Saturday, October 21, 2023

ಖಾಸಗಿ ಬಸ್ ಪಲ್ಟಿ ; ಹಲವರಿಗೆ ಗಾಯ

Must read

ವೇಣೂರು: ರಾಜ್ಯ ಹೆದ್ದಾರಿ 70ರ ಮೂಡಬಿದ್ರಿ – ಬೆಳ್ತಂಗಡಿ ರಸ್ತೆಯ ವೇಣೂರು ಸಮೀಪ ಗಾಂಧಿನಗರದಲ್ಲಿ ಮೂಡಬಿದ್ರಿಯಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.

ಕಾರ್ಕಳ ಮೂಡುಬಿದಿರೆಯಾಗಿ ಬೆಂಗಳೂರಿಗೆ ಸಾಗುವ ವಿಶಾಲ್ ಟೂರಿಸ್ಟ್ ಆಗಿದ್ದು, ಬೆಳ್ತಂಗಡಿ ತಾಲೂಕಿನ ಪಡ್ಡಂದಡ್ಕ ಗಾಂಧೀನಗರದ ನಡುವೆ ಅಪಘಾತಕ್ಕೀಡಾಗಿದೆ. ಒಟ್ಟು 27 ಮಂದಿ ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದೆ.

ತಕ್ಷಣ ಅಂಬ್ಯುಲೆನ್ಸ್ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.

ವೇಣೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

More articles

Latest article