ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್ ಆವರಣದಲ್ಲಿ ನಿಲ್ಲಿಸಿದ್ದ ಆಟೋ ರಿಕ್ಷಾ ದಿಂದ ನಗದು ಕಳವುಗೈದ ಘಟನೆ ನಡೆದಿದೆ.
ಭಾಸ್ಕರ್ ಅವರು ವಿಟ್ಲ ಬಸ್ ನಿಲ್ದಾಣದಲ್ಲಿ ತನ್ನ ಆಟೊ ರಿಕ್ಷಾವನ್ನು ನಿಲ್ಲಿಸಿ ಹೊರಗಡೆ ತೆರಳಿದ್ದರು. ಪುನಃ ಬಂದಾಗ ಆಟೋ ರಿಕ್ಷಾದಲ್ಲಿ ಇರಿಸಿದ್ದ ನಗದು ಕಾಣೆಯಾಗಿತ್ತು. ಬಳಿಕ ಸಿಸಿ ಕೆಮರಾ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ.
ಈ ಬಗ್ಗೆ ಭಾಸ್ಕರ್ ಅವರು ವಿಟ್ಲ ಠಾಣೆಗೆ ದೂರು ನೀಡಿದ್ದಾರೆ.