ಸುಬ್ರಹ್ಮಣ್ಯ: ನಾಳೆ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ನಲ್ಲಿ 76ನೇ ಸಾಲಿನ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮವು ಜರಗಲಿದೆ.
ಗೌರವಾನ್ವಿತ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಆಡಳಿತ ಮಂಡಳಿಯ ಅಧ್ಯಕ್ಷರು-ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರುಗಳು, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವ್ಯಾಪ್ತಿಗೊಳಪಟ್ಟ ಸುಬ್ರಹ್ಮಣ್ಯ-ಏನೆಕಲ್ಲು ಮತ್ತು ಐನೆಕ್ಕಿದು ಗ್ರಾಮಗಳ ಎಲ್ಲಾ ಗ್ರಾಮಸ್ಥರು-ನಾಗರೀಕರು, ರೋಟರಿ ಕ್ಲಬ್ ಸುಬ್ರಹ್ಮಣ್ಯ, ಲಯನ್ಸ್ ಕ್ಲಬ್ ಸುಬ್ರಹ್ಮಣ್ಯ, ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಸುಬ್ರಹ್ಮಣ್ಯ, ಕುಕ್ಕೆಶ್ರೀ ಜೆಸಿಐ ಸುಬ್ರಹ್ಮಣ್ಯ, ಸುಬ್ರಹ್ಮಣ್ಯ-ಐನಕ್ಕಿದು ಸೇವಾ ಕೃಷಿ ಪತ್ತಿನ ಸಹಕಾರಿ ಸಂಘ(ನಿ) ಸುಬ್ರಹ್ಮಣ್ಯ, ಮಹಿಳೆಯರ ವಿವಿಧೋದ್ದೇಶ ಸಹಕಾರಿ ಸಂಘ(ನಿ) ಸುಬ್ರಹ್ಮಣ್ಯ, ಓಂ ಶ್ರೀ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಸುಬ್ರಹ್ಮಣ್ಯ, ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ (ನಿ) ಸುಬ್ರಹ್ಮಣ್ಯ, ಕುಕ್ಕೆಶ್ರೀ ಟ್ಯಾಕ್ಸಿ ಚಾಲಕ-ಮಾಲಕರ ಸಂಘ ಸುಬ್ರಹ್ಮಣ್ಯ, ಕುಕ್ಕೆಶ್ರೀ ಅಟೋ ಚಾಲಕ-ಮಾಲಕರ ಸಂಘ ಸುಬ್ರಹ್ಮಣ್ಯ, ಬಿಎಂಎಸ್ ಅಟೋ ಚಾಲಕ-ಮಾಲಕರ ಸಂಘ ಸುಬ್ರಹ್ಮಣ್ಯ, ವಾಣಿ ವನಿತ ಸಮಾಜ ಸುಬ್ರಹ್ಮಣ್ಯ, ಪ್ರೆಸ್ ಕ್ಲಬ್ ಸುಬ್ರಹ್ಮಣ್ಯ, ವರ್ತಕರ ಸಂಘ ಸುಬ್ರಹ್ಮಣ್ಯ, ಶ್ರೀ ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ಸುಬ್ರಹ್ಮಣ್ಯ ಮತ್ತು ವಿವಿಧ ಸಂಘ-ಸಂಸ್ಥೆಗಳ ಹಾಗೂ ವಿವಿಧ ಧಾರ್ಮಿಕ ಸಂಸ್ಥೆಗಳ ಅಧ್ಯಕ್ಷರು-ಉಪಾಧ್ಯಕ್ಷರು-ಪದಾಧಿಕಾರಿಗಳು ಮತ್ತು ಎಲ್ಲಾ ಸದಸ್ಯರುಗಳಾದ ತಮ್ಮೆಲ್ಲರಲ್ಲಿಯೂ ಈ ಮೂಲಕ ವಿನಂತಿಸಿಕೊಳ್ಳುವುದೇನೆಂದರೇ, ದಿನಾಂಕ: 15.08.2023ನೇ ಮಂಗಳವಾರ ಪೂರ್ವಾಹ್ನ ಗಂಟೆ 8.45ಕ್ಕೆ ಸರಿಯಾಗಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ನಲ್ಲಿ 76ನೇ ಸಾಲಿನ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮವು ಜರಗಲಿರುವುದು.
ಈ ಕಾರ್ಯಕ್ರಮಕ್ಕೆ ತಾವೆಲ್ಲರೂ ಬಂದು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಲಲಿತಾ. ಜಿ, ಸರ್ವ ಸದಸ್ಯರು ಹಾಗೂ ಸುಬ್ರಮಣ್ಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆಕಾಶ್. ಕೆ, ಹಾಗೂ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಕಾರ್ಯದರ್ಶಿಗಳಾದ ಮೋನಪ್ಪ ಅವರು
ವಿನಯ ಪೂರ್ವಕವಾಗಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವತಿಯಿಂದ ವಿನಂತಿ ಮಾಡಿದ್ದಾರೆ.