Thursday, October 26, 2023

ಮಣಿಲ-ಕೂರೇಲು ರಸ್ತೆ ಮೇಲೆ ಧರೆ ಕುಸಿತ: ನಿತ್ಯ ಸಂಚಾರಕ್ಕೆ ಸಂಚಕಾರ

Must read

ವಿಟ್ಲ: ಬಂಟ್ವಾಳ ತಾಲೂಕಿನ ಪುಣಚ ಗ್ರಾಮದ ದೇವರಗುಂಡಿ ಮಣಿಲಾ ಕೂರೇಲು ಸ್ಮಶಾನ ರಸ್ತೆಯ ಮೇಲೆ ಧರೆ ಕುಸಿದು ಬಿದ್ದು ರಸ್ತೆಯಲ್ಲಿ ಸಂಚಾರ ಅಯೋಮಯವಾಗಿದೆ.

ಸಾರ್ವಜನಿಕರು ಪರದಾಡುತ್ತಿದ್ದಾರೆ. ಖಾಸಗಿ ಜಮೀನಿನವರ ಅವೈಜ್ಞಾನಿಕ ಕಾಮಗಾರಿಯಿಂದ ರಸ್ತೆ ಬದಿ ಕುಸಿಯುತ್ತಿದ್ದು, ಸಾರ್ವಜನಿಕರು ಜೀವ ಕೈಯಲ್ಲಿ ಹಿಡಿದು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಾಕಷ್ಟು ಬಾರಿ ಈ ಬಗ್ಗೆ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ದೂರು ನೀಡಿದರೂ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಶಾಲೆಗೆ ತೆರಳುವ ಮಕ್ಕಳು, ಮಹಿಳೆಯರು ಭಯದ ವಾತಾವರಣದಲ್ಲಿಯೇ ಓಡಾಡುವ ಪರಿಸ್ಥಿತಿ ಉಂಟಾಗಿದೆ. ಕೆಲ ವರ್ಷಗಳ ಹಿಂದೆ ಸ್ಥಳಕ್ಕೆ ಭೇಟಿ ನೀಡಿದ್ದ ಸಹಾಯಕ ಕಮೀಶನ್ ಅವರು ಮಣ್ಣು ತೆಗೆದ ಜಾಗಕ್ಕೆ ಮಣ್ಣು ಹಾಕಿ ಕಲ್ಲುಕಟ್ಟಿ ಕೊಡುವಂತೆ ಸೂಚಿಸಿದ್ದರು. ಅದರಂತೆ ಮುಚ್ಚಳಿಕೆ ಪತ್ರವನ್ನು ಬರೆಸಿಕೊಂಡಿದ್ದರು. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳದೇ ಇರುವುದರಿಂದ ರಸ್ತೆಯ ಬದಿಯ ಧರೆ ಮತ್ತೆ ಮತ್ತೆ ಜರಿದು ಬಿದ್ದು ಅನಾಹುತಗಳಿಗೆ ಅವಕಾಶವಾಗುತ್ತಿದೆ. ಇನ್ನಾದರೂ ಈ ಬಗ್ಗೆ ಕೂಡಲೇ ಸೂಕ್ತ ಕ್ರಮಕೈಗೊಳ್ಳುವಂತೆ ನಾಗರಿಕರು ಆಗ್ರಹಿಸಿದ್ದಾರೆ.

More articles

Latest article