Wednesday, April 17, 2024

ರಂಗಕರ್ಮಿ ಮಂಜು ವಿಟ್ಲ ಅವರಿಗೆ ಶ್ರದ್ಧಾಂಜಲಿ

ವಿಟ್ಲ: ಮಂಗಳೂರಿನಲ್ಲಿ ಸೆ. 6ರಂದು ನಿಧನ ಹೊಂದಿದ ಖ್ಯಾತ ರಂಗಕರ್ಮಿ ಮಂಜು ವಿಟ್ಲ ಅವರಿಗೆ ವಿಟ್ಲ ಪಂಚಲಿಂಗೇಶ್ವರ ಸದನದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.

ಖ್ಯಾತ ನಟ, ಕಲಾರತ್ನ ನಂದಾವರ ಪ್ರೇಮಾನಂದ ಭಟ್ ಮತ್ತು ವಿಟ್ಲ ಅರಮನೆ ಕೃಷ್ಣಯ್ಯ ಬಲ್ಲಾಳ್ ನುಡಿನಮನ ಸಲ್ಲಿಸಿದರು.

ವಿಟ್ಲದ ಹೆಸರನ್ನು ರಂಗಭೂಮಿ ಸಹಿತ ಕರಾವಳಿಯ ಸಾಂಸ್ಕೃತಿಕ ಕ್ಷೇತ್ರದಲ್ಲಿ ಗುರುತಿಸುವಲ್ಲಿ ಮಂಜು ವಿಟ್ಲ ಅವರ ಕೊಡುಗೆ ಅಪಾರ. ನಟ, ನಿರ್ದೇಶಕ, ಮೇಕಪ್ ಕಲಾವಿದ , ಸಂಘಟಕ, ತರಬೇತುದಾರನಾಗಿ ಸಮಾಜಮುಖಿಯಾಗಿದ್ದ ಮಂಜು ಸುಮಾರು ಮೂರು ದಶಕಗಳ ಹಿಂದೆ ವೃತ್ತಿ ಬದುಕಿಗಾಗಿ ವಿಟ್ಲದಿಂದ ಜಿಲ್ಲೆಯ ಇತರ ಕಡೆ ವಾಸಸ್ಥಾನ ಬದಲಾಯಿಸಿದರೂ ಅನನ್ಯ ಸಾಧನೆಗಳನ್ನು ವಿಟ್ಲದ ಜನತೆ ಮರೆಯಲಾರರು ಎಂದು ತಿಳಿಸಿದರು.

ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಿ ಸದ್ಗತಿ ಕೋರಲಾಯಿತು. ಮಂಜು ವಿಟ್ಲ ಅವರ ಸಹವರ್ತಿ ‌ಗಳು ಹಾಗೂ ಹಿತೈಷಿಗಳು ಆಯೋಜಿಸಿದ್ದ ಸಭೆಯಲ್ಲಿ

ರಮಾನಾಥ ವಿಟ್ಲ, ಮಂಗೇಶ ಭಟ್, ತುಳಸಿದಾಸ ಶೆಣೈ, ಜಯರಾಮ ಬಲ್ಲಾಳ್, ವಿಜಯ, ಸುರೇಶ್ ಮೊದಲಾದವರು ಪಾಲ್ಗೊಂಡಿದ್ದರು.

More from the blog

ಏ.19 -28: ಇತಿಹಾಸ ಪ್ರಸಿದ್ಧ ಕಟ್ಟತ್ತಿಲ ಉರೂಸ್

ವಿಟ್ಲ: ಸಾಲೆತ್ತೂರು ಗ್ರಾಮದ ಕಟ್ಟತ್ತಿಲದಲ್ಲಿ ಅಂತ್ಯ ವಿಶ್ರಾಂತಿ ಹೊಂದುತ್ತಿರುವ ಇತಿಹಾಸ ಪ್ರಸಿದ್ಧ ಅಸ್ಸಯ್ಯಿದ್ ವಲಿಯುಲ್ಲಾಹಿ (ಖ.ಸಿ) ಅವರ ಹೆಸರಿನಲ್ಲಿ 2 ವರ್ಷಕ್ಕೊಮ್ಮೆ ನಡೆಸಿಕೊಂಡು ಬರುತ್ತಿರುವ ಉರೂಸ್ ಕಾರ್ಯಕ್ರಮ ಮತ್ತು ವಿವಿಧ ಆಧ್ಯಾತ್ಮಿಕ ಕಾರ್ಯಕ್ರಮ...

ಹಿಂದೂ‌ ಸಂಘಟನೆಯ ಕಾರ್ಯಕರ್ತನಿಗೆ ಚೂರಿ ಇರಿತ

ಬಂಟ್ವಾಳ : ಹಿಂದೂ ಸಂಘಟನೆಯ ಮುಖಂಡನೋರ್ವನಿಗೆ ಸ್ನೇಹಿತ ಚೂರಿಯಿಂದ ಇರಿದ ಘಟನೆ ಬಂಟ್ವಾಳದಲ್ಲಿ ನಡೆದಿದ್ದು, ಗಂಭೀರವಾಗಿ ಗಾಯಗೊಂಡಿರುವ ಈತನನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಹಿಂದೂಯುವಸೇನೆಯ ಮುಖಂಡನಾಗಿದ್ದು, ಉದ್ಯಮಿಯಾಗಿರುವ...

ಗುಡ್ಡೆ ಅಂಗಡಿ ನೂರೂದ್ದೀನ್ ಮಸೀದಿಯಲ್ಲಿ ಈದ್ ಮುಬಾರಕ್ ಆಚರಣೆ

ಗುಡ್ಡೆ ಅಂಗಡಿ ನೂರೂದ್ದೀನ್ ಮಸೀದಿಯಲ್ಲಿ ಈದ್ ಮುಬಾರಕ್ ಆಚರಣೆ ನಡೆಯಿತು. ಖತೀಬರಾದ ಅಸ್ವೀಫ್ ಧಾರಿಮಿ ಅವರು ನೇತೃತ್ವ ವಹಿಸಿ ಈದ್ ಸಂದೇಶವನ್ನು ಸಾರಿದರು.. ಪುರಸಭಾ ಸದಸ್ಯ ಅಬುಬಕ್ಕರ್ ಸಿದ್ದೀಕ್, ಎನ್‌.ಜೆ.ಎಮ್ ಮಸೀದಿ  ಇದರ ಅಧ್ಯಕ್ಷ...

ಮನೆಯೊಳಗೆ ‌ನುಗ್ಗಿ ವ್ಯಕ್ತಿಗೆ ಚೂರಿ ಇರಿತ : ಆರೋಪಿ ಪರಾರಿ

ಬಂಟ್ವಾಳ: ಮನೆಯೊಳಗೆ ‌ನುಗ್ಗಿ ವ್ಯಕ್ತಿಯೋರ್ವನಿಗೆ ಚೂರಿ ಹಾಕಿ ಪರಾರಿಯಾಗಿರುವ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಪುದು ಎಂಬಲ್ಲಿ ನಡೆದಿದೆ. ಪುದು ಗ್ರಾಮದ 10 ನೇ ಮೈಲಿಕಲ್ಲು ನಿವಾಸಿ...