Tuesday, October 31, 2023

ಶ್ರೀಗಳಾದ ವಿದ್ಯಾಪ್ರಸನ್ನ ತೀರ್ಥ ಶ್ರೀ ಪಾದರ 27ನೇ ಚಾತುರ್ಮಾಸ್ಯ: ಆ.13 ರಿಂದ ಆ.21 ರ ವರೆಗೆ ಸಾಂಸ್ಕೃತಿಕ ವೈಭವ -2023

Must read

ಸುಬ್ರಹ್ಮಣ್ಯ: ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠ ಇದರ ಶ್ರೀಗಳಾದ ವಿದ್ಯಾಪ್ರಸನ್ನ ತೀರ್ಥ ಶ್ರೀ ಪಾದರ 27ನೇ ಚಾತುರ್ಮಾಸ್ಯ ನಡೆಯುತಿದ್ದು ಈ ವರ್ಷದ ಚಾತುರ್ಮಾಸ್ಯ ಅಧಿಕ ಮಾಸದ ಚಾತುರ್ಮಾಸ್ಯ ಆಗಿರುತ್ತದೆ. ಶ್ರೀಗಳ ಚಾತುರ್ಮಾಸ್ಯ ಪ್ರಯುಕ್ತ ಆ.13 ರಿಂದ ಆ.21 ರ ವರೆಗೆ ಮಠದ ನವಗ್ರಹ ಮಂಟಪದಲ್ಲಿ ಸಾಂಸ್ಕೃತಿಕ ವೈಭವ -2023 ಕಾರ್ಯಕ್ರಮ ನಡೆಯಲಿದೆ.

ಆ.13 ರಂದು ಸಂಜೆ 4.00 ಕ್ಕೆ ಶ್ರೀಗಳಿಂದ ದೀಪೋಜ್ವಲನ ನಡೆಯಲಿದೆ. ಬಳಿಕ ಚಾತುರ್ಮಾಸ್ಯ ವ್ತತದ ಕಟ್ಟುಪಾಡು ಹಾಗೂ ಅಧಿಕ ಮಾಸದ ಮಹತ್ವ ಬಗ್ಗೆ ಶ್ರೀಗಳಿಂದ ಆಶೀರ್ವಚನ ನಡೆಯಲಿದೆ. ಬಳಿಕ ಧೀಶಕ್ತಿ ಮಹಿಳಾ ಯಕ್ಷ ಬಳಗ ತೆಂಕಿಲ ಪುತ್ತೂರು ಇವರಿಂದ “ಭೂಮಿಂಜಯ” ಯಕ್ಷಗಾನ ತಾಳಮದ್ದಳೆ ನಡೆಯಲಿದೆ.

ಆ. 14 ಸಂಜೆ ಗಂಟೆ 5-00 ರಿಂದ ‘ಆಧ್ಯಾತ್ಮ ಚಿಂತನೆ’ ಕಾರ್ಯಕ್ರಮ ಶ್ರೀ ಶ್ರೀಗಳವರಿಂದ ನಡೆಯಲಿದೆ.

ಸಂಜೆ ಗಂಟೆ 6-00 ರಿಂದ ಆಕಾಶವಾಣಿ ಕಲಾವಿದ ಕೆ.ವಿ.ರಮಣ್ ಮಂಗಳೂರು ಮತ್ತು ವಿದುಷಿ ಅಯನಾ ವಿ.ರಮಣ್ ಮೂಡಬಿದಿರೆ ಇವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ. ಆ.15 ರ ಸಂಜೆ ಗಂಟೆ 4-00 ರಿಂದ ಸೌರಭ ಕೆ.ಭಟ್ ಕಡೆಶಿವಾಲಯ ಮತ್ತು ಬಳಗದಿಂದ ಲಘು ಶಾಸ್ತ್ರೀಯ ಸಂಗೀತ ಮತ್ತು ದಾಸರ ಪದಗಳ ಗಾಯನ

ನಡೆಯಲಿದೆ. ಸಂಜೆ ಗಂಟೆ 5-00 ರಿಂದ ನಾವು ನಿಜವಾಗಿಯೂ ಸ್ವತಂತ್ರರೇ? ಎಂಬ ವಿಷಯದ ಬಗ್ಗೆ ಚಿಂತನ ಮಂಥನ ನಡೆಯಲಿದೆ.

ಡಾ.ಎಚ್.ಮಾಧವ ಭಟ್, ಡಾ.ಶ್ರೀಶಕುಮಾರ್, ಪ್ರೊlಸುಬ್ಬಪ್ಪ ಕೈಕಂಬ, ರಾಕೇಶ್‌ ಕುಮಾರ್ ಕಮ್ಮಜೆ, ಪ್ರಕಾಶ ಮೂಡಿತ್ತಾಯ ಭಾಗವಹಿಸಲಿದ್ದಾರೆ. ಆ. 16 ರ ಸಂಜೆ 5-00 ರಿಂದ ವಿದ್ಯಾಪ್ರಸನ್ನ ಶ್ರೀಗಳವರಿಂದ ಪ್ರವಚನ ನಡೆಯಲಿದೆ. ಬಳಿಕ ವಿದ್ವಾನ್ ಕಾಂಚನ ಈಶ್ವರ ಭಟ್‌ರವರ ಶಿಷ್ಯೆಯರಾದ ವಿದುಷಿ ಶಿಲ್ಪಾ ಸಿ.ಎಚ್ ಹಾಗೂ ಕುl ಶ್ರೀಲಕ್ಷ್ಮೀ ದೇವಮಣಿ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ನಡೆಯಲಿದೆ. ಆ.17 ರ ಸಂಜೆ ಗಂಟೆ 5 ರಿಂದ ಉಪನ್ಯಾಾಸ ಮಾಲಿಕೆ ಆರಂಭವಾಗಲಿದೆ.

ರವಿಶಂಕರ ನಲ್ಲೂರಾಯ “ಸಂಸ್ಕಾರ” ವಿಷಯದ ಬಗ್ಗೆ ಹಾಗೂ ಸುಹಾಸ್ ಉಪಾಧ್ಯಾಯ ಅವರಿಂದ “ನಂಬಿಕೆ” ಎಂಬ ವಿಷಯದ ಬಗ್ಗೆ ಉಪನ್ಯಾಸ ನಡೆಯಲಿದೆ.

ಬಳಿಕ ಶಂಕರನಾರಾಯಣ ಅಡಿಗ ಅವರಿಂದ ಹರಿಕಥೆ

ನಡೆಯಲಿದೆ. ಆ. 18 ರಂದು ಸಂಜೆ 5-00ರಿಂದ ವಿದ್ಯಾಪ್ರಸನ್ನ ಶ್ರೀಗಳವರಿಂದ ಪ್ರವಚನ ನಡೆಯಲಿದೆ. ಬಳಿಕ ರವೀಂದ್ರ ಪ್ರಭು ಮುಲ್ಕಿ ಅವರಿಂದ ದಾಸರವಾಣಿ ನಡೆಯಲಿದೆ. ಆ. 19 ರ ಸಂಜೆ 5 ರಿಂದ ಪೌರಾಣಿಕ ಯಕ್ಷ ಕುಸುಮ ಚಾರ ಪ್ರದೀಪ ಹೆಬ್ಬಾರ್ ವಿರಚಿತ ಯಕ್ಷಗಾನ ತಾಳಮದ್ದಳೆ “ಉಲೂಪಿ ನಂದನ” ನಡೆಯಲಿದೆ.

ಆ. 20 ರ ಸಂಜೆ 4 ರಿಂದ ಯಕ್ಷಗಾನ ತಾಳಮದ್ದಳೆ “ವಾಲಿ ವಧೆ” ನಡೆಯಲಿದೆ.ಆ.21 ರ ಸಂಜೆ ಗಂಟೆ 5 ರಿಂದ ಸಾಂಸ್ಕೃತಿಕ ವೈಭವ ಸಮಾರೋಪ ನಡೆಯಲಿದೆ. ಶ್ರೀ ಮಠದ ದಿವಾನರು, ವೈದಿಕ ವೃಂದ ಹಾಗೂ ಶ್ರೀ ಮಠದ ಅಭಿಮಾನಿಗಳಿಂದ ವಿದ್ಯಾಪ್ರಸನ್ನ ಶ್ರೀಗಳವರಿಗೆ ಗೌರವಾರ್ಪಣೆ ನಡೆದು ಶ್ರೀಗಳವರಿಂದ ಆಶೀರ್ವಚನ ನಡೆಯಲಿದೆ. ಬಳಿಕ ಖ್ಯಾತ ಗಾಯಕರಾದ ನಾಗರಾಜ ಕಿಣಿ ಹಾಗೂ ನಮೃತಾ ಕಿಣಿಯವರಿಂದ ” ದಾಸವಾಣಿ” ನಡೆಯಲಿದೆ.

More articles

Latest article