Thursday, April 11, 2024

ಸುಬ್ರಹ್ಮಣ್ಯದ ಎಸ್‌ಎಸ್‌ಪಿಯು ಕಾಲೇಜಿನಲ್ಲಿ ಆಟಿದ ಪರ್ಬ

ಸುಬ್ರಹ್ಮಣ್ಯ: ಆಧುನಿಕ ಜಂಜಾಟದಲ್ಲಿ ನಾವು ಸಾಂಪ್ರದಾಯಿಕ ಆಚರಣೆಗಳನ್ನು ಹಾಗೂ ಜನಪದೀಯ ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕು. ತುಳುನಾಡಿನ ವಿಶೇಷ ಸಂಸ್ಕೃತಿಯ ಬಗ್ಗೆ ಯುವ ಜನತೆಗೆ ತಿಳಿಸಿ ಅವರಲ್ಲಿ ಜಾಗೃತಿ ಮೂಡಿಸಬೇಕು. ಪ್ರಾಚೀನ ತುಳುನಾಡ ಜನಪದೀಯ ಆಚರಣೆಗಳು ನಮ್ಮ ಭವಿಷ್ಯಕ್ಕೆ ದಾರಿದೀಪಗಳಾಗಿದೆ. ಅವುಗಳನ್ನು ಮುಂದಿನ ಪೀಳಿಗೆಯೂ ಬೆಳೆಸಿಕೊಳ್ಳಬೇಕು. ನಮ್ಮ ಜನಪದೀಯ ಆಚರಣೆಗಳ ಸ್ಪಷ್ಟ ಅರಿವು ಮೂಡಿಸುವಲ್ಲಿ ಇಂತಹ ಕಾರ್ಯಗಳು ಶ್ಲಾಘನೀಯ ಎಂದು ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಮತ್ತು ಎಸ್‌ಎಸ್‌ಪಿಯು ಕಾಲೇಜಿನ ಕಾರ್ಯದರ್ಶಿ ಡಾ.ನಿಂಗಯ್ಯ ಹೇಳಿದರು.

ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಕ್ಕೊಳಪಟ್ಟ ಎಸ್‌ಎಸ್‌ಪಿಯು ಕಾಲೇಜಿನಲ್ಲಿ ಸೋಮವಾರ ನಡೆದ ಆಟಿದ ಪರ್ಬ ಉದ್ಘಾಟಿಸಿ ಅವರು ಮಾತನಾಡಿದರು.

ತುಳುನಾಡಿನ ಆಚರಣೆಗಳು ಸಂಸ್ಕೃತಿಯ ಜ್ಞಾನದ ಕಡಲಾಗಿದೆ. ಅಲ್ಲದೆ ಸಂಸ್ಕಾರಗಳ ಅಭಿವೃದ್ದಿಗೆ ಮೆಟ್ಟಿಲಾಗಿದೆ. ಪ್ರಕೃತಿಯು ವಿಕೃತಿಗೊಂಡಾಗ ಅದನ್ನು ಪ್ರಕೃತಿಯಿಂದಲೇ ಸರಿಪಡಿಸಬೇಕೆಂಬ ಜಾನಪದ ತತ್ವವನ್ನು ಆಟಿ ತಿಂಗಳು ಪ್ರತಿಪಾದಿಸುತ್ತದೆ ಎಂದರು.

ತುಳನಾಡ ಆಚರಣೆಗಳು ಜ್ಞಾನದ ಸಂಪತ್ತು-ಯಶವಂತ ರೈ 

ತುಳುನಾಡಿನ ಆಚರಣೆಗಳು ಸಂಸ್ಕಾರ ಜ್ಞಾನದ ಸಂಪತ್ತಾಗಿದೆ. ಇಲ್ಲಿ ಸಂಪ್ರದಾಯ ನಂಬಿಕೆಗಳು ಸಾಗರದಂತೆ ಅಗಾಧವಾಗಿದ್ದು, ಬದುಕಿಗೆ ಉತ್ತಮತೆಯನ್ನು ಬೋಧಿಸುತ್ತದೆ. ಮಾನವೀಯ ಮೌಲ್ಯಗಳನ್ನು ಹೊಂದಿದ ನಿರ್ಮಲ ಮನಸ್ಸು ಮತ್ತು ಆರೋಗ್ಯವಂತ ಜೀವನಕ್ಕೆ ಹಿರಿಯರು ನಡೆಸಿದ ಆಚರಣೆಗಳು ಸದಾ ಅನುಕರಣೀಯ ಎಂದು ದಿಕ್ಸೂಚಿ ಭಾಷಣ ಮಾಡಿದ ಎಸ್‌ಎಸ್‌ಪಿಯು ಕಾಲೇಜಿನ ಪ್ರೌಢಶಾಲಾ ವಿಭಾಗದ ಮುಖ್ಯಗುರು ಕೆ.ಯಶವಂತ ರೈ ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಸೋಮಶೇಖರ ನಾಯಕ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ರಾಜೇಶ್ ಮಾವಿನಕಟ್ಟೆ, ಸಾಂಸ್ಕೃತಿಕ ಸಂಘದ ಸಂಚಾಲಕಿ ರೇಖಾರಾಣಿ ಸೋಮಶೇಖರ್, ವಿದ್ಯಾರ್ಥಿ ಸಂಘದ ಸಂಚಾಲಕ ಜಯಪ್ರಕಾಶ್ ಆರ್, ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ವೇದಿಕೆಯಲ್ಲಿದ್ದರು. ಪ್ರಥಮ ಕಲಾ ವಿಭಾಗದ ಮೌಲ್ಯ ಸ್ವಾಗತಿಸಿದರು.ದ್ವಿತೀಯ ವಿಜ್ಞಾನ ವಿಭಾಗದ ಪ್ರಜ್ಞಶ್ರೀ ಕಾರ್ಯಕ್ರಮ ನಿರೂಪಿಸಿದರು.ಸಾಂಸ್ಕೃತಿಕ ತಂಡದ ಸಹಸಂಚಾಲಕ ರತ್ನಾಕರ ಸುಬ್ರಹ್ಮಣ್ಯ ವಂದಿಸಿದರು.ಉಪನ್ಯಾಸಕಿ ಶ್ರುತಿ ಯಾಲದಾಳು ಮತ್ತು ಉಪನ್ಯಾಸಕ ಶ್ರೀಧರ್ ಪುತ್ರನ್ ಸಹಕರಿಸಿದರು.

ಅನುರಣಿಸಿದ ತುಳುನಾಡ ಶೈಲಿ

ಕಾರ್ಯಕ್ರಮವನ್ನು ಹಿಂಗಾರ ಅರಳಿಸಿ, ಚೆನ್ನಮಣೆ ಆಡುವ ಮೂಲಕ ಉದ್ಘಾಟಿಸಲಾಯಿತು.ಬಾಳೆಯ ದಿಂಡಿನಿAದ ಅಲಂಕೃತ ದೀಪವನ್ನು ಬಾಳೆದಿಂಡಿನಿAದ ತಯಾರಿಸಿದ ಆರತಿಯಲ್ಲಿ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ ಉದ್ಘಾಟಿಸಿದರು. ಮುಳಿ ಮಾಡಿನ ಅಲಂಕಾರದ ವೇದಿಕೆ ಪ್ರಾಚೀನತೆಯನ್ನು ಎತ್ತಿ ಹಿಡಿಯಿತು. ತೆಂಗಿನ ಗರಿಗಳಿಂದ ತಯಾರಿಸಿದ ತಟ್ಟಿಯಿಂದ ವೇದಿಕೆಯನ್ನು ಅಲಂಕೃತಗೊಳಿಸಲಾಗಿತ್ತು. ಇಡೀ ಸಭಾಂಗಣವನ್ನು ಪ್ರಾಚೀನ ಶೈಲಿಯಲ್ಲಿ ಕಂಗೊಳಿಸುತ್ತಿತ್ತು.ಬಾಳೆ ಎಲೆ, ರಥಹೂವಿನಿಂದ ರಂಗೋಲಿ ಬಿಡಿಸಲಾಗಿತ್ತು.ಇದರ ನಡುವೆ ಕಲಶ ಇಡಲಾಗಿತ್ತು.ಇದರ ಸುತ್ತು ತುಳುನಾಡಿನಲ್ಲಿ ಆಟಿ ಸಮಯ ತಯಾರಿಸುವ ಖಾದ್ಯಗಳನ್ನು ಜೋಡಿಸಲಾಗಿತ್ತು.ಬಳಿಕ ತುಳುನಾಡ ಜನಪದೀಯ ನೃತ್ಯಗಳು ಪ್ರದರ್ಶಿತವಾಯಿತು.ಈ ನಡುವೆ ವಿದ್ಯಾರ್ಥಿ ಕಲಾವಿದ ಪೃಥ್ವಿನ್ ಆಟಿ ಆಚರಣೆಯ ಮಹತ್ವದ ಸಾರುವ ಕಲಾತ್ಮಕ ಚಿತ್ರ ಬಿಡಿಸಿದರು.

More from the blog

ಹಿತೈಷಿ ತರಬೇತಿ ಕೇಂದ್ರದ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಫಲಿತಾಂಶದೊಂದಿಗೆ ತೇರ್ಗಡೆ

2023-24ನೇ ಸಾಲಿನ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಪಾಣೆಮಂಗಳೂರು, ನರಿಕೊಂಬುವಿನಲ್ಲಿರುವ ಹಿತೈಷಿ ತರಬೇತಿ ಕೇಂದ್ರದ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ. ಕು.ಕೀರ್ತನ ಶೇ.95.6% ಅಂಕಗಳೊಂದಿಗೆ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ ಎಂದು ಸಂಸ್ಥೆಯ ಪ್ರಕಟನೆಯಲ್ಲಿ ತಿಳಿಸಲಾಗಿದೆ. 2024-25ನೇ...

ಬಂಟ್ವಾಳದ ಉಳಿ ಗ್ರಾಮದಲ್ಲಿ ಮತದಾರರ ಮನೆಗೆ ಭೇಟಿ ನೀಡಿ ಮತಯಾಚನೆ ನಡೆಸಿದ ಶಾಸಕ ರಾಜೇಶ್ ನಾಯ್ಕ್

ಲೋಕ ಸಭಾ ಚುನಾವಣೆಯ ಹಿನ್ನಲೆಯಲ್ಲಿ ಕ್ಯಾ.ಬ್ರಿಜೇಶ್ ಚೌಟ ಅವರ ಗೆಲುವಿಗಾಗಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಗ್ರಾಮ,ಮನೆ,ಮನ ಅಭಿಯಾನದ ಅಂಗವಾಗಿ ಬಂಟ್ವಾಳದ ಉಳಿ ಗ್ರಾಮದಲ್ಲಿ ಮತದಾರರ ಮನೆಗೆ ಬೇಟಿ ನೀಡಿ...

ವಿಟ್ಲ ಕೇಂದ್ರ ಜುಮಾ ಮಸೀದಿ, ಈದುಲ್ ಫಿತರ್

ವಿಟ್ಲ; ವಿಟ್ಲ ಕೇಂದ್ರ ಜುಮಾ ಮಸೀದಿಯಲ್ಲಿ ಈದುಲ್ ಫಿತರ್ ನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಖತೀಬ್ ಮಹಮ್ಮದ್ ನಸೀಹ್ ದಾರಿಮಿ ಉಸ್ತಾದ್ ರವರು ಖುತುಬಾ ಹಾಗೂ ಈದ್ ನಮಾಝ್ ನಿರ್ವಹಿಸಿದರು. ಈದ್ ಸಂಸೇಶ ನೀಡಿದ ಖತೀಬರು "...

ನೋಟ ಮತದಾನ ಅಭಿಯಾನ ಮಾಡುವವರ ವಿರುದ್ಧ ಕಾನೂನು ಕ್ರಮಕ್ಕೆ ತಾ.ಪಂ.ಸದಸ್ಯ ಪ್ರಭಾಕರ್ ಪ್ರಭು ಒತ್ತಾಯ…

ನೋಟ (NOTA) ಮತದಾನ ಅಭಿಯಾನ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮಾಜಿ ತಾ.ಪಂ‌.ಸದಸ್ಯ ಪ್ರಭಾಕರ್ ಪ್ರಭು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೆಲವೊಂದು ವ್ಯಕ್ತಿಗಳು ಮತ್ತು ಸಂಘಟನೆಗಳು...