Tuesday, October 24, 2023

ಜಿಲ್ಲಾ ಪಂಚಾಯತ್ ದ.ಕ, ವೀರಕಂಭ ಗ್ರಾ.ಪಂ ವತಿಯಿಂದ “ಗ್ರಾಮ ಆರೋಗ್ಯ” ಕಾರ್ಯಕ್ರಮ

Must read

ಕಲ್ಲಡ್ಕ: ಗ್ರಾಮೀಣಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್ ಇದರ ಸಹಯೋಗದೊಂದಿಗೆ ಜಿಲ್ಲಾ ಪಂಚಾಯತ್ ದಕ್ಷಿಣ ಕನ್ನಡ ಹಾಗೂ ಗ್ರಾಮ ಪಂಚಾಯತ್ ವೀರಕಂಭ ವತಿಯಿಂದ “ಗ್ರಾಮ ಆರೋಗ್ಯ” ಕಾರ್ಯಕ್ರಮ ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದ ಕೆಲಿಂಜ ಶ್ರೀನಿಕೇತನ ಸಭಾಭವನದಲ್ಲಿ ಜರಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೀರಕಂಭ ಗ್ರಾಮ ಪಂಚಾಯತ್ ಅಧ್ಯಕ್ಷ ಲಲಿತ ವಹಿಸಿದ್ದರು.

ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಕುಸುಮ ಕ್ಷಯರೋಗ, ಡೆಂಗ್ಯೂ ಮಲೇರಿಯಾ ಮುಂತಾದ ರೋಗಗಳ ಲಕ್ಷಣ ಹಾಗೂ ಅವುಗಳ ನಿಯಂತ್ರಣದ ಬಗ್ಗೆ ಮಾಹಿತಿ ನೀಡಿದರು.

ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ನೇತ್ರಾಧಿಕಾರಿ ಶ್ರೀನಿಧಿ ಪ್ರಸ್ತುತ ಸಮಯದಲ್ಲಿ ಎಲ್ಲರನ್ನೂ ಕಾಡುತ್ತಿರುವ ಕೆಂಗಣ್ಣು ರೋಗದ ಲಕ್ಷಣ ಹಾಗೂ ತಡೆಗಟ್ಟುವ ಬಗ್ಗೆ ಮಾಹಿತಿ ಹಂಚಿಕೊಂಡರು.

ಕಾರ್ಯಗಾರದಲ್ಲಿ ಕಣ್ಣಿನ ಪರೀಕ್ಷೆ,ಆಸಾಂಕ್ರಾಮಿಕ ರೋಗಗಳಾದ ಅಧಿಕ ರಕ್ತದೋತ್ತದ, ಸಕ್ಕರೆ ಕಾಯಿಲೆ ಪತ್ತೆ ಮತ್ತು ಚಿಕಿತ್ಸೆ,ರಕ್ತ ಹೀನತೆ ( ಅನಿಮಿಯಾ )ಅಪೌಷ್ಟಿಕತೆ ಪರೀಕ್ಷೆ ಮತ್ತು ನಿಯಂತ್ರಣ,ಕ್ಷಯ ರೋಗದ ಪರೀಕ್ಷೆ ಮತ್ತು ಚಿಕಿತ್ಸೆ,ಮಾನಸಿಕ ಆರೋಗ್ಯಕ್ಕೆ ಆಪ್ತ ಸಮಾಲೋಚನೇ, ಇಸಿಜಿ, ಮೊದಲಾದವುಗಳನ್ನು ಮಾಡಲಾಯಿತು,

ಕಾರ್ಯಕ್ರಮದ ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜನಾರ್ದನ ಪೂಜಾರಿ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಸಂದೀಪ್, ಜಯಪ್ರಸಾದ್, ಅಬ್ದುಲ್ ರಹಿಮಾನ್, ಉಮಾವತಿ, ಶ್ರೀನಿಕೇತನ ಸಮುದಾಯ ಭವನದ ಅಧ್ಯಕ್ಷರಾದ ಚೇತನ್ ಶೆಟ್ಟಿ, ತಾಲೂಕು ಆರೋಗ್ಯ ಅಧಿಕಾರಿ ಅಶೋಕ್ ರೈ,ಸಮುದಾಯ ಆರೋಗ್ಯ ಕೇಂದ್ರ ವಿಟ್ಲದ ವೈದ್ಯಾಧಿಕಾರಿ ಡಾಕ್ಟರ್ ಆಶಿಕಾ, ಮೊದಲಾದವರು ಉಪಸ್ಥಿತರಿದ್ದರು.

ವಿರಕಂಬ ಗ್ರಾಮ ವ್ಯಾಪ್ತಿಯ ಸಮುದಾಯಆರೋಗ್ಯ ಅಧಿಕಾರಿ ಹರ್ಷಿತ ಸ್ವಾಗತಿಸಿ, ಗ್ರಾಮ ಪಂಚಾಯತ್ ಅಧಿಕಾರಿ ನಿಶಾಂತ್ ವಂದಿಸಿದರು. ಬಂಟ್ವಾಳ ತಾಲೂಕು ಆರೋಗ್ಯ ಅಭಿಯಾನ ಸಂಯೋಜಕರಾದ ಅಲ್ಲಾಭಕ್ಷ ಕಾರ್ಯಕ್ರಮ ನಿರೂಪಿಸಿದರು.

ವೀರಕಂಭ ಹಾಗೂ ಕೋಡಪದವು ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳಾದ ಜ್ಯೋತಿ ಕೆಎನ್, ಸೌಮ್ಯ ಪಿ, ಸಮುದಾಯ ಆರೋಗ್ಯ ಅಧಿಕಾರಿಗಳಾದ ನಿತಿನ್ ಪೆರ್ನಾಂಡಿಸ್ ಕೊಡಪದವು , ದೀಕ್ಷಿತ ವಿಟ್ಲ,ಗ್ರಾಮ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರಾದ ಕೋಮಲಾಕ್ಷಿ, ಲೀಲಾವತಿ, ಸ್ನೇಹಲತಾ, ಶಶಿಕಲಾ, ಮೋಹಿನಿ,ಮೊದಲಾದವರು ಆರೋಗ್ಯ ತಪಾಸಣೆಯಲ್ಲಿ ಸಹಕರಿಸಿದರು.

More articles

Latest article