Tuesday, October 31, 2023

ಸುಬ್ರಹ್ಮಣ್ಯ ರೋಟರಿಯಿಂದ ಎಸ್ ಎಸ್ ಪಿ ಯು ಕಾಲೇಜಿಗೆ ಅರೆಕಾ ಫಾo ಗಿಡ ಹಾಗೂ ಚೆಟ್ಟಿ ಕೊಡುಗೆ

Must read

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಸ್ಥಳೀಯ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜಿಗೆ 60 ಅರೆಕಾ ಫಾo ಗಿಡಗಳು ಹಾಗೂ ಚಟ್ಟಿ ಗಳನ್ನು ಸೋಮವಾರ ಕೊಡುಗೆಯಾಗಿ ನೀಡಲಾಯಿತು.

ಕಾಲೇಜಿನ ಪ್ರಾಂಶುಪಾಲ ಸೋಮಶೇಖರ ನಾಯಕ್ ಅವರಿಗೆ ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಅಧ್ಯಕ್ಷ ರೋ. ಪ್ರಶಾಂತ್ ಕೋಡಿಬೈಲು ಗಿಡ ಹಾಗೂ ಚೆಟ್ಟಿಗಳನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿನ ಪೂರ್ವ ಅಧ್ಯಕ್ಷರುಗಳಾದ ರೋ. ವಿಶ್ವನಾಥ ನಡುತೋಟ ರೋ. ವೆಂಕಟೇಶ್ ಎಚ್ ಎಲ್, ರೋ. ಡಾ lರವಿ ಕಕ್ಕೆ ಪದವು ರೋ ಲೋಕೇಶ್ ಬಿ ಎನ್,ನಿರ್ದೇಶಕರುಗಳಾದ ಚಂದ್ರಶೇಖರ ನಾಯರ್ , ಕಾಲೇಜಿನ ಉಪನ್ಯಾಸಕರುಗಳಾದ ರೋ. ಜಯಪ್ರಕಾಶ್, ರೋ .ಗಿರೀಶ್, ರತ್ನಾಕರ, ಮನೋಜ್, ಸವಿತಾ, ಶ್ರುತಿ, ಹೈಸ್ಕೂಲ್ ವಿಭಾಗದ ಮುಖ್ಯಸ್ಥರಾದ ಯಶವಂತ ರೈ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ರಾಜೇಶ್, ಉಪಸ್ಥಿತರಿದ್ದರು.

More articles

Latest article