Wednesday, October 25, 2023

ಸುಬ್ರಹ್ಮಣ್ಯ ಪರಿಸರದಲ್ಲಿ ಶ್ರದ್ಧಾ ಭಕ್ತಿಯ ವರಮಹಾಲಕ್ಷ್ಮೀ ವೃತಾಚರಣೆ

Must read

ಸುಬ್ರಹ್ಮಣ್ಯ: ಗ್ರಾಮೀಣ ಪ್ರದೇಶಗಳಲ್ಲಿ ಶ್ರದ್ದಾ ಭಕ್ತಿಯಿಂದ ಸಂಭ್ರಮದ ವರಮಹಾಲಕ್ಷ್ಮೀ ಪೂಜೆಯು ಶುಕ್ರವಾರ ನೆರವೇರಿತು.

ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ಸುಬ್ರಹ್ಮಣ್ಯ ಇವರ ವತಿಯಿಂದ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಳದ ಆದಿಸುಬ್ರಹ್ಮಣ್ಯ ಕಲ್ಯಾಣ ಮಂಟಪದಲ್ಲಿ ವರಮಹಾಲಕ್ಷ್ಮೀ ಪೂಜೆಯು ನಡೆಯಿತು. ಅಸಂಖ್ಯಾತ ಮಹಿಳೆಯರು ವೃತದಲ್ಲಿ ಭಾಗವಹಿಸಿ ಲಕ್ಷ್ಮೀ ಕೃಪೆಗೆ ಪಾತ್ರರಾದರು.

ಪುರೋಹಿತರಾದ ದಿನೇಶ್ ಬನ್ನಿಂತಾಯ ಅವರ ಹಿರಿತನದಲ್ಲಿ ವಿವಿಧ ವೈದಿಕ ವಿದಿವಿಧಾನಗಳು ನೆರವೇರಿತು. ಆರಂಭದಲ್ಲಿ ಮಾತೆಯರು ಕಲಶದೊಂದಿಗೆ ಆದಿ ಸುಬ್ರಹ್ಮಣ್ಯ ದೇವಳದ ಸಮೀಪ ಹರಿಯುವ ದರ್ಪಣ ತೀರ್ಥ ನದಿಗೆ ತೆರಳಿದರು. ಅಲ್ಲಿ ನದಿಗೆ ಪೂಜೆ ಮಾಡಿ ಬಳಿಕ ಯಮುನೆಯನ್ನು ಕಲಶದಲ್ಲಿ ಹಿಡಿದು ಸಭಾಂಗಣಕ್ಕೆ ತೆರಳಿದರು. ಶ್ರೀ ದೇವಿಯ ಪ್ರತಿಷ್ಠೆ ಬಳಿಕ ಪೂಜಾ ವಿದಿ-ವಿಧಾನಗಳು ನೆರವೇರಿತು.

ಮಹಾಪೂಜೆಯ ಬಳಿಕ ಸರ್ವರಿಗೂ ಪ್ರಸಾದ ವಿತರಿಸಲಾಯಿತು.ಪ್ರಸಾದದೊಂದಿಗೆ ಕುಂಕುಮ, ಬಳೆ, ರವಿಕೆ ಕಣವನ್ನು ಮಾತೆಯರಿಗೆ ನೀಡಲಾಯಿತು. ಪೂಜೆಯ ನಿಮಿತ್ತ ಅತ್ಯಾಕರ್ಷಕ ಹೂವಿನ ರಂಗೋಲಿಯನ್ನು ಬಿಡಿಸಲಾಗಿತ್ತು. ವೃತಾಚರಣೆ ನಿಮಿತ್ತ ಲಲಿತಾ ಸಹಸ್ರನಾಮ ಪಠಣ ನೆರವೇರಿತು.

ಈ ಸಂದರ್ಭ ಸಮಿತಿಯ ಅಧ್ಯಕ್ಷೆ ಗಂಗಾದೇವಿ, ಕಾರ್ಯದರ್ಶಿ ಸುಭಾಷಿಣಿ ಶಿವರಾಂ, ಕೋಶಾಧಿಕಾರಿ ಆಶಾ.ವಿ.ಶೆಣೈ, ಪದಾಧಿಕಾರಿಗಳಾದ ಶಾರದಾ ಭಟ್, ಹರಿಣಾಕ್ಷಿ, ಶೋಭಾ ಗಿರಿಧರ್, ಜಯಲಕ್ಷ್ಮೀ ಪಿ.ಎಸ್, ವನಜಾ.ವಿ.ಭಟ್, ಶ್ರೀದೇವಿ, ತ್ರಿವೇಣಿ ದಾಮ್ಲೆ, ಲತಾ ಸವೇಶ್ವರ ಭಟ್ ಸೇರಿದಂತೆ ಭಕ್ತರು ಉಪಸ್ಥಿತರಿದ್ದರು.

More articles

Latest article