ಬಂಟ್ವಾಳ: ಇತ್ತೀಚೆಗೆ ಅಗಲಿದ ರಂಗಕರ್ಮಿ, ತರಬೇತುದಾರ ಮಂಜು ವಿಟ್ಲ ಅವರ ಸಾರ್ವಜನಿಕ ಸಂತಾಪ ಸೂಚಕ ಸಭೆಯನ್ನು ತುಳುಕೂಟ ಸೆ.16ರಂದು ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ಆಯೋಜಿಸಿದೆ. ಸಂಜೆ 4.30ಕ್ಕೆ ಈ ಸಂತಾಪ ಸೂಚಕ ಸಭೆ ನಡೆಯಲಿದೆ.
ಸಾಮಾಜಿಕ, ಧಾರ್ಮಿಕ, ರಾಜಕೀಯ, ಸೇವಾ ಕ್ಷೇತ್ರಗಳ ಸಹಿತ ಮಂಜು ವಿಟ್ಲ ತೊಡಗಿಸಿಕೊಂಡಿದ್ದ ಎಲ್ಲ ಕ್ಷೇತ್ರಗಳ ಒಡನಾಡಿಗಳು ಈ ಸಂತಾಪ ಸೂಚಕ ಸಭೆಯಲ್ಲಿ ಭಾಗವಹಿಸಿ ನುಡಿನಮನ ಸಲ್ಲಿಸಲಿದ್ದಾರೆ. ನಾನಾ ಕ್ಷೇತ್ರಗಳಲ್ಲಿ ದುಡಿದಿದ್ದ ರಂಗಕರ್ಮಿ ಮಂಜು ವಿಟ್ಲ ಅವರು ಪ್ರತಿಯೊಬ್ಬರಿಗೂ ಬೇಕಾದವರಾಗಿದ್ದು, ಎಲ್ಲರೊಂದಿಗೆ ಹಿರಿಯ, ಕಿರಿಯ ಎಂಬ ಬೇಧಭಾವವಿಲ್ಲದೆ ಬೆರೆಯುತ್ತಿದ್ದರು. ಈ ಹಿನ್ನೆಲೆಯಲ್ಲಿ ತುಳುಕೂಟ ಬಂಟ್ವಾಳ ಸಮಾನ ಮನಸ್ಕರ ಜತೆ ಸಮಸ್ತ ಸಮಾಜದ ಬಂಧುಗಳಿಂದ ಸಾರ್ವಜನಿಕ ಸಂತಾಪ ಸೂಚಕ ಸಭೆಯನ್ನು ಆಯೋಜಿಸಿದೆ ಎಂದು ತಿಳಿಸಿದೆ.