Saturday, October 28, 2023

ಸುಬ್ರಹ್ಮಣ್ಯದಲ್ಲಿ ಉಚಿತ ಫೂಟ್ ಪಲ್ಸ್ ತೆರಪಿ ಶಿಬಿರ ಉದ್ಘಾಟನೆ

Must read

ಸುಬ್ರಹ್ಮಣ್ಯ: ಡಾಕ್ಟರ್ ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ಸುಬ್ರಹ್ಮಣ್ಯ ಮತ್ತು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಇದರ ನೇತೃತ್ವದಲ್ಲಿ ಪಂಚಾಯತ್ ಸಭಾಂಗಣದಲ್ಲಿ ಉಚಿತ ಫುಡ್ ಪಲ್ಸ್ ತೆರಪಿ ಶಿಬಿರ ಉದ್ಘಾಟನೆಗೊಂಡಿತು.

ಶಿಬಿರದ ಉದ್ಘಾಟನೆಯನ್ನು ನೆರವೇರಿಸಿ ದವರು ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಎಸ್ ಎನ್ ಉಡುಪ ಅವರು ಮಾತನಾಡುತ್ತಾ ಹಿಂದಿನ ಕಾಲದಿಂದಲೂ ವೈದ್ಯರನ್ನ ಗೆಲಿ ಮಾಡುವ ಸ್ಥಿತಿ ಬಂದಿತ್ತು. ಆದರೆ ನಾವು ವೈದ್ಯರನ್ನ ಗೇಲಿ ಮಾಡುವುದು ಸರಿಯಲ್ಲ. ಶ್ರದ್ಧೆಯಿಂದ ವೈದ್ಯರಿಂದ ತೆಗೆದುಕೊಳ್ಳುವ ಔಷಧ ಅದು ವಿಷ್ಣುಪಾಧಕ್ಕೆ ಅಥವಾ ಅಮೃತಕ್ಕೆ ಸಮಾನ ಎಂದು ಹೇಳಿದರು.

ಇಂದು ವಿವಿಧ ಹೊಸತನದ ವೈದ್ಯ ಪದ್ಧತಿಯಿಂದ ಯಾವುದೇ ರೋಗವನ್ನು ಸುಲಭವಾಗಿ ಗುಣಪಡಿಸಲು ಸಾಧ್ಯವಾಗಿದೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ನ ಸಂಸ್ಥಾಪಕ ಡಾl ರವಿ ಕಕ್ಕೆಪದವು ಅವರು ವಹಿಸಿದ್ದರು.

ಪುತ್ತೂರಿನ ನೆಮ್ಮದಿ ವೆಲ್ನೆಸ್ ಸೆಂಟರ್ನ ಮಾಲಕರಾದ ಪ್ರಭಾಕರ ಸಾಲ್ಯಾನ್ ಅವರು ಉಚಿತ ಪಾದ ಪಲ್ಸ್ ತೆರಪಿಯ ಬಗ್ಗೆ ಮಾಹಿತಿಗಳನ್ನು ನೀಡಿದರು.

ವೇದಿಕೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ಲlರಾಮಚಂದ್ರ ಪಲಂಗಾಯ ರೋಟರಿ ಕ್ಲಬ್ ಅಧ್ಯಕ್ಷರು ರೋl ಪ್ರಶಾಂತ್ ಕೋಡಿಬೈಲ್, ವಾಣಿ ವನಿತಾ ಸಮಾಜ ಸುಬ್ರಹ್ಮಣ್ಯ, ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ಸುಬ್ರಮಣ್ಯ, ವರ್ತಕರ ಸಂಘ ಸುಬ್ರಮಣ್ಯ ಹಾಗೂ ಇನ್ನಿತರ ವಿವಿಧ ಸಂಘ-ಸಂಸ್ಥೆಗಳು ಧಾರ್ಮಿಕ ಸಂಸ್ಥೆಗಳು ಸುಬ್ರಹ್ಮಣ್ಯ, ಕುಕ್ಕೆ ಶ್ರೀ ಆಟೋ ಚಾಲಕ ಮಾಲಕ ಸಂಘದ ಅಧ್ಯಕ್ಷ ವಿವೇಕ ದೇವರಗದ್ದೆ, ಬಿಎಂಎಸ್ ಆಟೋ ಚಾಲಕ ಮಾಲಕ ಸಂಘದ ಅಧ್ಯಕ್ಷ ದಿನೇಶ್, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಕಾರ್ಯದರ್ಶಿ ಮೋನಪ್ಪ, ಉಪಸ್ಥಿತರಿದ್ದರು.

ಸುಬ್ರಹ್ಮಣ್ಯ ಸೀನಿಯರ್ ಚೇಂಬರ್ ಲೀಜನ್ ಅಧ್ಯಕ್ಷ . ವಿಶ್ವನಾಥ ನಡುತೋಟ ನಿರೂಪಿಸಿದ ಕಾರ್ಯಕ್ರಮದ ಆರಂಭದಲ್ಲಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಮೋನಪ್ಪ ಸ್ವಾಗತಿಸಿದರು. ಗ್ರಾಮ ಪಂಚಾಯತ್ ಸದಸ್ಯ ಭಾರತಿ ದಿನೇಶ್ ವಂಧಿಸಿದರು.

More articles

Latest article