Tuesday, October 17, 2023

ನಗುತ್ತಿರಬಹುದು..!

Must read

ನಗುತ್ತಿರಬಹುದು..!

ನಗುತ್ತಿರಬಹುದು

ನಗುತ್ತಿರಬಹುದು

ಗಹ ಗಹಿಸಿ

ನಗುತ್ತಿರಬಹುದು

ಬಾಯಿ ಬಿಟ್ಟಲ್ಲದಿದ್ದರೂ

ಒಳಗೊಳಗೆ..!

 

ನಾಡೆಲ್ಲ ಸೇರಿ

ನ್ಯಾಯಕ್ಕಾಗಿ ಹೋರಾಡುತ್ತಿರುವಾಗ

ಹೆತ್ತ ತಾಯಿ ಮಗಳಿಗಾದ

ಅನ್ಯಾಯವ ನೆನೆದು

ಬಿಕ್ಕಿ ಬಿಕ್ಕಿ ಅಳುತ್ತಿರುವಾಗ

ಅವರಿವರು ಅಂತೆ ಕಂತೆಗಳ

ಮಾತುಗಳಾಡುತ್ತಿರುವಾಗ

ನಗುತ್ತಿರಬಹುದು

ಅವ ನಗುತ್ತಿರಬಹುದು..

 

ತನ್ನ ಮೇಲೆ

ನಡೆಯುತ್ತಿರುವ ದೌರ್ಜನ್ಯ

ವಿರೋಧಿಸಿ

ಕೂಗಿ ಅತ್ತು ಅರಚಾಡಿ

ಕಣ್ಣೀರ ಸುರಿಸಿ

ಪರಿ ಪರಿಯಾಗಿ ಬೇಡಿ

ಪ್ರಾಣ ಬಿಟ್ಟಾಗ

ನೆತ್ತರ ತನ್ನ ಬಟ್ಟೆಯಲ್ಲೇ ಒರೆಸಿ

ನಕ್ಕಿರಬಹುದು

ಅಂದು ನಕ್ಕಿರಬಹುದು..!

 

ಸಾಕ್ಷಿಗಳ ನಾಶಮಾಡಿ

ಹುಡುಕಾಟದ ದಾರಿಯ ತಿರುಚಿ

ಅವನಿಗಿಷ್ಟು ಇವನಿಗಿಷ್ಟು ನೀಡಿ

ಎದುರು ನಿಂತರೆ ಉಸಿರ ತೆಗೆದು

ಸಾಚನಂತೆ ನಿಂತು

ನಗುತಿರಬಹುದು

ನಿದ್ದೆಯಲ್ಲೂ ನಕ್ಕಿರಬಹುದು..!

 

ನಗಬೇಕು ನಗಬೇಕು

ಅನ್ಯಾಯಕ್ಕೆ ನ್ಯಾಯ ಸಿಗದ

ಈ ವ್ಯವಸ್ಥೆಯಲ್ಲಿ…!

 

✍️ಯತೀಶ್ ಕಾಮಾಜೆ

More articles

Latest article