Sunday, October 22, 2023

ನಿಧನ: ಆಟೊ ಚಾಲಕ ಚಂದ್ರಶೇಖರ ದರಿಬಾಗಿಲು

Must read

ಬಂಟ್ವಾಳ: ಕಳೆದ ನಲ್ವತ್ತು ವರ್ಷಗಳಿಂದ ಬಿ.ಸಿ.ರೋಡ್ ಪರಿಸರದಲ್ಲಿ ಆಟೊ ಚಾಲಕರಾಗಿ ಪರಿಸರದಾದ್ಯಂತ ಜನಾನುರಾಗಿಯಾಗಿದ್ದ ಚಂದ್ರಶೇಖರ ದರಿಬಾಗಿಲು (66) ಅವರು ಅಲ್ಪಕಾಲದ ಅಸೌಖ್ಯದ ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಅವಿವಾಹಿತರಾಗಿದ್ದ ಅವರು ದರಿಬಾಗಿಲು ಎಂಬಲ್ಲಿ ವಾಸಿಸುತ್ತಿದ್ದರು. ಸೌಮ್ಯ ಸ್ವಭಾವದವರಾಗಿದ್ದು, ಬಿ.ಸಿ.ರೋಡ್ ಪರಿಸರದ ಜನರ ಅಚ್ಚುಮೆಚ್ಚಿನ ಆಟೊ ಚಾಲಕರಾಗಿದ್ದ ಅವರು, ತನ್ನ ಮಾನವೀಯ ಗುಣಗಳಿಂದ ಜನಪ್ರಿಯರಾಗಿದ್ದರು.

More articles

Latest article