ಬಂಟ್ವಾಳ: ತುಳುಕೂಟ ಬಂಟ್ವಾಳ ಇದರ ವತಿಯಿಂದ ಇತ್ತೀಚೆಗೆ ಅಗಲಿದ ರಂಗಕರ್ಮಿ, ತರಬೇತುದಾರ ದಿವಂಗತ ಮಂಜು ವಿಟ್ಲ ಅವರ ಸಾರ್ವಜನಿಕ ಶೃದ್ದಾಂಜಲಿ ಸಭೆಯು ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ಶನಿವಾರ ಸಂಜೆ ನಡೆಯಿತು.
ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ್ ಸ್ವಾಮೀಜಿ ಅವರು ದಿವಂಗತ ಮಂಜುವಿಟ್ಲ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಮಾತನಾಡಿ,ಜಗತ್ತಿನಲ್ಲಿ ಪ್ರೀತಿಗಿಂತ ದೊಡ್ಡ ಸಂಪತ್ತು ಬೇರೆ ಯಾವುದಿಲ್ಲ, ಮಾನವೀಯ ಮೌಲ್ಯವನ್ನು ಮೈಗೂಡಿಸಿಕೊಂಡಿದ್ದ ದಿ. ಮಂಜುವಿಟ್ಲ ತಮ್ಮ ಜೀವನದಲ್ಲಿ ಆದರ್ಶವಾಗಿ ಬಾಳಿದ್ದರು,ಯಾವತ್ತು ಕೂಡ ಅವರು ಜಾತಿ ವ್ಯಾಮೋಹ ತೋರಿಸದೆ ಸರ್ವಜಾತಿಯವರೊಂದಿಗೆ ಬೆಸೆದುವರು ಎಂದು ನುಡಿದರು.
ಕರ್ನಾಟಕ ತುಳುಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷ ಎ.ಸಿ.ಭಂಡಾರಿ ಅವರು ತನ್ನ ಜೀವನದಲ್ಲಿ ಮರೆಯಲಾಗದ ವ್ಯಕ್ತಿಗಳ ಪೈಕಿ ದಿ.ಮಂಜು ವಿಟ್ಲ ಒರ್ವರು,ನಂದಾವರ ಕ್ಷೇತ್ರದ ಪ್ರತಿ ಕಾರ್ಯಕ್ರಮದಲ್ಲು ಅವರು ಸಕ್ರಿಯವಾಗಿ ತೊಡಗಿಸಿ ಯಶಸ್ವಿಗೂ ಕಾರಣರಾಗುತ್ತಿದ್ದರು ಎಂದು ನುಡಿನಮನ ಸಲ್ಲಿಸಿದರು.
ಹಿರಿಯ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ ಶೆಟ್ಟಿ ಮಾತನಾಡಿ ದಿ.ಮಂಜುವಿಟ್ಲ ಅವರು ಯಾವುದೇ ಪ್ರತಿಫಲಾಷೇಕ್ಷಯಿಲ್ಲದೆ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು ಎಂದು ನಡಿನಮನ ಸಲ್ಲಿಸಿದರು.
ಬಂಟ್ವಾಳ ತುಳುಕೂಟದ ಅಧ್ಯಕ್ಷ ಸುದರ್ಶನ್ ಜೈನ್ ಸಭಾಧ್ಯಕ್ಷತೆ ವಹಿಸಿ ದಿ.ಮಂಜುವಿಟ್ಲ ಅವರ ಗುಣಗಾನ ಮಾಡಿದರು.
ಬಿ.ಸಿ.ರೋಡಿನ ತುಳು ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ.ತುಕರಾಮ್ ಪೂಜಾರಿ,ನಿವೃತ್ತ ಶಿಕ್ಷಕ ಜಯಾನಂದ ಪೆರಾಜೆ,ಕಲಾವಿದ ಸದಾಶಿವ ತುಂಬೆ ಮೊದಲಾದವರು ನುಡಿನಮನ ಸಲ್ಲಿಸಿದರು. ಒಂದು ನಿಮಿಷ ಮೌನಪ್ರಾರ್ಥನೆಯ ಮೂಲಕ ಶೃದ್ದಾಂಜಲಿ ಅರ್ಪಿಸಲಾಯಿತು.
ತುಳುಕೂಟದ ಕಾರ್ಯದರ್ಶಿ ಎಚ್ ಕೆ.ನಯನಾಡು ಸ್ವಾಗತಿಸಿ,ನಿರೂಪಿಸಿ ಕೊನೆಯಲ್ಲಿ ವಂದಿಸಿದರು.