Sunday, October 22, 2023

ಹಣಕ್ಕೆ ಪ್ರಾಧಾನ್ಯತೆ ನೀಡದೆ ಗುಣಕ್ಕೆ ಪ್ರಾಧಾನ್ಯತೆ ನೀಡಿ- ಹಿರೇಮಗಳೂರು ಕಣ್ಣನ್

Must read

ವಿಟ್ಲ: ಗುರುಗಳ ಮುಖಾಂತರ ತ್ಯಾಗ, ಸೇವೆ, ಬೋಧನೆ ಆಗುತ್ತದೆ. ಹಣಕ್ಕೆ ಪ್ರಾಧಾನ್ಯತೆ ನೀಡದೆ ಗುಣಕ್ಕೆ ಪ್ರಾಧಾನ್ಯತೆ ನೀಡಿ. ಮನಸ್ಸಿನ ಪರಿಶುದ್ಧತೆ ಇದ್ದರೆ ಉತ್ತಮ ಸಂಸಾರ ನಡೆಯಲು‌ ಸಾಧ್ಯ. ಹಿರಿಯರು ಸಂಸ್ಕಾರವಂತರಾಗುವ ಮೂಲಕ ಮಕ್ಕಳನ್ನು‌ ಸಂಸ್ಕಾರವಂತರನ್ನಾಗಿ ರೂಪಿಸಬೇಕೆಂದು ಚಿಕ್ಕಮಗಳೂರಿನ ಕನ್ನಡ ಪೂಜಾರಿ ಹೀರೆಮಗಳೂರು ಕಣ್ಣನ್ ತಿಳಿಸಿದರು.

ಅವರು ಮಾಣಿಲ ಶ್ರೀಧಾಮ ಶ್ರೀದುರ್ಗಾಮಹಾಲಕ್ಷ್ಮೀ ಕ್ಷೇತ್ರದಲ್ಲಿ ಶ್ರೀ ವರಮಾಲಕ್ಷ್ಮೀ ವ್ರತಾಚರಣೆ ಬೆಳ್ಳಿಹಬ್ಬ ಮಹೋತ್ಸವದ ಅಂಗವಾಗಿ ೪೮ ದಿನಗಳ ಕಾಲ ನಡೆಯುವ ಸಾಮೂಹಿಕ ಶ್ರೀಲಕ್ಷ್ಮೀ ಪೂಜೆಯ‌ 29ನೇ ದಿನದ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.

ಆಶೀರ್ವಚನ ನೀಡಿದ ಶ್ರೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಸನಾತನ ಹಿಂದೂ ಧರ್ಮ ಜಗತ್ತಿಗೆ ಬೆಳಕು ಕೊಟ್ಟಿದೆ. ದುರಿತ ದುರಂತಕ್ಕೆ ಸಂಸ್ಕೃತಿಯ ಕೊರತೆ ಮೂಲ ಕಾರಣವಾಗಿದೆ.

ಮಾನವೀಯ ಮೌಲ್ಯದ ಬದುಕು ನಮ್ಮದಾಗಬೇಕು. ಯೋಚಿಸಬೇಕಾದ ಕಾಲಘಟ್ಟವಿದು. ಉಪಕಾರ ಸ್ಮರಣೆ ನಮ್ಮಲ್ಲಿರಬೇಕು. ನಾವು ಸದಾ ಕೃತಜ್ಞರಾಗಿರಬೇಕು. ಬಾಲಭೋಜನ ಕಾರ್ಯಕ್ರಮ ಮನೆಮನೆಗಳಲ್ಲಿ ನಿತ್ಯ ನಿರಂತರವಾಗಿ ನಡೆಯಬೇಕಿದೆ. ಕೆಟ್ಟದರಲ್ಲಿಯೂ ಒಳ್ಳೆಯದನ್ನು ನೋಡುವ ಮನಸ್ಸು ನಿಮ್ಮದಾಗಲಿ ಎಂದರು.

ಶಿರಸಿ ಸಿದ್ದಾಪುರದ ನಿವೃತ್ತ ಹಿಂದಿ ಪ್ರಾಧ್ಯಾಪಕರಾದ ಕೆ.ಎ. ಭಟ್ , ಪುತ್ತೂರಿನ ಸತ್ಯಸಾಯಿ ಬಳಗದ ಪ್ರಶಾಂತಿ ಸದ್ಭಾವನ ಟ್ರಸ್ಟ್ ನ ಮಧುಸೂದನ ನಾಯಕ್, ಚಿಕ್ಕಮಗಳೂರು ಸರಕಾರಿ ಪಾಲಿಟೆಕ್ನಿಕ್ ನ ಉಪನ್ಯಾಸಕರಾದ ನಾಗಶ್ರೀ ತ್ಯಾಗರಾಜ್, ಕುಕ್ಕಾಜೆ ಶ್ರೀ ಕಾಳಿಕಾಂಬ ಮಹಿಳಾ ಸೇವಾ ಸಮಿತಿಯ ಅಧ್ಯಕ್ಷರಾದ

ಅನುರಾಧ ಪಳನೀರು, ಮಾಣಿಲ ಶ್ರೀಧಾಮ ಮಹಾಲಕ್ಷ್ಮೀ ಮಹಿಳಾ ಸೇವಾ ಸಮಿತಿ ಗೌರವಾಧ್ಯಕ್ಷೆ ರೇವತಿ ಪೆರ್ನೆ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಮಹಿಳಾ ಸೇವಾ ಸಮಿತಿ ಅಧ್ಯಕ್ಷೆ ವನಿತಾ ವಿ. ಶೆಟ್ಟಿ ಸ್ವಾಗತಿಸಿದರು.

ಅಶ್ವಿತ್ ಕುಲಾಲ್ ಪಡಂಗಡಿ ಕಾರ್ಯಕ್ರಮ ನಿರೂಪಿಸಿದರು.

More articles

Latest article