ ಸದಸ್ಯರು ಭಾಗಿಯಾಗಲಿದ್ದಾರೆ.

ತಾರೀಕು 18-09-2023, ಸೋಮವಾರ

ಬೆಳಗ್ಗೆ ಗಂಟೆ 6.00ಕ್ಕೆ ದೇವತಾ ಪ್ರಾರ್ಥನೆ, ಸ್ಥಳ ಶುದ್ಧಿ ಪುಣ್ಯಾಹವಾಚನ, ತ್ರಿನಾರಿಕೇಳ ಗಣಹೋಮ

ಬೆಳಗ್ಗೆ 7.15ಕ್ಕೆ : ಶ್ರೀ ಗೌರಿ ಪ್ರತಿಷ್ಠೆ

ಬೆಳಗ್ಗೆ ಗಂಟೆ 11.00ಕ್ಕೆ: ಧಾರ್ಮಿಕ ಸಭಾ ಕಾರ್ಯಕ್ರಮ

ಮಧ್ಯಾಹ್ನ 12.30ಕ್ಕೆ : ಮಹಾಪೂಜೆ, ಪ್ರಸಾದ ವಿತರಣೆ ನಂತರ ಸಾರ್ವಜನಿಕ ಅನ್ನಸಂತರ್ಪಣೆ

ಮಧ್ಯಾಹ್ನ 1.30ರಿಂದ : ಜಿಲ್ಲೆಯ ಸುಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆ ‘ವಾಲಿ ಮೋಕ್ಷ’

ಪ್ರಾಯೋಜಕತ್ವ : ಸುರೇಶ್ ಶೆಟ್ಟಿ ಪುಂಜಾಲಕಟ್ಟೆ

ಸಂಜೆ 6.00ರಿಂದ : ಜೈ ಹನುಮಾನ್ ಭಜನಾ ಮಂದಿರ ಮಂಜಲಪಲ್ಕೆ ಇದರ ಸದಸ್ಯರಿಂದ ಭಜನಾ ಕಾರ್ಯಕ್ರಮ

ರಾತ್ರಿ 7.30ಕ್ಕೆ: ಗೌರಿ ಮಹಾಪೂಜೆ, ಅಷ್ಟೋತ್ತರ ಕುಂಕುಮಾರ್ಚನೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ

ರಾತ್ರಿ 8.30ರಿಂದ : ತುಳುನಾಡ ಗಾನಗಂಧರ್ವ ಬಿರುದಾಂಕಿತ ಕಲರ್ಸ್ ಕನ್ನಡ ಖ್ಯಾತಿಯ ಜಗದೀಶ್ ಆಚಾರ್ಯ, ಪುತ್ತೂರು ಮತ್ತು ಬಳಗದವರಿಂದ ಸಂಗೀತ ಗಾನ ಸಂಭ್ರಮ

ತಾರೀಕು 19-09-2023, ಮಂಗಳವಾರ

ಬೆಳಗ್ಗೆ 6.00ಕ್ಕೆ : ಸ್ಥಳ ಶುದ್ಧಿ, ಪುಣ್ಯಾಹವಾಚನ, ಗಣಪತಿ ದೇವರ ಮೂರ್ತಿ ದಂಡಿ ಮೆರವಣಿಗೆಯಲ್ಲಿ ಮಂಟಪಕ್ಕೆ ಆಗಮನ, ತಿನಾರಿಕೇಳ ಗಣಹೋಮ

ಬೆಳಗ್ಗೆ 7.20ಕ್ಕೆ: ಶ್ರೀ ಗಣಪತಿ ದೇವರ ಪ್ರತಿಷ್ಠೆ

ಬೆಳಗ್ಗೆ 9.30ಕ್ಕೆ : 108 ತೆಂಗಿನಕಾಯಿ ಗಣಯಾಗ ಪ್ರಾರಂಭ

ಬೆಳಗ್ಗೆ 10.00ಕ್ಕೆ: ಗಣಯಾಗದ ಪೂರ್ಣಾಹುತಿ

12.15ಕ್ಕೆ : ಗಣಪತಿ ದೇವರಿಗೆ ವಿಶೇಷ ಪಲ್ಲಪೂಜೆ

12.30ಕ್ಕೆ : ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ.

ಮಧ್ಯಾಹ್ನ 1.30ರಿಂದ: ಸ್ಥಳೀಯ ಪ್ರತಿಭೆಗಳಿಂದ ಹಾಗೂ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ವಿವಿಧ ಸ್ಪರ್ಧಾ ಕಾರ್ಯಕ್ರಮಗಳು

ಸಂಜೆ 5.00ರಿಂದ : ಶ್ರೀ ದೇವಿ ಭಜನಾ ಮಂದಿರ (ರಿ) ಪುರಿಯ ಇದರ ಸದಸ್ಯರಿಂದ ಭಜನಾ ಕಾರ್ಯಕ್ರಮ

ರಾತ್ರಿ 6.00ರಿಂದ: ಧಾರ್ಮಿಕ ಸಭಾ ಕಾರ್ಯಕ್ರಮ

ರಾತ್ರಿ 7.30ಕ್ಕೆ: ದೀಪಾರಾಧನೆ, ವಿಶೇಷ ಪೂಜೆ, ಮಹಾ ಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ.

ರಾತ್ರಿ 8.00ರಿಂದ: ರಾಜೇಶ್ ಕಣ್ಣೂರು ಇವರ ಸಂಯೋಜನೆಯೊಂದಿಗೆ ತುಳುನಾಡ ವೈಭವ ಕಾರ್ಯಕ್ರಮ.

ತಾರೀಕು 20-09-2023, ಬುಧವಾರ

ಬೆಳಗ್ಗೆ 7.30ಕ್ಕೆ : ಗಣಹೋಮ

ಬೆಳಗ್ಗೆ 8.30ಕ್ಕೆ: ಶ್ರೀ ಗೌರಿ ಗಣೇಶ ಪೂಜೆ

ಮಧ್ಯಾಹ್ನ 12.30ಕ್ಕೆ: ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ

ಸಂಜೆ 4.00ರಿಂದ: ಶ್ರೀ ರಾಮಾಂಜನೇಯ ಭಜನಾ ಮಂದಿರ, ಶ್ರೀರಾಮ ನಗರ, ಪುಂಜಾಲಕಟ್ಟೆ ಇದರ ಸದಸ್ಯರಿಂದ ಕುಣಿತ ಭಜನೆ

ಸಂಜೆ 5.00ರಿಂದ: ಕುಣಿತ ಭಜನಾ ತಂಡ, ಚೆಂಡೆ, ನಾಸಿಕ್ ಬ್ಯಾಂಡ್, ಕೊಂಬು ವಾದ್ಯಘೋಷ, ವಿವಿಧ ವೇಷ-ಭೂಷಣ, ಅಮೋಘ ಸುಡುಮದ್ದು ಪ್ರದರ್ಶನದೊಂದಿಗೆ ಶ್ರೀ ಗೌರಿ ಗಣೇಶಮೂರ್ತಿಯ ಶೋಭಾಯಾತ್ರೆಯು ಪುಂಜಾಲಕಟ್ಟೆ ಬಂಗ್ಲೆ ಮೈದಾನದಿಂದ ಮಡಂತ್ಯಾರು ಪೇಟೆಯ ತನಕ ಸಾಗಿ ಮರಳಿ ಪುಂಜಾಲಕಟ್ಟೆ ದೈಕಿನಕಟ್ಟೆ ಬಳಿ ಹಿಂತಿರುಗಿ ಪುಂಜಾಲಕಟ್ಟೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಕೆರೆಯಲ್ಲಿ ಜಲಸ್ತಂಭನ ನಡೆಯಲಿದೆ.

 

More articles

Latest article