Wednesday, October 25, 2023

ಕೊಯಿಲ ಶ್ರೀ ಗುರುಗಣೇಶ್ ಭಜನಮಂಡಳಿಯಿಂದಸೆ.10ರಂದು ಕೊಯಿಲದಲ್ಲಿ 19 ನೇ ವರ್ಷದ ಮೊಸರು ಕುಡಿಕೆ ಉತ್ಸವ, ಕುಸಲ್ದ ಗೌಜಿ ಪಂಥ

Must read

ಬಂಟ್ವಾಳ : ಬಂಟ್ವಾಳ ತಾಲೂಕು ಕೊಯಿಲ ಶ್ರೀ ಗುರುಗಣೇಶ್ ಭಜನ ಮಂಡಳಿ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 19ನೇ ವರ್ಷದ ಮೊಸರು ಕುಡಿಕೆ ಉತ್ಸವ ಹಾಗೂ ಕುಸಲ್ದ ಗೌಜಿ ಪಂಥ ಸೆ.10ರಂದು ಕೊಯಿಲ ದಿ.ದೇವಪ್ಪ ಶೆಟ್ಟಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಬೆಳಗ್ಗೆ ಮಾವಂತೂರು ಶ್ರೀ ಮಹಾಗಣಪತಿ ದೇವಸ್ಥಾನದ ಪ್ರ.ಅರ್ಚಕ ಸುಂದರ ಹೊಳ್ಳ ಅವರು ಧ್ವಜಾರೋಹಣಗೈಯ್ಯುವರು.ಆಡಳಿತ ಮೊಕ್ತೇಸರ ಪದ್ಮರಾಜ ಬಲ್ಲಾಳ್ ಉದ್ಘಾಟಿಸುವರು. ಕಾರ್ಯಕ್ರಮದಲ್ಲಿ ಮಕ್ಕಳಿಗೆ ಶ್ರೀ ಕೃಷ್ಣ ವೇಷ ಸ್ಪರ್ಧೆ, ಸಾರ್ವಜನಿಕರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದೆ. ಸಂಜೆ ಸಮಾರೋಪದಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಎಬಿವಿಪಿ ಪ್ರಮುಖ್ ಕೇಶವ ಬಂಗೇರ, ಹಿಂದೂ ಸಂಘಟನೆಗಳ ಪ್ರಮುಖರಾದ ಮಹೇಶ್ ಶೆಟ್ಟಿ ತಿಮರೋಡಿ, ಅರುಣ್ ಕುಮಾರ್ ಪುತ್ತಿಲ, ನಿವೃತ್ತ ಸೇನಾಽಕಾರಿ ಕ್ಯಾ| ಬೃಜೆಶ್ ಚೌಟ ಮತ್ತಿತರರರು ಭಾಗವಹಿಸಲಿರುವರು.

ಸಾಧಕರಿಗೆ ಸಮ್ಮಾನ, ಕಂಬಳ ಕೋಣಗಳಿಗೆ ಗೌರವ, ಸಾಂಸ್ಕೃತಿಕ ಕಾರ್ಯಕ್ರಮಗಳು,ಕುಸಲ್ದ ಗೌಜಿ ಪಂಥ ನಡೆಯಲಿದೆ ಎಂದು ಅಧ್ಯಕ್ಷ ಸಂತೋಷ್ ಅಂಚನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

More articles

Latest article