Sunday, October 22, 2023

ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಬಂಟ್ವಾಳ ತಾಲೂಕು ಸಮಿತಿಯ ನೂತನ ಪದಾಧಿಕಾರಿಗಳ ಘೋಷಣೆ ಸಮಾರಂಭ ಹಾಗೂ ಅಂತಾರಾಜ್ಯ ಮಟ್ಟದ ಬಹಭಾಷಾ ಕವಿಗೋಷ್ಠಿ

Must read

ಕಲ್ಲಡ್ಕ: ಭಾರತದಲ್ಲಿ ಹುಟ್ಟಿ ಬೆಳೆದ ಭಾಷೆಗಳೆಲ್ಲ ರಾಷ್ಟ್ರೀಯ ಭಾಷೆಗಳು.ಭಾಷೆ ನಮ್ಮ ಸಂಸ್ಕೃತಿಯ ಪ್ರತೀಕ.ಭಾಷೆಯ ವಿಚಾರದಲ್ಲಿ ಸಂಘರ್ಷ ಬೇಡ.ಭಾವೈಕ್ಯ ಇರಲಿ. ಹಿರಿಯ ಸಾಹಿತಿಗಳು ಕಿರಿಯ ಸಾಹಿತಿಗಳಿಗೆ ಪ್ರೇರಣೆಯಾಗಲಿ ಎಂದು ಪುತ್ತೂರು ವಿವೇಕಾನದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.

ಅವರು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಅಜಿತ ಸಭಾಂಣದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಬಂಟ್ವಾಳ ತಾಲೂಕು ಸಮಿತಿಯ ನೂತನ ಪದಾಧಿಕಾರಿಗಳ ಘೋಷಣೆ ಸಮಾರಂಭ ಹಾಗೂ ಅಂತಾರಾಜ್ಯ ಮಟ್ಟದ ಬಹಭಾಷಾ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.

ಅ.ಭಾ.ಸಾ.ಪರಿಷತ್ತಿನ ಜಿಲ್ಲಾಧ್ಯಕ್ಷ ಪಿ.ಬಿ. ಹರೀಶ ರೈ ಮುಖ್ಯ ಅತಿಥಿಯಾಗಿ ಮಾತನಾಡಿದರು.ಪತ್ರಕರ್ತರಲ್ಲಿ ರಾಷ್ಟ್ರೀಯವಾದಿ ಪತ್ರಕರ್ತರು,ವಿಚಾರವಾದಿ ಪತ್ರಕರ್ತರು ಎಂಬ ವಿಭಜನೆ ಸಲ್ಲದು.ರಾಷ್ಟ್ರೀಯತೆಯ ಭಾವ ಎಲ್ಲರಲ್ಲೂ ಇರಬೇಕಾಗಿದೆ ಎಂದರು.

ಅ‌.ಭಾ.ಸಾ.ಪ. ಬಂಟ್ವಾಳ ತಾಲೂಕು ಅಧ್ಯಕ್ಷ ಡಾ.ಸುರೇಶ ನೆಗಳಗುಳಿ ಅಧ್ಯಕ್ಷತೆ ವಹಿದ್ದರು.

ಮಂಗಳೂರು ವಿಭಾಗ ಸಂಯೋಜಕ ಸುಂದರ ಶೆಟ್ಟಿ ನೂತನ ಪದಾಧಿಕಾರಿಗಳ ಘೋಷಣೆ ಮಾಡಿದರು. ಗೌರವ ಸಲಹೆಗಾರ ಜಯಾನಂದ ಪೆರಾಜೆ ಉಪಸ್ಥಿತರಿದ್ದರು.

ಶ್ರೀರಾಮ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಬಾಲಕೃಷ್ಣ ಸ್ವಾಗತಿಸಿದರು ಅಶೋಕ ಕುಮಾರ ಕಲ್ಯಾಟೆ ನಿರೂಪಿಸಿದರು.ಪ್ರಶಾಂತ ಕಡ್ಯ ವಂದಿಸಿದರು.

ಆರಂಭದಲ್ಲಿ ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ಡಾ.ಪ್ರಭಾಕರ ಭಟ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ವಿದ್ಯಾರ್ಥಿನಿಯರು ಅತಿಥಿಗಳಿಗೆ,ಕವಿಗಳಿಗೆ ರಕ್ಷಾ ಬಂಧನ ಮಾಡಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಹಿರಿಯ ಪತ್ರಕರ್ತ ರೇಮಂಡ್ ಡಿಕೂನ ತಾಕೋಡೆ ಅಧ್ಯಕ್ಷತೆಯಲ್ಲಿ ವಿದ್ಯಾರ್ಥಿ ಕವಿಗೋಷ್ಠಿ ನಡೆಯಿತು. ಅಂತಾರಾಜ್ಯ ಮಟ್ಟದ ಬಹು ಭಾಷಾ ಕವಿಗೋಷ್ಠಿಯು ಜಯಾನಂದ ಪೆರಾಜೆ ಅಧ್ಯಕ್ಷತೆ ಯಲ್ಲಿ ಸಂಪನ್ನಗೊಂಡಿತು.

More articles

Latest article