ಬಂಟ್ವಾಳ: ಇಬ್ಬರು ಅಡಿಕೆ ಕಳ್ಳರಿಗೆ ಸಾರ್ವಜನಿಕರಿಂದ ದರ್ಮದೇಟು ನೀಡಿದ ಘಟನೆ ಮಣಿನಾಲ್ಕೂರು ಗ್ರಾಮದಲ್ಲಿ ಸೋಮವಾರ ರಾತ್ರಿ ವೇಳೆ ನಡೆದಿದ್ದು, ಇದೀಗ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಣಿನಾಲ್ಕೂರು ಗ್ರಾಮದ ಹಂಡೀರು ಎಂಬಲ್ಲಿ ಅಡಿಕೆ ತೋಟದಲ್ಲಿ ಈ ಘಟನೆ ನಡೆದಿದೆ.
ಕಳೆದ ಕೆಲವು ದಿನಗಳಿಂದ ಇಲ್ಲಿನ ಅಡಿಕೆ ತೋಟದಿಂದ ಅಡಿಕೆ ಕಳವಾಗುತ್ತಿದ್ದು, ಈ ಬಗ್ಗೆ ಕೃಷಿಕರು ಕಳ್ಳನ ಪತ್ತೆಗಾಗಿ ಕಾದು ಕುಳಿತಿದ್ದರು. ಸೆ.4 ರ ರಾತ್ರಿ ಕಳ್ಳರು ತನ್ನ ಕರಾಮತ್ತಿನ ಪ್ರದರ್ಶನ ಕ್ಕೆ ಮುಂದಾಗುತ್ತಿದ್ದಲೇ ಕೃಷಿಕರ ಕೈಗೆ ಸಿಕ್ಕಿಬಿದ್ದಿದ್ದು, ಆವರನ್ನು ವಿಚಾರಿಸಿ, ಕಂಬಕ್ಕೆ ಕಟ್ಟಿಹಾಕಿ ದರ್ಮದೇಟು ನೀಡಿದ್ದಾರೆ.
ಆದರ ವಿಡಿಯೋ ದೃಶ್ಯ ಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಪುಲ್ ವೈರಲ್ ಆಗಿದೆ. ಇಬ್ಬರೂ ಕೂಡ ಸ್ಥಳೀಯರು ಎನ್ನಲಾಗಿದ್ದು ಸ್ಪಷ್ಟವಾದ ಮಾಹಿತಿ ಲಭ್ಯವಾಗಿಲ್ಲ. ಈ ಬಗ್ಗೆ ಪೋಲೀಸ್ ಠಾಣೆಗೆ ಯಾವುದೇ ದೂರು ಬಂದಿಲ್ಲ ಎಂದು ಇಲ್ಲಿನ ಪೋಲೀಸ್ ಉಪನಿರೀಕ್ಷಕ ಹರೀಶ್ ತಿಳಿಸಿದ್ದಾರೆ.