Friday, October 27, 2023

ಅಕ್ರಮವಾಗಿ ರಕ್ತ ಚಂದನ ಸಾಗಾಟ : ಇಬ್ಬರು ಆರೋಪಿಗಳ ಬಂಧನ

Must read

ಬೆಳ್ತಂಗಡಿ: ವೇಣೂರು ಸಮೀಪ ಕರಿಮಣೇಲು ಎಂಬಲ್ಲಿ ವೇಣೂರು ವಲಯ ಅರಣ್ಯಧಿಕಾರಿ ನೇತೃತ್ವದ ತಂಡವು 125 ಕೆ.ಜಿ. ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ರಕ್ತ ಚಂದನವನ್ನು ವಶಕ್ಕೆ ಪಡೆದಿದ್ದಾರೆ.

ಬಂಟ್ವಾಳ ಮಾವಿನಕಟ್ಟೆ ನಿವಾಸಿ ಖಾಲಿದ್ ಹಾಗೂ ಗುರುವಾಯನಕೆರೆ ನಿವಾಸಿ ದೀಕ್ಷಿತ್ ಎಂಬವರನ್ನು ಬಂಧಿಸಲಾಗಿದೆ.

ಇವರು ವೇಣೂರು ಕರಿಮಣೇಲು ಎಂಬಲ್ಲಿಂದ ಅಕ್ರಮವಾಗಿ ರಕ್ತಚಂದನ ಸಾಗಾಟ ನಡೆಸಿದ್ದರು‌. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ವಲಯ ಅರಣ್ಯಧಿಕಾರಿ ಮಹೀಮ್ ಅವರ ನೇತೃತ್ವದ ತಂಡ ಆರೋಪಿಗಳು ಸಹಿತ 125 ಕೆ.ಜಿ. ರಕ್ತಚಂದನ ಸಾಗಾಟಕ್ಕೆ ಬಳಸಿದ ವಾಹನವನ್ನು ವಶಕ್ಕೆ‌ ಪಡೆದಿದ್ದಾರೆ.

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದು, ಇನ್ನಷ್ಟೇ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.

More articles

Latest article