Thursday, October 19, 2023

ರಸ್ತೆ ದಾಟುತ್ತಿದ್ದ ವೇಳೆ ರಿಕ್ಷಾ ಡಿಕ್ಕಿ : ಪಾದಚಾರಿಗೆ ಗಾಯ

Must read

ಬಂಟ್ವಾಳ : ತರಕಾರಿ ತೆಗೆದುಕೊಂಡು ರಸ್ತೆ ದಾಟುತ್ತಿದ್ಧ ವೇಳೆ ರಿಕ್ಷಾ ಡಿಕ್ಕಿಹೊಡೆದು ವ್ಯಕ್ತಿಯೋರ್ವ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಬಿಸಿರೋಡಿನ ಕೈಕಂಬ ಎಂಬಲ್ಲಿ ಇಂದು‌ಬೆಳಿಗ್ಗೆ ವೇಳೆ ನಡೆದಿದೆ.

ಇರಾ ನಿವಾಸಿ ಅಬ್ದುಲ್ ರಹಿಮಾನ್ ಗಾಯಗೊಂಡ ವ್ಯಕ್ತಿ.

ರಹಿಮಾನ್ ಎಂಬವರು ಮುಂಜಾನೆ ಸುಮಾರು 5.30 ಗಂಟೆಗೆ ಕೈಕಂಬ ಎಂಬಲ್ಲಿ ಅಂಗಡಿಯೊಂದರಿಂದ ತರಕಾರಿ ಪಡೆದು ಕೊಂಡು ರಸ್ತೆ ದಾಟುತ್ತಿದ್ದ ವೇಳೆ ಅತೀವೇಗ ಮತ್ತು ನಿರ್ಲಕ್ಷ್ಯ ತನದಿಂದ ರಿಕ್ಷಾವನ್ನು ಚಲಾಯಿಸಿಕೊಂಡು ಬಂದ ಚಾಲಕ ಇಮ್ತಿಯಾಜ್ ಡಿಕ್ಕಿ ಹೊಡೆದು ಅಪಘಾತ ಉಂಟುಮಾಡಿದ್ಧಾನೆ.

ಅಪಘಾತದಲ್ಲಿ ರಸ್ತೆ ದಾಟುತ್ತಿದ್ಧ ರಹಿಮಾನ್ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾನೆ.

ಮೆಲ್ಕಾರ್ ಟ್ರಾಫಿಕ್ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

More articles

Latest article