ಪೊಳಲಿ: ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಪೊಳಲಿ ಶ್ರೀ ರಾಜರಾಜೇಶ್ವರೀ ಸನ್ನಿಧಿಯಲ್ಲಿ ಇಂದು ಸೆ.೧೧ ಸೋಮವಾರದಂದು ತೆನೆಹಬ್ಬ ಆಚರಿಸಲಾಯಿತು.
ಭಕ್ತಾದಿಗಳು ಬೆಳಗ್ಗೆ ಸಾವಿರ ಸೀಮೆಯ ಒಡತಿಯ ಸನ್ನಿಧಿಯಲ್ಲಿ ಬಂದು ತಾಯಿಗೆ ಅರ್ಪಣೆ ಮಾಡಿದ ತೆನೆಯನ್ನು ಸಾವಿರ ಸೀಮೆಯ ಭಕ್ತಾಧಿಗಳು ದೇವಳದಿಂದ ಮನೆಮನೆಗೆ ಕೊಂಡೊಯ್ದು ಪುದ್ದರ್ ಆಚರಣೆ ಮಾಡುವ ಪದ್ಧತಿ ಹಿಂದಿನಿAದಲು ಬಂದ ಸಾಂಪ್ರದಾಯ.
ತಾವು ಬೆಳೆದ ಬೆಳೆಯ ಮೊದಲ ಫಸಲನ್ನು ತಾಯಿಗೆ ಅರ್ಪಿಸುವ ಮೂಲಕ ದೇವರಿಗೆ ಕೃತಜ್ಞತೆಯನ್ನು ಸಲ್ಲಿ ಸುವುದು ನಮ್ಮ ಹಿರಿಯರು ಆಚರಿಸಿಕೊಂಡು ಬಂದAತಹ ಆಚರಣೆ
ದೇಶವನ್ನು ಅತಿವೃಷ್ಟಿ,ಅನಾವೃಷ್ಟಿಗಳು ಕಾಡದೇ ಇರಲಿ ಊರು ಸುಭೀಕ್ಷವಾಗಿರಲಿ ಎಂಬ ಉದ್ದೇಶ ಹಾಗೂ ಧನ್ಯತಾಭಾವನೆಯಿಂದ ಇಂದು ತಾಯಿಗೆ ಪೂಜಾ ಕೈಂಕರ್ಯಗಳನ್ನು ನಡೆಸಿ ತೆನೆಯನ್ನು ಸಮರ್ಪಿಸುತ್ತಾರೆ. ದೇವಳದ ವರಾಂಗಣದಲ್ಲಿ ತೆನೆಯನ್ನು ಇಟ್ಟು ಅದನ್ನು ಪದಾರ್ಥಿಯೊಬ್ಬರು ಶಿರದಲ್ಲಿ ಹೊತ್ತುತಂದು ಧ್ವಜಸ್ತಂಭದ ಬುಡದಲ್ಲಿ ಇಟ್ಟ ಬಳಿಕ ದ ದೇವರ ಬಲಿ ಉತ್ಸವ ನಡೆಸುವ ಬ್ರಹ್ಮವಾಹಕ ಶಿರದಲ್ಲಿ ಹೊತ್ತು ದೇವಳದ ಸುತ್ತ ಪ್ರದಕ್ಷಿಣೆ ಬಂದು ತಾಯಿ ರಾಜರಾಜೇಶ್ವರಿಯ ಮಡಿಲಿನಲ್ಲಿರಿಸಿ ಪೂಜೆ ನೆರವೇರಿಸಿ ಪ್ರಾರ್ಥಿಸಿ ತೆನೆಯನ್ನು ಭಕ್ತರಿಗೆ ಪ್ರಸಾದ ರೂಪದಲ್ಲಿ ಹಂಚುತ್ತಾರೆ.
ದೇವಳದ ಆಡಳಿತ ಮೊಕ್ತೇಸರ ಡಾ. ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಮೊಕ್ತೇಸರರಾದ ಚೇರ ಸೂರ್ಯನಾರಾಯಣ ರಾವ್ , ದೇವಳದ ಅನುವಂಶಿಕ ಮೊಕ್ತೇಸರ ಪವಿತ್ರಪಾಣಿ ಮಾಧವ ಭಟ್, ನಾರಾಯಣ ಭಟ್, ಕೆ.ರಾಮ್ ಭಟ್, ಪರಮೇಶ್ವರ ಭಟ್ ದೇವಳದ ಅರ್ಚಕರು, ಕಾರ್ಯನಿರ್ವಹಣಾಧಿಕಾರಿ ಪ್ರವೀಣ್, ಸಾವಿರ ಸೀಮೆಯ ಭಕ್ತಾಧಿಗಳು ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಿದರು.