Friday, October 27, 2023

ಮಗಳ ಮೇಲೆ ನಿರಂತರ ಅತ್ಯಾಚಾರ : ಪೋಕ್ಸೋ ಕಾಯ್ದೆಯಡಿ ತಂದೆಯ ಬಂಧನ

Must read

ಉಪ್ಪಿನಂಗಡಿ: ಸ್ವಂತ ತಂದೆಯೇ ಅಪ್ರಾಪ್ತ ವಯಸ್ಕ ಮಗಳ ಮೇಲೆ ಅತ್ಯಾಚಾರವೆಸಗಿ ಆಕೆಯನ್ನು ಗರ್ಭಿಣಿಯನ್ನಾಗಿಸಿದ ಘಟನೆ ಗೋಳಿತ್ತೂಟ್ಟು ಗ್ರಾ.ಪಂ. ವ್ಯಾಪ್ತಿಯಲ್ಲಿ ನಡೆದಿದ್ದು, ಪೋಕ್ಸೋ ಕಾಯ್ದೆಯಡಿ ಆರೋಪಿಯನ್ನು ಬಂಧಿಸಲಾಗಿದೆ.

ಗೋಳಿತೊಟ್ಟು ಗ್ರಾ.ಪಂ. ವ್ಯಾಪ್ತಿಯ ನಿವಾಸಿ ತನ್ನ ಮಗಳ ಮೇಲೆ ಕೆಲವು ತಿಂಗಳುಗಳ ಹಿಂದೆ ಅತ್ಯಾಚಾರ ವೆಸಗಿದ್ದು, ಮಗಳ ಆರೋಗ್ಯದ ಮೇಲೆ ವ್ಯತ್ಯಾಸಗಳಾದಾಗ ತಾಯಿ ಮಗಳನ್ನು ಆ. 16ರಂದು ಆಸ್ಪತ್ರೆಗೆ ಕರೆದು ಕೊಂಡು ಹೋದಾಗ ಮಗಳು ಗರ್ಭಿಣಿ ಯಾಗಿರುವುದು ಬೆಳಕಿಗೆ ಬಂದಿದೆ.

ಬಳಿಕ ಸಂತ್ರಸ್ತೆ ನೀಡಿದ ದೂರಿನಂತೆ ಪೋಕ್ಸೋ ಕಾಯ್ದೆ ದಾಖಲಿಸಿಕೊಂಡ ಉಪ್ಪಿನಂಗಡಿ ಪೊಲೀಸರು ಆರೋಪಿ ತಂದೆಯನ್ನು ಬಂಧಿಸಿದ್ದಾರೆ.

More articles

Latest article