Sunday, April 14, 2024

ಪುಣಚ ವ್ಯವಸಾಯ ಸೇವಾ ಸಹಕಾರ ಸಂಘದ ಸಾಮಾನ್ಯ ಸಭೆ

ಪುಣಚ: ಪುಣಚ ವ್ಯವಸಾಯ ಸೇವಾ ಸಹಕಾರ ಸಂಘದ ೨೦೨೨-೨೩ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಸಂಘದ ಸಭಾಭವನದಲ್ಲಿ ನಡೆಯಿತು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೀರಪ್ಪ ಮೂಲ್ಯ ಎಮ್. ೨೦೨೨-೨೩ನೇ ಸಾಲಿನ ವಾರ್ಷಿಕ ವರದಿಯನ್ನು ವಾಚಿಸಿ ಸಂಘವು ಪ್ರಸ್ತುತ ಸಾಲಿನಲ್ಲಿ “ಎ” ತರಗತಿಯಲ್ಲಿ ವರ್ಗೀಕರಣಗೊಂಡಿದೆ. ವರದಿ ವರ್ಷದಲ್ಲಿ ೪,೮೫,೮೫,೦೫೦ ಪಾಲು ಬಂಡವಾಳ, ೪೯,೭೪,೫೧,೪೯೫.೭೧ ಠೇವಣಾತಿಗಳನ್ನು ಹೊಂದಿದ್ದು ರೂ.೮,೯೭,೫೯೮.೩೨ ವ್ಯಾಪಾರ ಲಾಭ ಬಂದಿರುತ್ತದೆ. ಪ್ರಸಕ್ತ ಸಾಲಿನಲ್ಲಿ ೨೫೭ ಕೋಟಿಗೂ ಮಿಕ್ಕಿ ವಾರ್ಷಿಕ ವ್ಯವಹಾರ ನಡೆಸಿದೆ ಎಂದು ಹೇಳಿದರು. ೨೦೨೩-೨೪ನೇ ಸಾಲಿನ ಕಾರ್ಯಯೋಜನೆಗಳನ್ನು ತಿಳಿಸಿದರು. ಸಂಘದ ಪ್ರಗತಿಗೆ ಕಾರಣರಾದ ಸದಸ್ಯರಿಗೆ, ಠೇವಣಿದಾರರಿಗೆ, ಸಾಲಗಾರರಿಗೆ, ಸಿಬಂದಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಶಾಖಾ ಮ್ಯಾನೇಜರ್ ಶಂಕರ್ ಹಿಂದಿನ ಮಹಾಸಭೆಯ ನಡಾವಳಿಗಳನ್ನು ಓದಿದರು. ಲೆಕ್ಕಪರಿಶೋಧನಾ ವರದಿ, ಅನುಪಾಲನಾ ವರದಿ ಮಂಡಿಸಲಾಯಿತು.ಸಂಘದ ಅಧ್ಯಕ್ಷ ಜನಾರ್ಧನ ಭಟ್ ಮಾತನಾಡಿ ೨೦೨೨-೨೩ನೇ ಸಾಲಿನ ಲಾಭ ವಿಂಗಡಣೆ ತಿಳಿಸಿ ಸಂಘವು ೧,೯೯,೮೨,೫೯೪.೮೫ ಲಾಭ ಗಳಿಸಿದ್ದು ಸದಸ್ಯರಿಗೆ ಶೇ.೧೦ ಡಿವಿಡೆಂಡ್ ನೀಡಲಾಗುವುದು ಎಂದರು.

ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ನಿವೇಶನ ಖರೀದಿ ಮಾಡಿದ್ದೇವೆ. ಮುಂದಿನ ಕಾರ್ಯಯೋಜನೆಗಳ ಅನುಷ್ಠಾನಕ್ಕೆ ಕ್ಷೇಮನಿಧಿ ಹೆಚ್ಚಳ ಮಾಡಲಾಗಿದೆ. ವ್ಯವಹಾರದ ವಿಸ್ತರಣೆಗೆ ಹೊಸ ಕಟ್ಟಡದ ಅಗತ್ಯವಿದೆ ಎಂದು ತಿಳಿಸಿದರು.

೨೦೨೪ರ ಜನವರಿಯಲ್ಲಿ ನೂತನ ಆಡಳಿತ ಮಂಡಳಿ ರಚನೆಯಾಗಲಿದೆ. ನಮ್ಮ ಆಡಳಿತಾವಧಿಯಲ್ಲಿ ಸಹಕಾರ ನೀಡಿದ ಎಲ್ಲಾ ನಿರ್ದೇಶಕರುಗಳಿಗೆ, ಸಿಬಂದಿಗಳಿಗೆ ಹಾಗೂ ಸದಸ್ಯರಿಗೆ ಕೃತಜ್ಞತೆ ತಿಳಿಸಿದರು.ಗ್ರಾಮ ಪಂಚಾಯತ್‌ಗೆ ಪ್ರತ್ಯೇಕ ಸಹಕಾರ ಸಂಘ ಸ್ಥಾಪನೆ ಕುರಿತು ಇಲಾಖೆಯ ಆದೇಶದ ಬಗ್ಗೆ ಚರ್ಚೆ ನಡೆಯಿತು. ಅಧ್ಯಕ್ಷರು ವಿಷಯ ಪ್ರಸ್ತಾಪಿಸಿ ಪ್ರಸ್ತುತ ಸಂಘವು ಪುಣಚ ಮತ್ತು ಕೇಪು ಗ್ರಾಮ ಪಂಚಾಯತ್ ಒಳಪಟ್ಟು ಕಾರ್ಯನಿರ್ವಹಿಸುತ್ತಿದೆ. ಕೇಪು ಗ್ರಾಮಕ್ಕೆ ಸಂಬಂದಿಸಿ ಪ್ರತ್ಯೇಕ ಸಹಕಾರ ಸಂಘ ರಚನೆ ಕುರಿತಂತೆ ಸದಸ್ಯರು ಅಭಿಪ್ರಾಯ ತಿಳಿಸುವಂತೆ ಹೇಳಿದರು.

ಸದಸ್ಯರುಗಳು ಪರ ವಿರೋಧ ಅಭಿಪ್ರಾಯ ತಿಳಿಸಿದರು. ಬಳಿಕ ಎಲ್ಲರ ಅಭಿಪ್ರಾಯ ಪಡೆದುಕೊಂಡು ಆಡಳಿತ ಮಂಡಳಿ ತೀರ್ಮಾನ ತೆಗೆದುಕೊಳ್ಳುವ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದೆಂದು ಹೇಳಿದರು.

ಸಂಘದ ವ್ಯಾಪ್ತಿಗೆ ಒಳಪಟ್ಟ ಅನಾರೋಗ್ಯದಿಂದ ಬಳಲುತ್ತಿರುವ ಸದಸ್ಯರಿಗೆ ಸಂಘದ ವತಿಯಿಂದ ಪರಿಹಾರ ಧನ ವಿತರಿಸಲಾಯಿತು. ಸದಸ್ಯರಾದ ದುಗ್ಗಯ್ಯ, ಕಲಾವತಿ, ದಯಾನಂದ, ವೆಂಕಪ್ಪ ಗೌಡ, ನೀಲಮ್ಮ, ಫ್ರಾನ್ಸಿಸ್ ಕುಟಿನ್ಹಾ, ಮೀನಾಕ್ಷಿ, ಪುರುಷೋತ್ತಮ, ರಾಮ ಮುಗೇರರವರಿಗೆ ಚಿಕಿತ್ಸಗೆ ಪರಿಹಾರ ಧನ ವಿತರಿಸಲಾಯಿತು.

ಸದಸ್ಯರು ವಿವಿಧ ವಿಷಯಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿ ಚರ್ಚೆಯಲ್ಲಿ ಪಾಲ್ಗೊಂಡರು. ನಿರ್ದೇಶಕರಾದ ದೇವಿಪ್ರಸಾದ್ ಕೆ., ಉದಯಕುಮಾರ್ ಡಿ., ಕೃಷ್ಣಪ್ಪ ಪುರುಷ, ರಾಜೀವಿ, ಬಾಲಚಂದ್ರ ಕೆ., ಭಾರತಿ ಜೆ. ಭಟ್, ಜಗದೀಶ, ಗೋವಿಂದ ನಾಯ್ಕ ಬಿ., ತಾರನಾಥ ಆಳ್ವ, ರಾಧಾಕೃಷ್ಣ ಪಿ., ಪ್ರವೀಣ್ ಶೆಟ್ಟಿ,.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರತಿನಿಧಿ ಯೋಗೀಶ್ ಉಪಸ್ಥಿತರಿದ್ದರು. ಗ್ರಂಥಪಾಲಕಿ ಜಯಲಕ್ಷ್ಮಿ ಪ್ರಾರ್ಥಿಸಿ ಸಂಘದ ಉಪಾಧ್ಯಕ್ಷ ಸಂತೋಷ್ ವಂದಿಸಿದರು.

ಹಿರಿಯ ಸಾಧಕ ಸದಸ್ಯರಿಗೆ ಸನ್ಮಾನವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿರಿಯ ಸದಸ್ಯರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ವಳಕಟ್ಟೆ ಶಂಕರ ಭಟ್, ಶ್ರೀನಿವಾಸ ರೈ ಕುಂಡಕೋಳಿ, ಜಯಂತ್ ನಾಯಕ್ ಪೊಸವಳಿಕೆ ಹಾಗೂ ರಾಮನಾಯ್ಕ ಪೊಸವಳಿಕೆರವರನ್ನು ಸನ್ಮಾನಿಸಲಾಯಿತು.

More from the blog

ಮತದಾರರ ಜಾಗೃತಿ ಕಾರ್ಯಕ್ರಮ, ಕಾಲ್ನಡಿಗೆ ಜಾಥಾ ಹಾಗೂ ಬೀದಿನಾಟಕ

ತಾಲೂಕು ಪಂಚಾಯತ್‌ ಬಂಟ್ವಾಳ, ತಾಲೂಕು ಸ್ವೀಪ್‌ ಸಮಿತಿ, ಕಂದಾಯ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ, ಬಂಟ್ವಾಳ ಪುರಸಭೆ, ರಾಷ್ಟ್ರೀಯ ಸೇವಾ ಯೋಜನೆ, ಮತದಾರರ ಸಾಕ್ಷರತಾ...

ಕಾಸರಗೋಡು ಜಿಲ್ಲೆಯಲ್ಲಿ ರಾಜಕೀಯ ಲಾಭಕ್ಕಾಗಿ ಬ್ರಹ್ಮ ಶ್ರೀ ನಾರಾಯಣ ಗುರುಗಳ ಪೋಟೋ ಬಳಕೆ ಖಂಡನೀಯ-ಜಗದೀಶ್ ಕೊಯಿಲ

ಬಂಟ್ವಾಳ: ಕಾಸರಗೋಡು ಜಿಲ್ಲೆಯಲ್ಲಿ ರಾಜಕೀಯ ಲಾಭಕ್ಕಾಗಿ ಬ್ರಹ್ಮ ಶ್ರೀ ನಾರಾಯಣ ಗುರುಗಳ ಪೋಟೋ ಬಳಕೆ ಮಾಡಿದ್ದು ಖಂಡನೀಯ ಎಂದು ಜಗದೀಶ್ ಕೊಯಿಲ ತಿಳಿಸಿದ್ದಾರೆ. ಅವರು ಬಿಸಿರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ರಾಷ್ಟ್ರೀಯ...

ಕೆ.ಎಸ್.ಆರ್.ಟಿ.ಸಿ.ಬಸ್ ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಬೈಕ್ : ಮೂವರಿಗೆ ಗಾಯ

ಬಂಟ್ವಾಳ: ಕೆ.ಎಸ್.ಆರ್.ಟಿ.ಸಿ.ಬಸ್ ಗೆ ಹಿಂಬದಿಯಿಂದ ಬೈಕ್ ಡಿಕ್ಕಿಯಾಗಿ ಬೈಕಿನಲ್ಲಿದ್ದ ಮೂವರು ಗಾಯಗೊಂಡ ಘಟನೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ತುಂಬೆ ಸಮೀಪದ ಕಡೆಗೋಳಿ ಎಂಬಲ್ಲಿ ನಡೆದಿದೆ. ಮಂಗಳೂರಿನಿಂದ ಬರುತ್ತಿದ್ದ ಕೆ.ಎಸ್.ಆರ್.ಟಿ‌.ಸಿ.ಬಸ್ ಗೆ ಹೆಲ್ಮೆಟ್ ಧರಿಸಿದೆ...

ಮನೆ ಮನೆಗೆ ತೆರಳಿ ಲೋಕಸಭಾ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಪರ ಮತಯಾಚನೆ

ನಮ್ಮ ಬೂತ್ ನಮ್ಮ ಹೊಣೆ ಘೋಷನೇಯಂತೆ ಬೂತ್ ಸಂಖ್ಯೆ 126 ವಾರ್ಡ್ 12 ರ ಅಜ್ಜೀಬೆಟ್ಟು ನಲ್ಲಿ ಮನೆ ಮನೆಗೆ ತೆರಲಿ ಲೋಕ ಸಭಾ ಅಭ್ಯರ್ಥಿ ಪದ್ಮರಾಜ್ ಪೂಜಾರಿಯವರ ಪರವಾಗಿ ಮತ ಯಾಚನೆ...