Sunday, October 22, 2023

ಫ್ಯಾನ್ಸ್​​ಗೆ ಬಿಗ್​ ಶಾಕ್ ​​: ಭಾರತ-ಪಾಕಿಸ್ತಾನ್ ಪಂದ್ಯಕ್ಕೆ ಮಳೆ ಅಡ್ಡಿ

Must read

ಶ್ರೀಲಂಕಾದ ಪಲ್ಲೆಕೆಲೆ ಇಂಟರ್​ನ್ಯಾಷನಲ್​ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರೋ ಏಷ್ಯಾಕಪ್​​ ಮಹತ್ವದ ಪಂದ್ಯದಲ್ಲಿ ಟೀಂ ಇಂಡಿಯಾ, ಪಾಕ್​​ ತಂಡಗಳು ಮುಖಾಮುಖಿ ಆಗಿವೆ.

ಟಾಸ್​ ಗೆದ್ದ ಕ್ಯಾಪ್ಟನ್​ ರೋಹಿತ್​ ಶರ್ಮಾ ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಪಾಕ್​​ ತಂಡವು ಫೀಲ್ಡಿಂಗ್​​ ಮಾಡುತ್ತಿದೆ.

ಟೀಂ ಇಂಡಿಯಾದ ಪರ ಕ್ಯಾಪ್ಟನ್​ ರೋಹಿತ್​​ ಶರ್ಮಾ, ಯಂಗ್​​ ಅಂಡ್​​ ಎನರ್ಜಿಟಿಕ್​​​​ ಆಟಗಾರ ಶುಭ್ಮನ್​​ ಗಿಲ್​​​ ಓಪನಿಂಗ್​ ಮಾಡಿದರು. ಶಾಹೀನ್​ ಅಫ್ರಿದಿ 5ನೇ ಓವರ್​​ನಲ್ಲಿ ದಿಢೀರ್​ ಎಂದು ಮಳೆ ಬಂದು ನಡೆಯುತ್ತಿದ್ದ ಪಂದ್ಯಕ್ಕೆ ಅಡ್ಡಿಪಡಿಸಿದೆ. ಮಳೆ ಹೆಚ್ಚಾಗುತ್ತಿದ್ದಂತೆ ಪಂದ್ಯವನ್ನು ಸ್ಥಗಿತಗೊಳಿಸಲಾಗಿದೆ.

ಸದ್ಯ ಪಿಚ್​ನಲ್ಲಿ ಕವರ್ ಹೊದಿಸಲಾಗಿದ್ದು, ಆಟಗಾರರು ಡ್ರೆಸ್ಸಿಂಗ್ ರೂಮ್​ನತ್ತ ಮರಳಿದ್ದಾರೆ. ಇನ್ನು ಮಳೆ ನಿಂತ ಬಳಿಕ ಪಂದ್ಯ ಮುಂದುವರೆಯಬಹುದು.

More articles

Latest article