Thursday, October 26, 2023

ವಿಟ್ಲ ಪಡ್ನೂರು ಗ್ರಾಮ ಸಭೆ

Must read

ವಿಟ್ಲ: ವಿಟ್ಲಪಡ್ನೂರು ಗ್ರಾಮ ಪಂಚಾಯತ್ ನ 2023-24 ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆಯು ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರೇಷ್ಮಾ ಶಂಕರಿ ಬಲಿಪಗುಲಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾದ ಪ್ರದೀಪ ಡಿ ಸೋಜ ನೋಡೆಲ್ ಅಧಿಕಾರಿಯಾಗಿ ಭಾಗವಹಿಸಿದ್ದರು.
ಗ್ರಾಮ ಪಂಚಾಯತ್ ಕಾರ್ಯದರ್ಶಿ ಸುಜಯ.ಕೆ ವರದಿ, ಜಮಾ-ಖರ್ಚು ಪ್ರಸ್ತಾವನೆಗಳನ್ನು ವಾಚಿಸಿದರು. ಗ್ರಾಮ ಸಭೆಗೆ ಆಗಮಿಸಿದ ವಿವಿಧ ಇಲಾಖಾಧಿಕಾರಿಗಳು ತಮ್ಮ ಇಲಾಖೆಗೆ ಸಂಬoಧಪಟ್ಟ ಸವಲತ್ತು/ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ರೇಷ್ಮಾ ಶಂಕರಿ ಬಲಿಪಗುಲಿ ಅಧ್ಯಕ್ಷೀಯ ಮಾತುಗಳನ್ನಾಡಿ ಎರಡೂವರೆ ವರ್ಷದ ಅವಧಿಯಲ್ಲಿ ತಮ್ಮ ಅಧ್ಯಕ್ಷ ಅವಧಿಯು ಇನ್ನೇನು ಮುಗಿಯುವ ಹಂತದಲ್ಲಿ ಇದ್ದು ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಅದಕ್ಕೆ ಸಹಕರಿಸಿದ ಗ್ರಾಮ ಪಂಚಾಯತ್ ಸದಸ್ಯರು, ಊರಿನ ನಾಗರಿಕರು, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಅವರೆಲ್ಲರಿಗೂ ವಂದಿಸಿದರು.

ತಮ್ಮ ಅವಧಿಯಲ್ಲಿ ಜೆಜೆಎಮ್ ಅನುಷ್ಠಾನ, ಗ್ರಾಮ ಪಂಚಾಯತ್ ಕಛೇರಿಗೆ ಸೋಲಾರ್ ಗ್ರಿಡ್, ಕಾಂಕ್ರಿಟ್ ರಸ್ತೆ, ಚರಂಡಿ ನಿರ್ಮಾಣ ಹಾಗೂ ಇತರೇ ಕಾಮಗಾರಿಗಳನ್ನು ಸೇರಿಕೊಂಡು ಒಟ್ಟು ರೂ.2.50 ಕೋಟಿ ಹಣ ಅಭಿವೃದ್ಧಿಗೆ ಖರ್ಚು ಮಾಡಲಾಗಿದೆ. ಹಾಗೂ ಶಾಸಕರ ಅನುದಾನ ರೂ. 13.00 ಕೋಟಿಯಷ್ಟು ಅಭಿವೃದ್ಧಿಗೆ ತ್ಮಮ ವ್ಯಾಪ್ತಿಯಲ್ಲಿ ಬಳಸಲಾಗಿದೆ. ಇಂತಹ ಹಲವಾರು ಕೆಲಸ ಕಾರ್ಯಗಳು ನಮ್ಮ ಸದಸ್ಯ ತಂಡದ ಸಹಕಾರ ಬೆಂಬಲದೊಂದಿಗೆ ಯಶಸ್ವಿಯಾಗಿದೆ. ಹೊಸದಾಗಿ ಆಯ್ಕೆಯಾಗಲಿರುವ ಮುಂದಿನ ಗ್ರಾಮ ಪಂಚಾಯತ್ ಅಧ್ಯಕ್ಷರಿಗೂ ಇದೇ ರೀತಿಯ ಸಹಕಾರ ಬೆಂಬಲ ನೀಡೋಣ ಎಂದರು. ಅವರ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಚಟುವಟಿಕೆಗಳನ್ನೊಳಗೊಂಡ ಪ್ರಾತ್ಯಕ್ಷಿಕೆಯನ್ನು (PPT) ಯನ್ನು ಪ್ರದರ್ಶಿಸಲಾಯಿತು.

ಈ ಸಭೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ನಾಗೇಶ್ ಕುಮಾರ್ , ಸದಸ್ಯರಾದ ಜಯಲಕ್ಷ್ಮೀ, ಜಯಂತ, ಪ್ರೇಮಲತಾ, ಕೆ.ರೇಖಾ, ಜಯಭಾರತಿ, ಶೆರೀಫ್ , ಹರ್ಷದ್ .ಕೆ.ಎಮ್, ಅವ್ವಮ್ಮ, ನೆಬಿಸಾ ಕೆ.ಎಚ್, ಮೈಮೂದ್ , ಸಂದೇಶ್ ಶೆಟ್ಟಿ, ಅಮಿತಾ, ಆರೋಗ್ಯ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯವರು, ಅಂಗನವಾಡಿ ಕಾರ್ಯಕರ್ತೆಯವರು, ಶಾಲಾ ಮುಖ್ಯಸ್ಥರು, ಒಕ್ಕೂಟದ ಸದಸ್ಯರುಗಳು, ಗ್ರಾಮ ಪಂಚಾಯತ್ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಶ್ರೀಶೈಲಾ ಡೋಣುರ ಕಾರ್ಯಕ್ರಮ ನಿರೂಪಿಸಿದರು. ಗ್ರಾಮ ಪಂಚಾಯತ್ ಸದಸ್ಯರಾದ ರವೀಶ್ ಶೆಟ್ಟಿ ಕರ್ಕಳ ವಂದಿಸಿದರು.

More articles

Latest article