ಬಂಟ್ವಾಳ: ಹಿರಿಯ ಕಾಂಗ್ರೆಸ್ ನಾಯಕ ಬಿ.ಜನಾರ್ದನ ಪೂಜಾರಿ ಅವರ ಮನೆಗೆ ಸಚಿವ ಬೋಸರಾಜು ಅವರು ಬೇಟಿ ನೀಡಿ ಕಾಲಿಗೆ ಬಿದ್ದು ಅಶ್ರೀರ್ವಾದ ಪಡೆದರು.
ಬಳಿಕ ಹಳೆಯ ಕಾಲದ ನೆನಪುಗಳನ್ನು ಮೆಲುಕು ಹಾಕಿದರು. ಕಾಂಗ್ರೆಸ್ ಪಕ್ಷದ ಸಂಘಟನಾ ವಿಚಾರದಲ್ಲಿ ಜನಾರ್ದನ ಪೂಜಾರಿ ನಮಗೆಲ್ಲ ಮಾರ್ಗದರ್ಶನ, ಜನಾರ್ದನ ಪೂಜಾರಿ ಹಾಕಿಕೊಟ್ಟ ಹಾದಿಯಲ್ಲಿ ರಾಜಕೀಯ ಮಾಡುತ್ತೇವೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆ ಇಂದಿಗೂ ಕೂಡ ಅಚ್ಚಳಿಯದೆ ಉಳಿದಿದ್ದು, ಕಾಂಗ್ರೆಸ್ ಪಕ್ಷಕ್ಕೆ ಅವರು ನೀಡಿದ ಕೊಡುಗೆ ಅಪಾರವಾದದ್ದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಬಂಟ್ವಾಳ ಮತ್ತು ವಿವಿಧ ಕಡೆಯ ರಾಜಕೀಯ ಗಣ್ಯರು ಹಾಜರಿದ್ದರು