Wednesday, October 18, 2023

ತಾಲೂಕು ಪಂಚಾಯತ್ ಬಂಟ್ವಾಳ ಇದರ ಜಮಾಬಂದಿ ಕಾರ್ಯಕ್ರಮ

Must read

ಬಂಟ್ವಾಳ: ತಾಲೂಕು ಪಂಚಾಯತ್ ಬಂಟ್ವಾಳ ಇದರ 2022-23 ನೇ ಸಾಲಿನ ಜಮಾಬಂದಿ ಕಾರ್ಯಕ್ರಮ ತಾ.ಪಂ.ಸಭಾಂಗಣದಲ್ಲಿ ಜಿ‌.ಪಂ.ಯೋಜನಾ ನಿರ್ದೇಶಕ ಜಯರಾಮ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

2022-23 ನೇ ಸಾಲಿನಲ್ಲಿ ತಾಲೂಕಿನ ತಾ‌.ಪಂ.ನ ಅಡಿಯಲ್ಲಿ ಬರುವ ಇಲಾಖೆಗಳಿಗೆ ಸರಕಾರ ಖರ್ಚು ಮಾಡಲು ನೀಡಿದ ಗುರಿ,ನೀಡಿದ ಅನುದಾನ,ಬಳಕೆ ಮಾಡಿದ ಅನುದಾನದ ಬಗ್ಗೆ ಮಾಹಿತಿಯನ್ನು ತಾ‌.ಪಂ.ಇ‌ಒ‌ ರಾಜಣ್ಣ ಸಭೆಯಲ್ಲಿ ಮಾಹಿತಿ ನೀಡಿದರು.

ಸರಕಾರ 1353094899 ಗುರಿ ಹೊಂದಿದ್ದು, 1417088942 ಸರಕಾರ ಅನುದಾನ ಬಿಡುಗಡೆ ಮಾಡಿದ್ದು, ಇಲಾಖೆ ಒಟ್ಟು 1300704149 ಖರ್ಚು ಮಾಡಿದೆ.

ಇದರಲ್ಲಿ 116384793 ಹಣ ಉಳಿಕೆ ಆಗಿದೆ ಎಂದು ತಿಳಿಸಿದರು.

ತಾ.ಪಂ.ನ ವಿವಿಧ ಇಲಾಖೆಗಳು ಯೋಜನೆಯ ಅನುದಾನದ ಮಾಹಿತಿಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಆಯವ್ಯಯ ಪಟ್ಟಿಯಲ್ಲಿ ಇರುವ ಕೆಲವೊಂದು ಗೊಂದಲಗಳನ್ನು ಸಮರ್ಪಕವಾಗಿ ನೀಡಿ ಗೊಂದಲಕ್ಕೆ ಅವಕಾಶ ಮಾಡದಂತೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

 

ಕಾರ್ಯಕ್ರಮದಲ್ಲಿ ತಾ.ಪಂ.ಆಡಳಿತ ಅಧಿಕಾರಿ ಎಚ್.ಆರ್.ನಾಯಕ್, ತಾ.ಪಂ. ಪ್ರಭಾರ ಇ.ಒ.ರಾಜಣ್ಣ ಉಪಸ್ಥಿತರಿದ್ದರು.

More articles

Latest article