Sunday, October 22, 2023

ಸೆ.17ರಂದು ಪೊಸಳ್ಳಿ ಕುಲಾಲ ಭವನದಲ್ಲಿ ಬಂಟ್ವಾಳ ಕುಲಾಲ ಸೇವಾದಳದ ವತಿಯಿಂದ ಕೃಷ್ಣ ಕೃಷ್ಣ ಶ್ರೀಕೃಷ್ಣಾ -ಕೃಷ್ಣ ವೇಷ ಸ್ಪರ್ಧೆ

Must read

ಬಂಟ್ವಾಳ : ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘ ರಿ. ಇದರ ಆಶ್ರಯದಲ್ಲಿರುವ ಕುಲಾಲ ಸೇವಾದಳದ ವತಿಯಿಂದ ಸೆಪ್ಟಂಬರ್ 17ರಂದು ಬಿ.ಸಿ.ರೋಡಿನ ಪೊಸಳ್ಳಿ ಬಳಿಯ ಕುಲಾಲ ಸಮುದಾಯ ಭವನದಲ್ಲಿ ಕೃಷ್ಣ ಕೃಷ್ಣ ಶ್ರೀಕೃಷ್ಣ – ಎಂಬ ಕುಲಾಲರ ಕೃಷ್ಣ ವೇಷ ಸ್ಪರ್ಧೆ, ನನ್ನ ಕನಸಿನ ಕೃಷ್ಣ- ಚಿತ್ರಕಲಾ ಸ್ಪರ್ಧೆ ಮತ್ತು ಕುಸಾಲ್ ಪಾತೆರದ ಬಿರ್ಸೆರ್ – ಸ್ಪರ್ಧಾ ಕಾರ್ಯಕ್ರಮ ನಡೆಯಲಿದೆ.

6 ತಿಂಗಳಿನಿಂದ 5 ವರ್ಷದೊಳಗಿನ ಮಕ್ಕಳಿಗೆ ಮುದ್ದು ಕೃಷ್ಣ ವೇಷ, 5ರಿಂದ ಮೇಲ್ಪಟ್ಟು 10 ವರ್ಷದೊಳಗಿನ ಮಕ್ಕಳಿಗೆ ಬಾಲಕೃಷ್ಣ, ರಾಧಾಕೃಷ್ಣ ಮತ್ತು ಯಶೋಧಾ ಕೃಷ್ಣ ಸ್ಪರ್ಧೆಗೆ ಯಾವುದೇ ವಯೋಮಿತಿ ಇರುವುದಿಲ್ಲ. ಚಿತ್ರಕಲೆಯಲ್ಲಿ ಕಿರಿಯ ಮತ್ತು ಹಿರಿಯ ವಿಭಾಗಗಳಿರುತ್ತದೆ. ಕುಸಾಲ್ ಪಾತೆರದ ಬಿರ್ಸೆರ್ ಸ್ಪರ್ಧೆಯಲ್ಲಿ ಯಾವುದೇ ವಯೋಮಿತಿ ಒರುವುದಿಲ್ಲ. ಆದರೆ ಹಾಸ್ಯದಲ್ಲಿ ರಾಜಕೀಯ, ಜಾತಿನಿಂದನೆ ಮತ್ತು ಅಶ್ಲೀಲ ಮಾತುಗಳನ್ಙು ಬಳಸುವಂತಿಲ್ಲ. ವೇದಿಕೆಯಲ್ಲಿ ಪ್ರದರ್ಶಿಸುವ ಹಾಸ್ಯದ ತುಣುಕನ್ನು ವೀಡಿಯೋ ಮಾಡಿ 98808 36173ಕ್ಕೆ ಕಳುಹಿಸಬೇಕು. ಎಲ್ಲಾ ಸ್ಪರ್ಧೆಯಲ್ಲಿ ಭಾಗವಹಿಸುವವರು ಸೆಪ್ಟಂಬರ್ 10ರೊಳಗೆ ತಮ್ಮ ಹೆಸರು ನೋಂದಾಯಿಸಬೇಕು. ಮಧ್ಯಾಹ್ನ 3.30ಕ್ಕೆ ಸಭಾಕಾರ್ಯಕ್ರಮ ನಡೆಯಲಿದ್ದು ತಾಲೂಕು ಸಂಘದ ಅಧ್ಯಕ್ಷ ರಾಧಾಕೃಷ್ಣ ಬಂಟ್ವಾಳ ಅಧ್ಯಕ್ಷತೆ ವಹಿಸಲಿದ್ದಾರೆ. ವಿಶೇಷ ಉಪಸ್ಥಿತಿಯಲ್ಲಿ ಸಿನಿಮಾ ಆಟ್೯ ಡೈರೆಕ್ಟರ್ ರಾಜೇಶ್ ಕೊಳಕೆ, ಉಪನ್ಯಾಸಕ ಮತ್ತು ಖ್ಯಾತ ಸಂಗೀತಗಾರ ಶುಭಮ್ ಮತ್ತು ರಂಗಭೂಮಿ ಕಲಾವಿದ ಮೇಧಾವಿ ಮಡಂತ್ಯಾರ್ ಉಪಸ್ಥಿತರಿರುವರು.

ಸಭಾಕಾರ್ಯಕ್ರಮದಲ್ಲಿ ನಿರಂತರ ಕಾರ್ಯಾಗಾರದ ಮೂರನೇ ಹಂತದ ಚೈತನ್ಯ 3.0 ಚಾಲನೆ ನಡೆಯಲಿದೆ. ಡ್ಯಾನ್ಸ್, ಯಕ್ಷನಾಟ್ಯ, ಚಿತ್ರಕಲೆ, ನಾಯಕತ್ವದ ಜೊತೆಗೆ ರಂಗ ನಟನೆಗೆ ಚಾಪರ್ಕ ತಂಡದ ಕಲಾವಿದ ಸುರೇಶ್ ಕುಲಾಲ್, ಶಿಕ್ಷಣ ಮಾರ್ಗದರ್ಶಕರಾಗಿ ಲೋಕೇಶ್ ಕುಲಾಲ್ ನಾರ್ಶ, ಆರೋಗ್ಯ ಚೈತನ್ನ ಡಾ. ಅಶ್ವನಿ ಬಾಲಕೃಷ್ಣ ಅಗ್ರಬೈಲು ಮತ್ತು ಯೋಗ ತರಬೇತಿಗಾಗಿ ಕಿಶೋರ್ ಕುಲಾಲ್ ಕೈಕುಂಜೆ ಈ ಸಂಧರ್ಭ ಉಪಸ್ಥಿತರುತ್ತಾರೆ.

ಸಭಾಕಾರ್ಯಕ್ರಮದ ನಂತರ ಕುಲಾಲ ಸೇವಾದಳದ ಸದಸ್ಯರಿಂದ ಸಾಂಸ್ಕೃತಿಕ ವೈಭ, ವಿನೂತನ ಶೈಲಿಯಲ್ಲಿ ಕಥಾರೂಪಕ ಪುಣ್ಯಕೋಟಿ ಮತ್ತು ಚಂದ್ರಯಾನ 3 ಕಾರ್ಯಕ್ರಮ ನಡೆಯಲಿದೆ ಎಂದು ಕುಲಾಲ ಸೇವಾದಳದ ದಳಪತಿ ರಾಜೇಶ್ ಕುಮಾರ್ ಎಚ್. ಮತ್ತು ಕಾರ್ಯದರ್ಶಿ ಜಯಂತ ಅಗ್ರಬೈಲು ಪತ್ರಿಕಾ ಹೇಳಿಕೆಯಲ್ಲಿ ತಿಳಿಸುದ್ದಾರೆ.

More articles

Latest article