Wednesday, November 1, 2023

ಎಸೋಸಿಯೇಷನ್ ಗೌರವಾಧ್ಯಕ್ಷ, ಕುವೆಂಪು ವಿ.ವಿ ಯಿಂದ ಗೌರವ ಡಾಕ್ಟರೇಟ್ ಪುರಸ್ಕತ ಡಾ.ಎ.ಸದಾನಂದ ಶೆಟ್ಟಿ ಅವರಿಗೆ ಸಮ್ಮಾನ ಕಾರ್ಯಕ್ರಮ

Must read

ದಕ್ಷಣ ಕನ್ನಡ ಜಿಲ್ಲಾ ವೈನ್ ಮರ್ಚೆಂಟ್ಸ್ ಎಸೋಸಿಯೇಷನ್ ಇದರ ವತಿಯಿಂದ ಎಸೋಸಿಯೇಷನ್ ಗೌರವಾಧ್ಯಕ್ಷ, ಕುವೆಂಪು ವಿ.ವಿ ಯಿಂದ ಗೌರವ ಡಾಕ್ಟರೇಟ್ ಪುರಸ್ಕತ ಡಾ. ಎ.ಸದಾನಂದ ಶೆಟ್ಟಿ ಅವರಿಗೆ ಸಮ್ಮಾನ ಕಾರ್ಯಕ್ರಮ ರವಿವಾರ ಮಂಗಳೂರಿನಲ್ಲಿ ನಡೆಯಿತು.

ಜರತಾರಿ ಪೇಟ, ಶಾಲು,ಕಂಚಿನ ಬುದ್ದನ ವಿಗ್ರಹ ಹಾಗೂ ಸಮ್ಮಾನ ಪತ್ರ ನೀಡಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಯಾವುದೇ ಸಂಘ ಸಂಸ್ಥೆಯಿರಲಿ, ಸಹಮತದ ಮೂಲಕ ಪರಸ್ಪರ ಒಗ್ಗಟ್ಟಿನಿಂದ ಇದ್ದಾಗ ಯಾವುದೇ ಸಮಸ್ಯೆ ಬಂದರೂ ಎದುರಿಸಬಹುದಾಗಿದೆ ಎಂದರು. ಇದೇ ಸಂದರ್ಭದಲ್ಲಿ ಸಮ್ಮಾನ ಕಾರ್ಯಕ್ಕೆ ಕೃತಜ್ನತೆ ವ್ಯಕ್ತಪಡಿಸಿದರು.

ಎಸೋಸಿಯೇಷನ್ ಅಧ್ಯಕ್ಷ ಎಂ.ಗಣೇಶ್ ಶೆಟ್ಟಿ ಮಾತನಾಡಿ ನಮ್ಮ ಉದ್ಯಮದ ಕಷ್ಟಕಾಲದಲ್ಲಿ ಸದಾನಂದ ಶೆಟ್ಟಿ ಅವರು ಮುಂದೆ ನಿಂತು ಸಮಸ್ಯೆ ಬಗೆ ಹರಿಸಿದ್ದಾರೆ.ಯಾವುದೇ ಪಕ್ಷಬೇಧವಿಲ್ಲದೆ ಸಮಾಜಮುಖೀ, ಉದ್ಯಮ, ಕ್ರೀಡಾ ಕ್ಷೇತ್ರಕ್ಕೆ ,ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡಿದ ದೀಮಂತ ವ್ಯಕ್ತಿಯಾಗಿದ್ದಾರೆ ಎಂದರು.

ಸವಣೂರು ಸೀತಾರಾಮ ರೈ ಅವರು ಶುಭ ಹಾರೈಸಿದರು.

ವಿವಿಧ ತಾಲೂಕು ಹಾಗೂ ವಲಯಗಳ ಪದಾಧಿಕಾರಿಗಳನ್ನು ಇದೇ ಸಂದರ್ಭದಲ್ಲಿ ಗೌರವಿಸಿದರು.

ಜಿಲ್ಲಾ ಉಪಾಧ್ಯಕ್ಷ ರಾದ ಜೆ.ಎಲ್ ಪಿಂಟೋ,ನಾರಾಯಣ್ ಪಿ.ಎಂ,ಮಂಗಳೂರು ತಾಲೂಕು ಅಧ್ಯಕ್ಷ ಕೆ.ಟಿ ಸುವರ್ಣ, ಚಂದ್ರನಾಥ್ ಅತ್ತಾವರ, ಜಿಲ್ಲಾ ,ತಾಲೂಕು ವಲಯದ ಅಧ್ಯಕ್ಷರು, ಪದಾದಿಕಾರಿಗಳು, ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲಾ ಕಾರ್ಯದರ್ಶಿ ಓಂಪ್ರಸಾದ್ ಅವರು ಸಮ್ಮಾನ ಪತ್ರ ವಾಚಿಸಿದರು. ದಿನೇಶ್ ಅಂಚನ್ ವಂದಿಸಿದರು. ಭಾಗ್ಯರಾಜ್ ನಿರೂಪಿಸಿದರು.

More articles

Latest article