Sunday, October 22, 2023

ಸೆ.2 ರಂದು ವಿಟ್ಲ ಯಕ್ಷೋತ್ಸವ

Must read

ವಿಟ್ಲ : ವಿಟ್ಲ ಯಕ್ಷಭಾರತ ಸೇವಾ ಪ್ರತಿಷ್ಠಾನದ ವತಿಯಿಂದ ವಿಟ್ಲ ಶ್ರೀ ಭಗವತೀ ದೇವಸ್ಥಾನದ ರಂಗಮಂಟಪದಲ್ಲಿ 8ನೇ ವರ್ಷದ ವಿಟ್ಲ ಯಕ್ಷೋತ್ಸವ 2023 ಮಕ್ಕಳ ಯಕ್ಷಗಾನ, ತೆಂಕುತಿಟ್ಟಿನ ನುರಿತ ಕಲಾವಿದರಿಂದ ಯಕ್ಷಗಾನ, ಸಮ್ಮಾನ, ಸಭಾ ಕಾರ್ಯಕ್ರಮ ಸೆ.2ರಂದು ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 1 ಗಂಟೆಯವರೆಗೆ ನಡೆಯಲಿದೆ ಎಂದು ಅಧ್ಯಕ್ಷ ಸಂಜೀವ ಪೂಜಾರಿ ತಿಳಿಸಿದರು.

ಅವರು ವಿಟ್ಲ ಶ್ರೀ ಭಗವತೀ ದೇವಸ್ಥಾನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 3 ಗಂಟೆಗೆ ಯಕ್ಷಭಾರತ ಸೇವಾ ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ, ನಾಟ್ಯಗುರು ಸಬ್ಬಣಕೋಡಿ ರಾಮ ಭಟ್ ಅವರ ನಿರ್ದೇಶನದಲ್ಲಿ ಕದಂಬ ಕೌಶಿಕೆ ಯಕ್ಷಗಾನ ಬಯಲಾಟವಿದೆ. ರಾತ್ರಿ 7 ಗಂಟೆಗೆ ತೆಂಕು ತಿಟ್ಟಿನ ನುರಿತ ಕಲಾವಿದರಿಂದ ಸುದರ್ಶನೋಪಖ್ಯಾನ ಎಂಬ ಬಯಲಾಟವಿದೆ.‌ ಇದೇ ಸಂದರ್ಭ ಸಭಾ ಕಾರ್ಯಕ್ರಮದಲ್ಲಿ ರಾಜಾರಾಮ ಬಲಿಪಗುಳಿ, ಮಾವೆ ದಿನಕರ ಭಟ್, ರವೀಶ್ ವಿಟ್ಲ, ನರ್ಸಪ್ಪ ಪೂಜಾರಿ ಮತ್ತಿತರರು ಭಾಗವಹಿಸಲಿದ್ದಾರೆ. ಭಾಗವತ ಬಟ್ಯಮೂಲೆ ಲಕ್ಷ್ಮೀನಾರಾಯಣ ಭಟ್, ಸಬ್ಬಣಕೋಡಿ ರಾಮ ಭಟ್, ದೇಲಂತಮಜಲು ಸುಬ್ರಹ್ಮಣ್ಯ ಭಟ್, ಭೂಸೇನೆಯ ನಿವೃತ್ತ ಹವಾಲ್ದಾರ್ ಧನಂಜಯ ನಾಯ್ತೊಟ್ಟು ಅವರನ್ನು ಸಮ್ಮಾನಿಸಲಾಗುವುದು ಎಂದು ಹೇಳಿದರು.
ಭಗವತೀ ದೇವಸ್ಥಾನದ ವ್ಯವಸ್ಥಾಪಕ ಕೇಶವ ಆರ್.ವಿ. ಅವರು ಮಾತನಾಡಿ, ಆ.17ರಿಂದ ಸೆ.27ರವರೆಗೆ ಸಿಂಹ ಮಾಸದ ಕಾರ್ಯಕ್ರಮ ಇದೆ. ಈ ಸಂದರ್ಭ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದೆ. ಅದೇ ರೀತಿ ವಿಟ್ಲ ಯಕ್ಷೋತ್ಸವ ನಡೆಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಉಮೇಶ್ ಆಚಾರ್ಯ, ಜಯರಾಮ ಉಪಸ್ಥಿತರಿದ್ದರು.

More articles

Latest article