Wednesday, October 18, 2023

ವಿಟ್ಲ ತಾಲೂಕು ಮಟ್ಟದ ವಿಪತ್ತು ನಿರ್ವಹಣಾ ಶೌರ್ಯ ಸದಸ್ಯರ ತರಬೇತಿ ಕಾರ್ಯಕ್ರಮ

Must read

ವಿಟ್ಲ: ಯಾವುದೇ ವಿಪತ್ತು ಬರುವುದು ಆಕಸ್ಮಿಕವಾಗಿ ಅಂತಹ ಸಂದರ್ಭದಲ್ಲಿ ಎಲ್ಲೋ ದೂರದಲ್ಲಿ ಇರುವ ಸಹಾಯಕರನ್ನು ಕರೆದು ಕಾಯುವಾಗ ಅವಘಡದ ತೀವ್ರತೆ ಹೆಚ್ಚಾಗಿ ಅನಾಹುತ ಸಂಭವಿಸುವ ಅವಕಾಶ ಹೆಚ್ಚು ಆಗ ಆಪತ್ಬಾಂಧವರಾಗಿ ಸಹಾಯಕ್ಕೆ ಬರುವವರೇ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ಸದಸ್ಯರು. ಆದುದರಿಂದ ಅಂತಾ ಸದಸ್ಯರುಗಳಿಗೆ ಪ್ರಾಥಮಿಕ ಹಂತದಲ್ಲಿಯೇ ಸೂಕ್ತ ತರಬೇತಿ ನೀಡುವುದು ಅಗತ್ಯವಾಗಿದೆ ಎಂದು ಅಖಿಲ ಕರ್ನಾಟಕ ಜನಜಾಗೃತಿ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿನ್ಸೆಂಟ್ ಪಾಯಸ್ ರವರು ವಿಟ್ಲ ಯೋಜನಾ ಕಚೇರಿಯ ಸಭಾಂಗಣದಲ್ಲಿ ನಡೆದ ವಿಟ್ಲ ತಾಲೂಕು ಮಟ್ಟದ ವಿಪತ್ತು ನಿರ್ವಹಣಾ ಶೌರ್ಯ ಸದಸ್ಯರ ತರಬೇತಿ ಕಾರ್ಯಕ್ರಮದಲ್ಲಿ ಶೌರ್ಯ ತಂಡದ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು.

ವಿಪತ್ತು ನಿರ್ವಹಣಾ ತಂಡದ ಕಾರ್ಯವು ಕೇವಲ ವಿಪತ್ತು ನಿರ್ವಹಣೆ ಮಾತ್ರವಲ್ಲದೆ ತಮ್ಮ ತಮ್ಮ ಪ್ರದೇಶದಲ್ಲಿರುವ ನಿರ್ಗತಿಕರನ್ನು ಗುರುತಿಸಿ ಮುಖ್ಯ ವಾಹಿನಿಗೆ ತರುವ ಕಾರ್ಯದಲ್ಲೂ ಕೈಜೋಡಿಸುತ್ತಿದ್ದಾರೆ ಎಂದರು

ಕಾರ್ಯಕ್ರಮವನ್ನುಬಂಟ್ವಾಳ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ರೋನಾಲ್ಡ್ ಡಿಸೋಜ ದೀಪ ಬೆಳಗಿಸಿ ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಗತಿ ಬಂದು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ನವೀನ್ ಚಂದ್ರ ವಹಿಸಿದ್ದರು

ಕಾರ್ಯಕ್ರಮದಲ್ಲಿ ಶೌರ್ಯ ತಂಡವು ನಿರ್ವಹಿಸುವ ನಿರ್ಣಯ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು ಹಾಗೂ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ತಂಡವನ್ನು ಗುರುತಿಸಿ ಪ್ರಶಸ್ತಿ ಪತ್ರ ನೀಡಲಾಯಿತು. ಈ ಪ್ರಶಸ್ತಿಯನ್ನು ಕ್ರಮವಾಗಿ ಪ್ರಥಮ ಸ್ಥಾನವನ್ನು ಕಲ್ಲಡ್ಕ ವಲಯ ಹಾಗೂ ದ್ವಿತೀಯ ಸ್ಥಾನವನ್ನು ಪೆರ್ನೆ ವಲಯ ತಂಡ ತೃತೀಯ ಸ್ಥಾನವನ್ನು ವಿಟ್ಲ ವಲಯದ ತಂಡ ಪಡೆದುಕೊಂಡಿತು.

ವೇದಿಕೆಯಲ್ಲಿ ಯೋಜನೆಯ ದಕ್ಷಿಣ ಕನ್ನಡ ಜಿಲ್ಲೆ ಎರಡರ ನಿರ್ದೇಶಕರಾದ ಪ್ರವೀಣ್ ಕುಮಾರ್, ಡಿಸೋಜ,ವಿಟ್ಲವಲಯ ಜನಜಾಗ್ರತಿ ವೇದಿಕೆಯ ವಲಯ ಅಧ್ಯಕ್ಷರಾದ ಕೃಷ್ಣಯ್ಯ ಬಲ್ಲಾಲ್ ಮೊದಲಾದವರು ಉಪಸ್ಥಿತರಿದ್ದರು.

ತರಬೇತಿ ಶಿಬಿರದಲ್ಲಿ ವಿಟ್ಲ ತಾಲೂಕಿಗೆ ಸಂಬಂಧಪಟ್ಟ 8 ವಲಯಗಳ ಶೌರ್ಯ ತಂಡದ ಮೇಲ್ವಿಚಾರಕರುಗಳು, ಸಂಯೋಜಕರುಗಳು, ಶೌರ್ಯ ಸಮಿತಿಯ ಸದಸ್ಯರುಗಳು ಭಾಗವಹಿಸಿದ್ದರು.

ಮಾಲತಿ ಪ್ರಾರ್ಥಿಸಿ, ವಿಟ್ಲ ತಾಲೂಕು ಯೋಜನಾಧಿಕಾರಿ ಚೆನ್ನಪ್ಪ ಗೌಡ ಸ್ವಾಗತಿಸಿದರು. ಶೌರ್ಯ ವಿಪತ್ ವಿಭಾಗದ ಯೋಜನಾಧಿಕಾರಿ ಜಯವಂತ್ ಪಟಗಾರ್ ಪ್ರಾಸ್ತಾವಿಕ ವರದಿಯನ್ನು ಮಾಡಿ, ವಲಯ ಮೇಲ್ವಿಚಾರಕಿ ಸರಿತಾ ವಿಟ್ಲ ತಾಲೂಕಿನ ಶೌರ್ಯ ತಂಡದ ಸಾಧನ ವರದಿ ಮಂಡನೆ ಮಾಡಿದರು. ವಲಯ ಮೇಲ್ವಿಚಾರಕ ಗಂಗಾಧರ ಧನ್ಯವಾದ ನೀಡಿದರು. ಯೋಜನೆಯ ವಿಟ್ಲ ತಾಲೂಕು ಕೃಷಿ ಅಧಿಕಾರಿ ಚಿದಾನಂದ ಕಾರ್ಯಕ್ರಮ ನಿರ್ವಹಿಸಿದರು.

More articles

Latest article