ವಿಟ್ಲ: ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನದಲ್ಲಿ ನಾಗರ ಪಂಚಮಿ ಮಹೋತ್ಸವ ನಡೆಯಿತು. ಶ್ರೀ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮಿಗಳು ಕ್ಷೇತ್ರದ ಸ್ವಯಂಭೂ ನಾಗದೇವರ ಸನ್ನಿಧಿಯಲ್ಲಿ ನಾಗನಿಗೆ ವಿಶೇಷ ಪೂಜೆ, ತನು,ಕ್ಷೀರಾಭಿಷೇಕ ಎರೆದರು. ಆಶ್ಲೇಷ ಬಲಿ ನಡೆಯಿತು.
ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಅವರು ನಂಬಿಕೆ ಬಲವಾಗಿದ್ದಾಗ ಆತ್ಮಸಂತೋಷವನ್ನು ಅನುಭವಿಸಬಹುದು. ಆತ್ಮಾರ್ಥವಾಗಿ ನಂಬಿದಾಗ ದೇವರ ಅನುಗ್ರಹ ಸಿಗಬಹುದು. ನಾಗಾರಾಧನೆಯ ಹಿಂದೆ ಓಂಕಾರ ತತ್ವ ಹುದುಗಿದೆ. ತುಳುನಾಡು ಮತ್ತು ನಾಗದೇವರಿಗೆ ಅವಿನಾಭಾವ ಸಂಬಂಧವಿದೆ. ದೇವರ ಹೆಸರಿನಲ್ಲಿ ಮಾತ್ರ ಪ್ರಕೃತಿಯನ್ನು ಉಳಿಸಿಕೊಳ್ಳಲು ಸಾಧ್ಯ. ಪ್ರಕೃತಿ ಉಳಿದಾಗ ಸಂಸ್ಕೃತಿ ಉಳಿಯಬಹುದು ಎಂದು ತಿಳಿಸಿದರು.
ಶ್ರೀ ಸಂಸ್ಥಾನದ ಯೋಗಿನಿ ಶ್ರೀಮಾತಾನಂದಮಯಿ ದಿವ್ಯ ಉಪಸ್ಥಿತರಿದ್ದರು. ವೇದಮೂರ್ತಿ ಚಂದ್ರಶೇಖರ ಉಪಾಧ್ಯಾಯ ಅವರ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳು ನಡೆದವು.
ನಾಗಾರಾಧನೆಯ ಹಿಂದೆ