Tuesday, October 17, 2023

ಅಕ್ರಮವಾಗಿ ದನದ ಮಾಂಸ ಸಾಗಾಟ: ಮೂವರು ವಶಕ್ಕೆ

Must read

ಮಂಗಳೂರು: ಜೋಕಟ್ಟೆಯಿಂದ ನಗರದ ಬೀಫ್‌ ಸ್ಟಾಲ್‌ಗ‌ಳಿಗೆ ಅಕ್ರಮವಾಗಿ ದನದ ಮಾಂಸ ಸಾಗಾಟ ಮಾಡುತ್ತಿದ್ದ ವಾಹನವೊಂದನ್ನು ಉರ್ವಸ್ಟೋರ್‌ನಲ್ಲಿ ಬಜರಂಗದಳದ ಕಾರ್ಯಕರ್ತರು ತಡೆದು ನಿಲ್ಲಿಸಿ, ವಾಹನದಲ್ಲಿದ್ದವರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ

ಕಳವಾರು ಗ್ರಾಮದ ದಾವೂದ್‌, ಜೋಕಟ್ಟೆಯ ಬದ್ರುದ್ದೀನ್‌ ಮತ್ತು ಯಾಸೀನ್‌ ಬಂಧಿತರು.

ವಾಹನದಲ್ಲಿ 2.5 ಕ್ವಿಂಟಾಲ್‌ಗಿಂತಲೂ ಹೆಚ್ಚಿನ ಪ್ರಮಾಣದ ದನದ ಮಾಂಸವನ್ನು ಸಾಗಿಸುತ್ತಿದ್ದರು ಎಂದು ತಿಳಿದು ಬಂದಿದೆ. ಇನ್ನು ಈ ಬಗ್ಗೆ ಗೋ ಹತ್ಯಾ ನಿಷೇಧ ಕಾಯ್ದೆಯಡಿ ಉರ್ವ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

More articles

Latest article