Thursday, October 26, 2023

ನೆರೆಮನೆ ನಿವಾಸಿಗಳ ಮಧ್ಯೆ ಜಗಳ : ಮಹಿಳೆ ಸಹಿತ ನಾಲ್ವರ ವಿರುದ್ಧ ಪ್ರಕರಣ ದಾಖಲು

Must read

ವಿಟ್ಲ: ಕ್ಷುಲ್ಲಕ ವಿಚಾರವೊಂದಕ್ಕೆ ಸಂಬಂಧಿಸಿ ನೆರೆಮನೆಯ ನಿವಾಸಿಗಳ ನಡುವೆ ಜಗಳ ನಡೆದಿದ್ದು, ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಂಬಳಬೆಟ್ಟು ಕಾಂಪ್ಲೆಕ್ಸ್ ನಲ್ಲಿ ವಾಸವಿರುವ ಜೈನುಲ್ ಅಬೀದ್ ಅವರ ಆಯಿಶತ್ ಮುಬೀನಾ ಅವರು ವಿಟ್ಲ‌ ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಅದೇ ಕಾಂಪ್ಲೆಕ್ಸ್ ನಲ್ಲಿ ವಾಸ ಇರುವ ಆರೋಪಿಗಳಾದ ಹನ್ನತ್, ಆಕೆಯ ಸಹೋದರಿ, ಆಕೆಯ ತಾಯಿ, ಹಾಗೂ ಹನ್ನತ್ ಮಾವನ ವಿರುದ್ಧ ಪ್ರಕರಣ ದಾಖಲಾಗಿದೆ.

ವಿಟ್ಲ ಮುಡ್ನೂರು ಗ್ರಾಮದ ಕಂಬಳಬೆಟ್ಟು ಕಾಂಪ್ಲೆಕ್ಸ್ ನಲ್ಲಿ ವಾಸ ಮಾಡಿಕೊಂಡಿರುವ ಮುಬೀನಾ ತನ್ನ ತವರು ಮನೆಗೆ ಹೋಗಲು ಹೊರಡುತ್ತಿದ್ದ ಸಮಯ ನೆರೆ ಮನೆಯ ನಿವಾಸಿ ಹನ್ನತ್ ಮಗಳಾದ ಮಹದಿಗೆ ಕೆಟ್ಟ ಶಬ್ದಗಳಿಂದ ಬೈಯುತ್ತಿದ್ದರು. ಈ ಬಗ್ಗೆ ವಿಚಾರಿಸಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಮಾಡುವುದಾಗಿ ಎಂದು ಜೀವ ಬೆದರಿಕೆ ಹಾಕಿ ಹನ್ನತ್ ನ ಮಾವ ಎದೆಗೆ ಕೈ ಹಾಕಿ ಬುರ್ಕಾವನ್ನು ಕೈಯಿಂದ ಹರಿದು ಹಾಕಿದ್ದು ಆ ಸಮಯ ಮುಬೀನಾ ನೆಲಕ್ಕೆ ಬಿದ್ದಾಗ ಹೊಟ್ಟೆಗೆ ಹನ್ನತ್ ಮತ್ತು ಆಕೆಯ ತಾಯಿ ಕಾಲಿನಿಂದ ತುಳಿದುದರಿಂದ ಗಾಯಗೊಂಡಿರುತ್ತಾರೆ. ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

More articles

Latest article