Wednesday, April 10, 2024

ಆದಿತ್ಯ ಎಲ್​1 ಯಶಸ್ವಿ ಉಡಾವಣೆ : ಇಸ್ರೋ ಮುಖ್ಯಸ್ಥ ಸೋಮನಾಥ್ ಮಾಹಿತಿ

ಬೆಂಗಳೂರು: ಭಾರತದ ಮೊಟ್ಟ ಮೊದಲ ಸೂರ್ಯಯಾನದ ಮೊದಲ ಹೆಜ್ಜೆ ಇಂದು ಯಶಸ್ವಿಯಾಗಿದೆ. ಆದಿತ್ಯ ಎಲ್​1 ಉಪಗ್ರಹ ಹೊತ್ತ PSLV-C57 ರಾಕೆಟ್​ ಬೆಳಗ್ಗೆ 11 ಗಂಟೆ 50 ನಿಮಿಷಕ್ಕೆ ಆಕಾಶಕ್ಕೆ ಜಿಗಿದಿದ್ದು, ಭೂಕಕ್ಷೆಗೆ ಯಶಸ್ವಿಯಾಗಿ ಸೇರಿದೆ.

ಈ ಬಗ್ಗೆ ಇಸ್ರೋ ಮುಖ್ಯಸ್ಥ ಸೋಮನಾಥ್ ಮಾಹಿತಿ ನೀಡಿದ್ದು, ಆದಿತ್ಯ ಎಲ್​​​​-1​​​​ ನೌಕೆ ಯಶಸ್ವಿ ಉಡಾವಣೆಗೆ ಶ್ರಮಿಸಿದ ವಿಜ್ಞಾನಿಗಳು, ಇಂಜಿನಿಯರ್​ಗಳು, ಸಿಬ್ಬಂದಿ ವರ್ಗ ಸೇರಿ ಎಲ್ಲರಿಗೂ ಅಭಿನಂದನೆ ಸಲ್ಲಿಸಿದ್ದಾರೆ. ಇನ್ನು ಆದಿತ್ಯ L-1​​​​ ನೌಕೆ ಯಶಸ್ವಿ ಉಡಾವಣೆ ಹಿನ್ನೆಲೆ ವಿಜ್ಞಾನಿಗಳ ಸಂಭ್ರಮಾಚರಣೆ ಜೋರಾಗಿದೆ

ಇಸ್ರೋಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ

ಚಂದ್ರಯಾನ-3 ಯಶಸ್ಸಿನ ನಂತರ ಭಾರತ ತನ್ನ ಬಾಹ್ಯಾಕಾಶ ಯಾನವನ್ನು ಮುಂದುವರೆಸಿದೆ. ಆದಿತ್ಯ ಎಲ್​​​​-1​​​​ ನೌಕೆ ಯಶಸ್ವಿ ಉಡಾವಣೆಗೆ ಶ್ರಮಿಸಿದ ವಿಜ್ಞಾನಿಗಳು, ಇಂಜಿನಿಯರ್​ಗಳು ಎಲ್ಲರಿಗೂ ಅಭಿನಂದನೆಗಳು. ಇಡೀ ಮಾನವಕುಲದ ಕಲ್ಯಾಣಕ್ಕಾಗಿ ಬ್ರಹ್ಮಾಂಡದ ಬಗ್ಗೆ ಉತ್ತಮ ತಿಳುವಳಿಕೆಯನ್ನು ಅಭಿವೃದ್ಧಿಪಡಿಸಲು ನಮ್ಮ ದಣಿವರಿಯದ ವೈಜ್ಞಾನಿಕ ಪ್ರಯತ್ನಗಳು ಮುಂದುವರಿಯುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.

ಭೂಮಿಯಿಂದ ಯಶಸ್ವಿಯಾಗಿ ಪ್ರಯಾಣ ಆರಂಭಿಸಿರುವ ಆದಿತ್ಯ ಎಲ್​ 1 ನೌಕೆ ಇನ್ನು ನಾಲ್ಕು ತಿಂಗಳುಗಳ ಬಳಿಕ ತನ್ನ ನಿಗದಿತ ಕಕ್ಷೆಗೆ ತಲುಪಲಿದೆ. ಅಂದ್ರೆ ಇಂದು ಸೆಪ್ಟಂಬರ್ 2 2023ರಂದು ಹಾರಿಬಿಟ್ಟಿರುವ ಆದಿತ್ಯ ನೌಕೆ 2024ರ ಜನವರಿ 12ರಂದು ಎಲ್​ 1 ಕಕ್ಷೆಗೆ ತಲುಪಲಿದೆ. ಭೂಕಕ್ಷೆಗೆ ಸೇರಿಸಿದ ಬಳಿಕ ಕ್ರೂಸ್​ ಫೇಸ್​ನ ವೇಗವನ್ನು ಹೆಚ್ಚಿಸಲಾಗುತ್ತೆ. ಬಳಿಕ ಅದನ್ನು ಹಾಲೋ ಆರ್ಬಿಟ್​ಗೆ ಸೇರಿಸಲಾಗುತ್ತದೆ. ಭೂಮಿ ಮತ್ತು ಚಂದ್ರನ ಪ್ರಭಾವಲಯಕ್ಕೆ ಸಿಲುಕುವ ನೌಕೆ ಹಾಲೋ ಆಕಾರದಲ್ಲಿ ಇದು ತಿರುಗುವ ಕಾರಣದಿಂದ ಇದನ್ನು ಹಾಲೋ ಆರ್ಬಿಟ್ ಎಂದು ಕರೆಯಲಾಗುತ್ತದೆ. ಬಳಿಕ ಅಲ್ಲಿಂದ ಬೂಸ್ಟ್​ ಮಾಡುವ ಮೂಲಕ L1 ಕಡೆಗೆ ಪಾಯಿಂಟ್​ಗೆ ಸೇರಿಸಲಾಗುತ್ತದೆ.

More from the blog

ಏ.10ರಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ…. ರಿಸಲ್ಟ್​ ಚೆಕ್ ಮಾಡೋದು ಹೇಗೆ?

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ನಾಳೆ ಪ್ರಕಟಿಸಲಾಗುತ್ತಿದೆ. ಎಲ್ಲ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮುಕ್ತಾಯವಾದ ಹಿನ್ನಲೆ ನಾಳೆ ಫಲಿತಾಂಶ ಪ್ರಕಟಿಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮುಂದಾಗಿದೆ. ನಾಳೆ...

ಮತ್ತೆ ಏರಿಕೆ ಕಂಡ ಚಿನ್ನದ ಬೆಲೆ : ಇವತ್ತಿನ ‌ಬೆಲೆ ಎಷ್ಟು ಗೊತ್ತಾ…?

ಯುಗಾದಿ ಹಬ್ಬ. ಇದು ಸಂಬಂಧ ಬೆಸೆಯುವ ಹಬ್ಬ. ಅಂದಹಾಗೆಯೇ ದೇಶದಾದ್ಯಂತ ಜನರು ಇಂದು ಸಂಭ್ರಮದಲ್ಲಿದ್ದಾರೆ. ಆದರೆ ಇದರ ನಡುವೆ ಚಿನ್ನದ ಬೆಲೆ ಏರಿಕೆಯ ಬಿಸಿಯಿಂದ ಕೊಂಚ ಬೇಸರವು ಅವರಲ್ಲಿ ಆವರಿಸಿದೆ. ಕಳೆದ ಎರಡು ದಿನಗಳ...

5,8,9,11ನೇ ತರಗತಿ ಪರೀಕ್ಷೆ ಫಲಿತಾಂಶಕ್ಕೆ ಸುಪ್ರೀಂ ತಡೆ

ಹೊಸದಿಲ್ಲಿ: 5, 8, 9 ಮತ್ತು 11 ನೇ ತರಗತಿಗಳ ಬೋರ್ಡ್ ಪರೀಕ್ಷೆಗಳ ಫಲಿತಾಂಶಗಳನ್ನು ಪ್ರಕಟಿಸಲು ಸುಪ್ರೀಂ ಕೋರ್ಟ್ ಸೋಮವಾರ ತಡೆಯಾಜ್ಞೆ ನೀಡಿದೆ. ರಾಜ್ಯದಲ್ಲಿ 5, 8, 9ನೇ ತರಗತಿಗೆ ಬೋರ್ಡ್​ ಪರೀಕ್ಷೆ ಮುಗಿದಿದ್ದು,...

ಮನೆಯೊಳಗೆ ‌ನುಗ್ಗಿ ವ್ಯಕ್ತಿಗೆ ಚೂರಿ ಇರಿತ : ಆರೋಪಿ ಪರಾರಿ

ಬಂಟ್ವಾಳ: ಮನೆಯೊಳಗೆ ‌ನುಗ್ಗಿ ವ್ಯಕ್ತಿಯೋರ್ವನಿಗೆ ಚೂರಿ ಹಾಕಿ ಪರಾರಿಯಾಗಿರುವ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಪುದು ಎಂಬಲ್ಲಿ ನಡೆದಿದೆ. ಪುದು ಗ್ರಾಮದ 10 ನೇ ಮೈಲಿಕಲ್ಲು ನಿವಾಸಿ...